ಟಿಪ್ಪು ಜಯಂತಿ ನಿಷೇಧದ ಬಗ್ಗೆ ತೇಜಸ್ವಿ ಸೂರ್ಯ ಹೇಳಿದ್ದೇನು ಗೊತ್ತಾ??

ಟಿಪ್ಪು ಜಯಂತಿ ನಿಷೇಧದ ಬಗ್ಗೆ ತೇಜಸ್ವಿ ಸೂರ್ಯ ಹೇಳಿದ್ದೇನು ಗೊತ್ತಾ??

ಇಂದು ಕರ್ನಾಟಕ ರಾಜ್ಯದಲ್ಲಿ ಪ್ರತಿವರ್ಷವೂ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದ ಟಿಪ್ಪು ಜಯಂತಿ ಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ರದ್ದು ಮಾಡಿ, ಕೋಟ್ಯಂತರ ಜನರಿಗೆ ಬಾರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಮೊದಲಿನಿಂದಲೂ ಕರ್ನಾಟಕ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿತ್ತು, ಬಹುತೇಕ ಜನರು ಟಿಪ್ಪು ಜಯಂತಿ ರದ್ದು ಮಾಡುವಂತೆ ಸರ್ಕಾರದ ಮೊರೆ ಹೋಗಿದ್ದರು. ಸರ್ಕಾರ ಯಾರ ಕೂಗು ಕೇಳಿಸಿಕೊಂಡು ಇರಲಿಲ್ಲ, ಆದರೆ ಇದೀಗ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿಕೊಂಡ ಕೆಲವೇ ದಿನಗಳಲ್ಲಿ ಬಿ ಎಸ್ ಯಡಿಯೂರಪ್ಪ ನವರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಇದೀಗ ಎಲ್ಲೆಡೆ ಈ ನಿರ್ಧಾರದ ಕುರಿತು ನಾಯಕರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ತೇಜಸ್ವಿ ಸೂರ್ಯ  ಸಹ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಇಡೀ ದೇಶದ ಗಮನ ಸೆಳೆದಿರುವ ಕರ್ನಾಟಕ ರಾಜ್ಯದ ಯುವ ಸಂಸದ ತೇಜಸ್ವಿ ಸೂರ್ಯ ರವರು ಪ್ರತಿಕ್ರಿಯೆ ನೀಡಿದ್ದು, ಮೊದಲಿನಿಂದಲೂ ಟಿಪ್ಪು ಜಯಂತಿಗೆ ವಿರುದ್ಧವಾಗಿದ್ದ ತೇಜಸ್ವಿ ಸೂರ್ಯ ರವರ ಅಭಿಪ್ರಾಯ ಹೀಗಿದೆ. ಸಾವಿರಾರು ಹಿಂದುಗಳ ಮಾರಣ ಹೋಮಕ್ಕೆ ಕಾರಣವಾದ ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸುವುದು ತಮ್ಮ ತಮ್ಮ ಕರ್ತವ್ಯ ಎಂದು ಹಿಂದಿನ ಸರ್ಕಾರಗಳು ಅಂದುಕೊಂಡಿದ್ದವು, ಆದರೆ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದನ್ನು ತಪ್ಪು ಎಂದು ತೋರಿಸಿ ಜಯಂತಿಯನ್ನು ರದ್ದು ಮಾಡುವ ಮೂಲಕ ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸಂಸದೆ ಶೋಭಾ ಕರಂದ್ಲಾಜೆ ರವರು ಪ್ರತಿಕ್ರಿಯೆ ನೀಡಿ ಸಾವಿರಾರು ಹಿಂದುಗಳ ಧ್ವನಿಯನ್ನು ಆಲಿಸಿ ಟಿಪ್ಪು ಜಯಂತಿ ಯನ್ನು ರದ್ದು ಮಾಡಿದ್ದಕ್ಕಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು, ಕೋಮುವಾದಿ ಕಾಂಗ್ರೆಸ್ ಈ ಕೊಲೆಗಾರನ ಜಯಂತಿ ಆಚರಿಸುವುದರಲ್ಲಿ ತಲ್ಲೀನವಾಗಿತ್ತು. ಆದರೆ ಬಿ.ಎಸ್.ಯಡಿಯೂರಪ್ಪನವರು ತಾವು ನೀಡಿದ ಮಾತನ್ನು ಉಳಿಸಿಕೊಂಡರು ಎಂದಿದ್ದಾರೆ .