ಭಾರತಕ್ಕೆ ಮತ್ತೊಂದು ಐತಿಹಾಸಿಕ ಉಡುಗೊರೆ ನೀಡಿದ ನರೇಂದ್ರ ಮೋದಿ ಸರ್ಕಾರ !

ಭಾರತಕ್ಕೆ ಮತ್ತೊಂದು ಐತಿಹಾಸಿಕ ಉಡುಗೊರೆ ನೀಡಿದ ನರೇಂದ್ರ ಮೋದಿ ಸರ್ಕಾರ !

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಹಲವಾರು ದಿಟ್ಟ ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೂಲಕ ಜನರ ಮನ ಗೆದ್ದಿದ್ದಾರೆ. ನರೇಂದ್ರ ಮೋದಿ ರವರು ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಾಗ ಜನರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ ಎಂಬ ಮಾತನ್ನು ಹೇಳಿದ್ದರು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಕಳೆದ ಲೋಕಸಭಾ ಚುನಾವಣೆ ಫಲಿತಾಂಶ ಉತ್ತರ ನೀಡಿತ್ತು, ಅದರಲ್ಲಿಯೂ ಮುಸ್ಲಿಂ ಹೆಣ್ಣುಮಕ್ಕಳ ಮನ ಗೆದ್ದಿದ್ದ ನರೇಂದ್ರ ಮೋದಿ ರವರು ಶೇಕಡ 30ಕ್ಕೂ ಹೆಚ್ಚು ಮುಸ್ಲಿಮರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಮುಸ್ಲಿಂ ಸಹೋದರಿಯರ ಏಳಿಗೆಗೆ  ಹಗಲಿರುಳು ಶ್ರಮಿಸುತ್ತಿರುವ ನರೇಂದ್ರ ಮೋದಿ ರವರು, ವಿದ್ಯಾರ್ಥಿ ವೇತನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇನ್ನು ಇದೀಗ ಇಡೀ ದೇಶವೇ ಕಾದುಕುಳಿತಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ತ್ರಿವಳಿ ತಲಾಕ್ ನಿಷೇಧ ಮಸೂದೆ ಇಂದು ಅಧಿಕೃತವಾಗಿ ಅಂಗೀಕಾರವಾಗಿದೆ.

ಇಷ್ಟು ದಿವಸ ನರೇಂದ್ರ ಮೋದಿ ಲೋಕಸಭೆ ಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದರೂ ಸಹ ರಾಜ್ಯಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತವಿಲ್ಲದ ಕಾರಣ ಮಸೂದೆ ಅಂಗೀಕಾರ ಆಗುತ್ತಿರಲಿಲ್ಲ. ಆದರೆ ಇಂದು ತ್ರಿವಳಿ ತಲಾಕ್ ನಿಷೇಧ ಮಸೂದೆ ಅಂಗೀಕಾರ ಮಾಡುವ ಸಮಯ ಬಂದಾಗ ಎಐಎಡಿಎಂಕೆ, ಜೆಡಿಯು ಸದಸ್ಯರು ಸಭಾತ್ಯಾಗ ಮಾಡುವ ಮೂಲಕ ಮಸೂದೆಯನ್ನು ಮತಕ್ಕೆ ಹಾಕಿದಾಗ ಗೈರಾದರು. ಇದರ ಲಾಭ ಪಡೆದುಕೊಂಡ ಬಿಜೆಪಿ ಪಕ್ಷವು ಒಟ್ಟು ಇದ್ದ 183 ಮತಗಳಲ್ಲಿ 99 ಮತಗಳನ್ನು ಪಡೆದುಕೊಂಡಿತು, ಇನ್ನುಳಿದಂತೆ ಮಸೂದೆಯ ವಿರುದ್ಧ 84 ಮತಗಳು ಬಿದ್ದವು. ಈ ಮೂಲಕ ನರೇಂದ್ರ ಮೋದಿ ಅವರ ನೇತೃತ್ವ ಸರ್ಕಾರದ ಮಹತ್ವಕಾಂಕ್ಷಿ ಮಸೂದೆ ಕೊನೆಗೂ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ಈ ಮಸೂದೆ ಪ್ರಕಾರ ಇನ್ನು ಮುಂದೆ ಮುಸ್ಲಿಂ ಸಹೋದರಿಯರಿಗೆ ತ್ರಿವಳಿ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಈ ಕಾನೂನಿನಲ್ಲಿ ಅವಕಾಶವಿದೆ.