ಅಮೆರಿಕ ಡ್ರೋನ್ ಖರೀದಿಗೆ ಭಾರತದ ಹಿಂದೇಟು ! ಯಾಕೆ ಗೊತ್ತಾ??

ಈಗಾಗಲೇ ಅಮೆರಿಕ ದೇಶವು ಭಾರತ ಹಾಗೂ ರಷ್ಯಾ ನಡುವಿನ ರಕ್ಷಣ ಒಪ್ಪಂದಗಳಿಂದ ಕೆರಳಿದೆ. ಅಮೆರಿಕ ಅಧ್ಯಕ್ಷರಾದ ಟ್ರಂಪ್ ರವರು ಭಾರತದ ವಿರುದ್ಧ ಕಿಡಿಕಾರುತ್ತಾ, ರಷ್ಯಾ ಹಾಗೂ ನಿಮ್ಮ ನಡುವಿನ ರಕ್ಷಣಾ ಒಪ್ಪಂದಗಳಿಗೆ ಈ ಕೂಡಲೇ ಬ್ರೇಕ್ ಹಾಕಿ ಹಾಗೂ ಬಲಿಷ್ಠ ಎಸ್ -400 ಕ್ಷಿಪಣಿಗಳ ಒಪ್ಪಂದವನ್ನು ವಾಪಸ್ಸು ಪಡೆದುಕೊಳ್ಳಿ ಎಂದು ಕಿಡಿಕಾರಿದ್ದಾರೆ. ಆದರೆ ನರೇಂದ್ರ ಮೋದಿ ನೇತೃತ್ವದ ಭಾರತ ದೇಶವು ಯಾವುದೇ ಕಾರಣಕ್ಕೂ ರಷ್ಯ ಜೊತೆಗಿನ ಸ್ನೇಹ ಸಂಬಂಧವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ, ವಿಶ್ವದಲ್ಲಿಯೇ ಬಲಾಡ್ಯ ತಂತ್ರಜ್ಞಾನವನ್ನು ನಾವು ರಷ್ಯಾ ದೇಶದಿಂದ ಆಮದು ಕೊಂಡು ತೀರುತ್ತೇವೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ದೇಶದ ಜೊತೆಗೆ ಇನ್ನೇನು ಸಹಿ ಮಾಡಬೇಕು ಎಂದುಕೊಂಡಿದ್ದ ಒಪ್ಪಂದ ಮುರಿದು ಬೀಳುವ ಸಾಧ್ಯತೆಗಳು ಹೆಚ್ಚಾಗಿದ್ದು ಇದರಿಂದ ಅಮೆರಿಕಾ ದೇಶವು ಮತ್ತಷ್ಟು ಕೆರಳುವ ಸಾಧ್ಯತೆಗಳು ಹೆಚ್ಚಾಗಿವೆ. ಯಾಕೆ ಗೊತ್ತಾ?? ತಿಳಿಯಲು ಕೆಳಗಡೆ ಓದಿ.

ಇತ್ತೀಚೆಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಭಾರತ ದೇಶವು ಅಮೆರಿಕ ದೇಶದಿಂದ ಶತ್ರುಗಳಿಗೆ ಕಾಣಿಸದ ಎತ್ತರಕ್ಕೆ ಹಾರಿ, ಗೂಢಚಾರಿಕೆ ಮಾಡುವ ಸಶಸ್ತ್ರ ಡ್ರೋನ್ ಗಳನ್ನು ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಿತ್ತು. ಆದರೆ ಇತ್ತೀಚೆಗೆ ಅಮೆರಿಕ ಹಾಗೂ ಇರಾನ್ ನಡುವೆ ಉಂಟಾದ ತಿಕ್ಕಾಟದಿಂದ ಇರಾನ್ ದೇಶವು ಅಮೇರಿಕಾದ ಅತ್ಯಾಧುನಿಕ ಬೇಹುಗಾರಿಕೆ ಶಸ್ತ್ರಸಜ್ಜಿತ ಡ್ರೋನ್ ನನ್ನು ಬಹಳ ಸುಲಭವಾಗಿ ಹೊಡೆದುರುಳಿಸಿದೆ. ತುರ್ತು ಸಂದರ್ಭದಲ್ಲಿ ಪಾಕಿಸ್ತಾನ ದೇಶದ ಸದ್ದಡಗಿಸಲು ಆಮದು ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಡ್ರೋನ್  ನನ್ನು ಇರಾನ್ ದೇಶವು ಬಹಳ ಸುಲಭವಾಗಿ ಹೊಡೆದುರುಳಿಸಿರುವ ಕಾರಣ ಇದರ ಸಾಮರ್ಥ್ಯದ ಬಗ್ಗೆ ಇದೀಗ ಅನುಮಾನ ವ್ಯಕ್ತವಾಗುತ್ತಿದೆ. ಆದ ಕಾರಣದಿಂದ ಇದೀಗ ಭಾರತ ಹಾಗೂ ಅಮೆರಿಕ ನಡುವೆ ಏರ್ಪಡೆ ಬೇಕಿದ್ದ ಒಪ್ಪಂದ ಮುರಿದು ಬೀಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಇದಕ್ಕೆ ಅಮೇರಿಕಾ ದೇಶದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Post Author: Ravi Yadav