ಪ್ರಶಾಂತ್ ಕಿಶೋರ್ ಪ್ಲಾನ್ ಟುಸ್, ದೀದಿಗೆ ಬಾರಿ ಮುಖಭಂಗ ! ಚಾಣಕ್ಯನ ರಣತಂತ್ರ ಗಳು ಉಲ್ಟಾ ಹೊಡೆಯುತ್ತಿರುವುದು ಹೇಗೆ ಗೊತ್ತಾ??

ಪ್ರಶಾಂತ್ ಕಿಶೋರ್ ಪ್ಲಾನ್ ಟುಸ್, ದೀದಿಗೆ ಬಾರಿ ಮುಖಭಂಗ ! ಚಾಣಕ್ಯನ ರಣತಂತ್ರ ಗಳು ಉಲ್ಟಾ ಹೊಡೆಯುತ್ತಿರುವುದು ಹೇಗೆ ಗೊತ್ತಾ??

ತನ್ನದೇ ಆದ ರಾಜಕೀಯ ತಂತ್ರಗಾರಿಕಾ ಕಂಪನಿ ಹೊಂದಿರುವ ಪ್ರಶಾಂತ್ ಕಿಶೋರ್ ಅವರು ಇತ್ತೀಚೆಗೆ ಬಾರಿ ಫೇಮಸ್ ಆಗುತ್ತಿದ್ದಾರೆ. ತನ್ನದೇ ಆದ ರಾಜಕೀಯ ತಂತ್ರಗಳನ್ನು ಹೆಣೆದು ವಿರೋಧಿಗಳನ್ನು ಸೋಲಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚಿಗಷ್ಟೇ ಇವರ ರಾಜಕೀಯ ತಂತ್ರಗಾರಿಕೆಯಿಂದ ಆಂಧ್ರಪ್ರದೇಶದಲ್ಲಿ ಜಗಮೋಹನ್ ರೆಡ್ಡಿ ರವರು ಅಧಿಕಾರಕ್ಕೇರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಪ್ರಶಾಂತ್ ಕಿಶೋರ್ ಅವರು ಈ ಹಿಂದೆ ಹಲವಾರು ಬಾರಿ ಸೋಲನ್ನು ಕಂಡಿದ್ದಾರೆ ಎಂಬುದನ್ನು ಪಕ್ಷಿಮ ಬಂಗಾಳದ ಟಿಎಂಸಿ ಕಾರ್ಯಕರ್ತರು ಮರೆತಂತೆ ಕಾಣುತ್ತಿದೆ. ಪ್ರಶಾಂತ್ ಕಿಶೋರ್ ಅವರು ಮಮತಾ ಬ್ಯಾನರ್ಜಿ ರವರ ಟಿಎಂಸಿ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಮುನ್ನಡೆಸಿ ವಿರೋಧ ಪಕ್ಷಗಳ ವಿರುದ್ಧ ತಂತ್ರಗಳನ್ನು ಎಣೆಯಲಿದ್ದಾರೆ ಎಂದು ತಿಳಿದ ತಕ್ಷಣ ಮುಂದಿನ ಚುನಾವಣೆಯಲ್ಲಿ ಗೆದ್ದಷ್ಟೇ ಸಂಭ್ರಮಿಸಿ ಟಿಎಂಸಿ ಕಾರ್ಯಕರ್ತರು ಪಕ್ಷಿಮ ಬಂಗಾಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

ಆದರೆ ಇದೀಗ ಪ್ರಶಾಂತ್ ಕಿಶೋರ್ ಅವರು ಮಾಡಿರುವ ಎಲ್ಲಾ ಯೋಜನೆಗಳು ಉಲ್ಟಾ ಹೊಡೆಯುತ್ತಿವೆ, ಆಂಧ್ರದಲ್ಲಿ ಅದೇಗೋ ಜಗಮೋಹನ್ ರೆಡ್ಡಿ ರವರ ತಂದೆಯ ವರ್ಚಸ್ಸನ್ನು ಬಳಸಿಕೊಂಡು ಇಡೀ ರಾಜ್ಯದಲ್ಲಿ ಪಾದಯಾತ್ರೆಯನ್ನು ಮಾಡಿ ಜಗಮೋಹನ್ ರೆಡ್ಡಿ ರವರು ಗೆದ್ದಿದ್ದರು, ಇದೇ ರೀತಿಯ ತಂತ್ರಗಾರಿಕೆಯನ್ನು ಇದೀಗ ಪಕ್ಷದ ಬಂಗಾಳದಲ್ಲಿ ಪ್ರಯೋಗ ಮಾಡಲು ಹೊರಟಿರುವ ಪ್ರಶಾಂತ್ ಕಿಶೋರ್ ಅವರಿಗೆ ಸಹ ಆಘಾತ ಎದುರಾಗಿದೆ. ಇಡೀ ಭಾರತದಲ್ಲಿ ಭ್ರಷ್ಟ ಪಕ್ಷಗಳ ಮೊದಲನೇ ಸಾಲಿನಲ್ಲಿ ಕಂಡುಬರುವ ಟಿಎಂಸಿ ಪಕ್ಷವನ್ನು ಮುನ್ನಡೆಸಲು ಒಪ್ಪಿಕೊಂಡು ಪ್ರಶಾಂತ್ ಕಿಶೋರ್ ಅವರು ತಪ್ಪು ಮಾಡಿದ್ದಾರೆ ಎನ್ನಲಾಗುತ್ತಿದೆ, ಶಾರದಾ ಗುಂಪು ಆರ್ಥಿಕ ಹಗರಣ, ಸೇರಿದಂತೆ ಹಲವಾರು ಬಾರಿ ಟಿ ಮ್ ಸಿ ಪಕ್ಷದ ನೈಜ ಮುಖ ಬಟಾ ಬಯಲಾಗಿದೆ.

ಹೀಗಿರುವಾಗ  ಪಕ್ಷಿಮ ಬಂಗಾಳದಲ್ಲಿ ಪ್ರಶಾಂತ್ ಕಿಶೋರ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಟಿಎಂಸಿ ಪಕ್ಷವನ್ನು ಪ್ರತಿ ಹಳ್ಳಿಗಳಲ್ಲೂ ಬಲಪಡಿಸಲು, ನೂರು ದಿನಗಳಲ್ಲಿ ಟಿಎಂಸಿ ಪಕ್ಷದ ಹಿರಿಯ ನಾಯಕರು ಸೇರಿದಂತೆ ಹಲವಾರು ಮಂತ್ರಿಗಳು ಹಾಗೂ ಕಾರ್ಯಕರ್ತರು 10,000 ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸುವಂತೆ ಆದೇಶ ನೀಡಿದರು. ಪ್ರಶಾಂತ್ ಕಿಶೋರ್ ಅವರ ಮಾತನ್ನು ಚಾಚೂತಪ್ಪದೆ ಪಾಲಿಸಲು ಮುಂದಾದ ಮಮತಾ ಬ್ಯಾನರ್ಜಿ ರವರು ತಮ್ಮ ಕಾರ್ಯಕರ್ತರಿಗೆ ಆದೇಶವನ್ನು ಹೊರಡಿಸಿ ಎಲ್ಲ ಮಂತ್ರಿಗಳಿಗೂ ಸೂಚನೆ ನೀಡಿದ್ದರು. ಆದರೆ ಇದೀಗ ಇದೇ ವಿಚಾರ ಮಮತಾ ಬ್ಯಾನರ್ಜಿಯವರಿಗೆ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ, ಇದರಿಂದ ಅಳಿದುಳಿದಿರುವ ಮತಗಳನ್ನು ಸಹ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಮಮತಾ ಬ್ಯಾನರ್ಜಿ. ಹೌದು, ಪಕ್ಷದ ಕಾರ್ಯಕರ್ತರು ಗ್ರಾಮಗಳಿಗೆ ಭೇಟಿ ನೀಡಿದಾಗ ಬಹಿರಂಗ ಸಮಾರಂಭಗಳನ್ನು ಏರ್ಪಡಿಸಿ ಸಾಮಾನ್ಯ ಜನರಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ.

ಇದೇ ಸಮಯದಲ್ಲಿ ಸಾಮಾನ್ಯ ಜನರು ಸಹ ನಮ್ಮ ಹಣ ನೀವು ಲೂಟಿ ಹೊಡೆದಿದ್ದೀರಾ, ಇಷ್ಟು ಹಣ ನಿಮಗೆ ಹೇಗೆ ಬಂದಿತ್ತು, ಸ್ಥಳೀಯ ರಾಜಕೀಯ ನಾಯಕರು ಹಣ, ದುರಹಂಕಾರ ಮತ್ತು ಅಧಿಕಾರದ ದುರುಪಯೋಗ ಪಡಿಸಿಕೊಂಡು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈಗಾಗಲೇ ಹಲವರ ಮೇಲೆ ಭ್ರಷ್ಟಾಚಾರ ಆರೋಪಗಳು ಸಾಬೀತಾಗಿವೆ, ನಿಮ್ಮ ಪಕ್ಷದಲ್ಲಿ ಹಲವಾರು ಭ್ರಷ್ಟ ಹಾಗೂ ಸೊಕ್ಕಿನ ನಾಯಕರು ಇದ್ದಾರೆ, ಇವರನ್ನು ಈಗಲೂ ಸಹ ಯಾವ ಕಾರಣಕ್ಕೆ ಪಕ್ಷದಲ್ಲಿ ಅವರನ್ನು ಉಳಿಸಿಕೊಂಡಿದ್ದೀರೀ? ಈ ರೀತಿಯ ಪ್ರಶ್ನೆಗಳು ಸೇರಿದಂತೆ ಹಲವಾರು ಅತಿದೊಡ್ಡ ಹಗರಣಗಳನ್ನು ಹೊರಹಾಕಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದರಿಂದ ನಾಯಕರಿಗೆ ಭಾರಿ ಮುಜುಗರ ಉಂಟಾಗಿದೆ. ಈ ಮಾತನ್ನು ಸ್ವತಹ ಟಿಎಂಸಿ ಪಕ್ಷದ ಹಿರಿಯ ಮುಖಂಡರೊಬ್ಬರು ಬಹಿರಂಗವಾಗಿಯೂ ಒಪ್ಪಿಕೊಂಡಿದ್ದಾರೆ. ಈ ರೀತಿಯ ಹಲವಾರು ಘಟನೆಗಳಿಂದ ಟಿಎಂಸಿ ಪಕ್ಷದ ನಾಯಕರಿಗೆ ಬಾರಿ ಮುಜುಗರ ಉಂಟಾಗುತ್ತಿದ್ದು, ಸತ್ಯ ಎಲ್ಲರ ಮುಂದೆ ಬಹಿರಂಗ ಗೊಳ್ಳುತ್ತಿದೆ.