ಕುರಾನ್ ಹಂಚಿಕೆ ಪ್ರಕರಣದ ಯುವತಿಯ ಪರವಾಗಿ ಸ್ವಾಮಿ ಅಖಾಡಕ್ಕಿಳಿದ 20 ನಿಮಿಷಗಳ ನಂತರ ನಡೆದಿದ್ದೇನು ಗೊತ್ತಾ??

ಕುರಾನ್ ಹಂಚಿಕೆ ಪ್ರಕರಣದ ಯುವತಿಯ ಪರವಾಗಿ ಸ್ವಾಮಿ ಅಖಾಡಕ್ಕಿಳಿದ 20 ನಿಮಿಷಗಳ ನಂತರ ನಡೆದಿದ್ದೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಥಮ ದರ್ಜೆ ನ್ಯಾಯಾಲಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಯುವತಿಯು ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್ ಮಾಡಿದ್ದಾರೆ ಎಂಬ ಕಾರಣಕ್ಕೆ ಜಾಮೀನು ನೀಡಲು ಮುಸ್ಲಿಮರ ಗ್ರಂಥವಾದ ಕುರಾನ್ ಅನ್ನು ಪೊಲೀಸರ ಸಮ್ಮುಖದಲ್ಲಿ ಗ್ರಂಥಾಲಯಗಳಿಗೆ ಹಾಗೂ ದೂರು ನೀಡಿದ ಮುಸ್ಲಿಂ ಸಮುದಾಯಕ್ಕೆ ವಿತರಿಸಲು ಆದೇಶ ಹೊರಡಿಸಿ ಇಡೀ ದೇಶದಲ್ಲಿ ಹೊಸ ಬಿರುಗಾಳಿಯನ್ನು ಎಬ್ಬಿಸಿತ್ತು. ಆದರೆ ಹಿಂದೂ ಯುವತಿಯು ಇದಕ್ಕೆ ತಕ್ಕ ತಿರುಗೇಟು ನೀಡಿ ಯಾವುದೇ ಕಾರಣಕ್ಕೂ ಪ್ರತಿಗಳನ್ನು ಹಂಚುವುದಿಲ್ಲ ಎಂದು ನ್ಯಾಯಾಲಯದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ್ದರು. ತನ್ನ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂಬ ಆರೋಪವನ್ನು ಮಾಡಿದ್ದ ರೀಚಾ ರವರು ನ್ಯಾಯಾಲಯದ ಮೇಲೆ ಏಕಾಏಕಿ ತಿರುಗಿಬಿದ್ದಿದ್ದರು.

ಈ ವಿಷಯ ಇಡೀ ದೇಶದಲ್ಲಿ ಹಬ್ಬಿದ ಕೂಡಲೇ ಈ ಹಿಂದೂ ಯುವತಿರಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಬಿಜೆಪಿ ಪಕ್ಷದ ನಾಯಕ ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಸುಬ್ರಹ್ಮಣ್ಯಂ ಸ್ವಾಮಿ ರವರು ಈ ವಿಷಯದಲ್ಲಿ ರವರ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಣೆ ಮಾಡಿ ವಕೀಲರನ್ನು ಟ್ವಿಟರ್ ನಲ್ಲಿ ಟ್ಯಾಗ್ ಮಾಡಿ ಈ ಕೂಡಲೇ ಇವರನ್ನು ಸಂಪರ್ಕಿಸಿ ನಾನು ಅವರಿಗೆ ಸುಪ್ರೀಂಕೋರ್ಟ್ ನಲ್ಲಿ ಸಂಪೂರ್ಣವಾಗಿ ಸಹಾಯ ಮಾಡುತ್ತೇನೆ ಎಂದು ಬೆಂಬಲಕ್ಕೆ ನಿಂತಿದ್ದರು. ಈ ವಿಷಯ ವೇಗವಾಗಿ ಹಬ್ಬುತ್ತಿದ್ದಂತೆ ನ್ಯಾಯಾಲಯವು ಕೇವಲ 20 ನಿಮಿಷಗಳಲ್ಲಿ ಈ ಆದೇಶವನ್ನು ವಾಪಸ್ಸು ತೆಗೆದುಕೊಂಡಿದ್ದು, ಪ್ರಕರಣವನ್ನು ಕ್ಲೋಸ್ ಮಾಡಿ ರಿಚಾ ಅವರು ಯಾವುದೇ ಕುರಾನ್ ಪ್ರತಿಗಳನ್ನು ವಿತರಿಸ ಬೇಕಾಗಿಲ್ಲ ಎಂಬ ಆದೇಶ ಹೊರಡಿಸಿದೆ. ಕೇವಲ ಸುಬ್ರಹ್ಮಣ್ಯಂ ಸ್ವಾಮಿ ರವರ ಒಂದು ಟ್ವೀಟ್ ನ್ಯಾಯಾಲಯವನ್ನು ಅಕ್ಷರಸಹ ನಡುಗಿಸಿದೆ ಎಂದರೆ ತಪ್ಪಾಗಲಾರದು.