ರೈತರಿಗೆ ಬಂಪರ್ ಯೋಜನೆ ಘೋಷಿಸಿದ ಮೋದಿ ! ವರ್ಷಕ್ಕೆ ಕನಿಷ್ಠ 80 ಸಾವಿರ ಆದಾಯ ಪಡೆಯುವುದು ಹೇಗೆ ಗೊತ್ತಾ??

ರೈತರಿಗೆ ಬಂಪರ್ ಯೋಜನೆ ಘೋಷಿಸಿದ ಮೋದಿ ! ವರ್ಷಕ್ಕೆ ಕನಿಷ್ಠ 80 ಸಾವಿರ ಆದಾಯ ಪಡೆಯುವುದು ಹೇಗೆ ಗೊತ್ತಾ??

ನರೇಂದ್ರ ಮೋದಿ ರವರು ಕಳೆದ ಬಾರಿ ಚುನಾವಣೆಯ ಪ್ರಣಾಳಿಕೆಯಲ್ಲಿ ಇಡೀ ದೇಶದ ರೈತರ ಆದಾಯವನ್ನು ಮುಂದಿನ ಐದು ವರ್ಷಗಳಲ್ಲಿ ದ್ವಿಗುಣಗೊಳಿಸುತ್ತೇನೆಂದು ಭರವಸೆ ನೀಡಿದ್ದರು. ಈ ಭರವಸೆ ಕೇಳಿದ ಇಡೀ ವಿಶ್ವದ ಜನ ಒಂದು ಕ್ಷಣ ದಂಗಾಗಿದ್ದು ಸತ್ಯ, ಈ ಭರವಸೆ ನರೇಂದ್ರ ಮೋದಿರವರ ಪ್ರಣಾಳಿಕೆಯಲ್ಲಿ ಬಿಡುಗಡೆಯಾದ ತಕ್ಷಣ ಇಡೀ ವಿಶ್ವದಲ್ಲಿ ಸದ್ದು ಮಾಡಿತ್ತು. ಸ್ವತಹ ವಿಶ್ವಸಂಸ್ಥೆಯು ಹಾಗೂ ವಿಶ್ವದ ಇನ್ನಿತರ ದೇಶಗಳು ನರೇಂದ್ರ ಮೋದಿ ರವರ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ಬಹಳ ಕುತೂಹಲಕಾರಿಯಾಗಿ ಭಾರತ ದೇಶದ ಕದ ತಟ್ಟಿದ್ದರು. ಹಾಗೂ ತನ್ನ ರಾಯಭಾರಿಗಳಿಗೆ ಮೋದಿರವರ ಈ ಯೋಜನೆಯ ಮುಂದಿನ ಉದ್ದೇಶಗಳಾದರೂ ಏನು ಹಾಗೂ ಯಾವ ರೀತಿ ಜಾರಿಗೆ ತರುತ್ತಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಆದೇಶ ನೀಡಿದ್ದರು.

ಇನ್ನು ಅಧಿಕಾರದ ಗದ್ದುಗೆ ಏರಿದ ಮೇಲೆ ನರೇಂದ್ರ ಮೋದಿ ರವರು ಈಡೇರಿಸದೇ ಬಿಡುತ್ತಾರೆಯೇ?? ಇದೇ ವಿಚಾರವಾಗಿ ಈಗಾಗಲೇ ಹಲವಾರು ದಿಟ್ಟ ಹೆಜ್ಜೆಗಳನ್ನು ಇಟ್ಟಿರುವ ನರೇಂದ್ರ ಮೋದಿರವರು ಇದೀಗ ಮತ್ತೊಮ್ಮೆ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದಾರೆ.ಈ ಯೋಜನೆಯಡಿಯಲ್ಲಿ ಒಬ್ಬ ಸಾಮಾನ್ಯ 1ಎಕರೆ ಜಾಗವನ್ನು ಹೊಂದಿರುವ ರೈತ ವರ್ಷಕ್ಕೆ ಕನಿಷ್ಠ 80 ಸಾವಿರ ರೂಗಳನ್ನು ಆದಾಯವಾಗಿ ಪಡೆಯಲು ನರೇಂದ್ರಮೋದಿ ರವರು ಮಹತ್ವದ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ರೈತರಿಗೆ ಈ ಯೋಜನೆಯ ಅಡಿಯಲ್ಲಿ ಆದಾಯ ಪಡೆಯಲು ಕೇಂದ್ರ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದ್ದು, ದೇಶದ ಪ್ರತಿಯೊಬ್ಬ ರೈತನೂ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಸಣ್ಣ ಪ್ರಮಾಣದ ಜಮೀನು ಅಥವಾ ಇಳುವರಿ ಅಷ್ಟಾಗಿ ನೀಡದ ಜಮೀನಿನಿಂದ ರೈತರು ಕನಿಷ್ಠ ಆದಾಯವನ್ನು ಪಡೆಯಲು ಇಷ್ಟು ದಿವಸ ಸಾಧ್ಯವಾಗುತ್ತಿರಲಿಲ್ಲ, ಇದು ದೇಶದ ಕೋಟ್ಯಂತರ ರೈತರಿಗೆ ಸವಾಲಾಗಿತ್ತು. ಈ ಸಮಸ್ಯೆಯನ್ನು ಇದೀಗ ಬಗೆಹರಿಸಲು ನರೇಂದ್ರ ಮೋದಿರವರು ನಿರ್ಧಾರ ಮಾಡಿದ್ದು ನೈಸರ್ಗಿಕ ಸೂರ್ಯಕಿರಣಗಳಿಂದ ಆದಾಯ ಹರಿದು ಬರುವಂತೆ ಮಾಡಲು ನಿರ್ಧಾರ ಮಾಡಲಾಗಿದ್ದು, ರೈತರು ಭೂಮಿಯಲ್ಲಿ ತಮ್ಮ ಬೆಳೆ ಬೆಳೆಯುವುದರ ಜೊತೆಗೆ ಸೋಲಾರ್ ಪ್ಲಾಂಟ್ ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುವ ಅವಕಾಶ ನೀಡಲಿದೆ. ಯೋಜನೆಯ ಮೂಲಕ ರೈತರು ಕನಿಷ್ಠ ವರ್ಷಕ್ಕೆ ಎಂಬತ್ತು ಸಾವಿರ ರೂ ಆದಾಯ ಪಡೆಯಲಿದ್ದಾರೆ. ಹೌದು ರೈತರು ಸೋಲಾರ್ ಫಾರ್ಮಿಂಗ್ ಯೋಜನೆಯ ಜೊತೆಗೆ ಸಣ್ಣಪುಟ್ಟ ಬೆಳೆಗಳನ್ನು ಬೆಳೆದುಕೊಳ್ಳಲು ಅವಕಾಶವಿರುವ ಕಾರಣ ರೈತರು ಭೂಮಿಯ ಸಂಪೂರ್ಣ ಉಪಯೋಗ ಪಡೆದುಕೊಳ್ಳಬಹುದಾಗಿದೆ.

ಕೇಂದ್ರ ಇಂಧನ ಸಚಿವಾಲಯದ ಅಧಿಕೃತ ಮಾಹಿತಿಗಳ ಪ್ರಕಾರ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಲಾಂಟ್ ವಾರ್ಷಿಕವಾಗಿ 1100000 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಒಂದು ಎಕರೆ ಭೂಮಿಯಲ್ಲಿ 0.20 ಮೆಗಾವ್ಯಾಟ್ ಉತ್ಪಾದಿಸುವಂತಹ ಸೋಲಾರ್ ಪ್ಲಾಂಟ್ ಗಳನ್ನು ಹಾಕಬಹುದು. ಈ ಯೋಜನೆಯ ಅಡಿಯಲ್ಲಿ ಪ್ರತಿ ಯೂನಿಟ್ಗೆ 30 ಪೈಸೆಯ ಲೆಕ್ಕದಲ್ಲಿ ರೈತರಿಗೆ ಬಾಡಿಗೆ ನೀಡಲಾಗುತ್ತದೆ ಹಾಗೂ ಭೂಮಿಯ ಮೇಲಿನ ಸಂಪೂರ್ಣ ಹಕ್ಕು ರೈತನ ವರ್ಷವಾಗಿರುತ್ತದೆ. ಈ ಮೂಲಕ ರೈತರಿಗೆ ಕನಿಷ್ಠ ವಾರ್ಷಿಕವಾಗಿ 80000 ವೇತನ ಲಭ್ಯವಾಗಲಿದ್ದು( 1ಎಕರೆ ಜಾಗಕ್ಕೆ) , ತನ್ನದೇ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಜೊತೆಗೆ ಬೇರೆ ಬೇರೆ ಸಣ್ಣಪುಟ್ಟ ಬೆಳೆಗಳನ್ನು ಬೆಳೆದು ಲಾಭ ಪಡೆದುಕೊಳ್ಳುವ ಅವಕಾಶವು ಸಹ ಇದೆ. ಈ ರೀತಿಯ ಯೋಜನೆ ಜಾರಿಗೆ ತಂದದ್ದಕ್ಕಾಗಿ ರೈತರ ಪರವಾಗಿ ನರೇಂದ್ರ ಮೋದಿ ರವರಿಗೆ ಕರುನಾಡ ವಾಣಿ ತಂಡದ ಕಡೆಯಿಂದ ಧನ್ಯವಾದಗಳು. ನೀವು ಯಾವುದೇ ಪಕ್ಷದ ಬೆಂಬಲಿಗರಾಗಿ ರೈತರಿಗೆ ಹಾಗೂ ಸೈನಿಕರಿಗೆ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಲ್ಲಿ ಪಕ್ಷಬೇದ ಮರೆತು ಬೆಂಬಲಿಸಿ.