ಬಿಜೆಪಿಗೆ ಬಿಗ್ ಶಾಕ್: ಯುಟರ್ನ್ ಹೊಡೆದು ರಾಜೀನಾಮೆ ವಾಪಸ್ ತೆಗೆದುಕೊಂಡ ಹಿರಿಯ ಶಾಸಕ

ಬಿಜೆಪಿಗೆ ಬಿಗ್ ಶಾಕ್: ಯುಟರ್ನ್ ಹೊಡೆದು ರಾಜೀನಾಮೆ ವಾಪಸ್ ತೆಗೆದುಕೊಂಡ ಹಿರಿಯ ಶಾಸಕ

ಪ್ರತಿಬಾರಿಯೂ ಇನ್ನೇನು ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ಸಂದರ್ಭ ಬಂದಾಗ, ಅದ್ಯಾಗೋ ದೋಸ್ತಿ ಸರ್ಕಾರ ಉಳಿದು ಬಿಡುತ್ತಿತ್ತು ಅದೇರೀತಿ ಈ ಬಾರಿಯೂ ಉಳಿಯುವ ಸೂಚನೆಗಳು ಕಾಣಸಿಗುತ್ತವೆ. ಇನ್ನೇನು ಕೇವಲ 24 ಗಂಟೆಗಳಲ್ಲಿ ಅಂದರೆ ಗುರುವಾರ ವಿಧಾನಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ವಿಶ್ವಾಸ ಮತವನ್ನು ಸಾಬೀತು ಮಾಡಲಾಗದೆ ಸರ್ಕಾರ ಉರುಳುತ್ತದೆ ಹಾಗೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಮತ್ತೊಮ್ಮೆ ದೋಸ್ತಿ ಸರ್ಕಾರವು, ಗೆಲ್ಲುವ ಸೂಚನೆಗಳು ಕಾಣಸಿಗುತ್ತಿವೆ. ಹೌದು ಬಹುತೇಕ ಗುರುವಾರ ಸರ್ಕಾರ ಬೀಳುತ್ತದೆ ಎಂದು ಎಲ್ಲರೂ ಲೆಕ್ಕಾಚಾರಗಳಲ್ಲಿ ತೊಡಗಿದ್ದರು. ಆದರೆ ಇದೀಗ ದೋಸ್ತಿಗಳಿಗೆ ಆಶಾದಾಯಕ ವಾಗುವಂತಹ ಘಟನೆ ನಡೆದಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ರಾಜೀನಾಮೆ ವಾಪಸ್ಸು ಪಡೆದುಕೊಂಡಿರುವುದಾಗಿ ಮಾಧ್ಯಮಗಳ ಮುಂದೆ ಘೋಷಣೆ ಮಾಡಿ ಸ್ಪೀಕರ್ ಅವರಿಗೆ ಕರೆ ಮಾಡಿ ರಾಜೀನಾಮೆ ವಾಪಸ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಹೌದು ಬೆಂಗಳೂರಿನ ಅಭಿವೃದ್ಧಿಗೆ ದೋಸ್ತಿ ಸರ್ಕಾರ ಸಹಕರಿಸುತ್ತಿಲ್ಲ ಎಂದು ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ರವರು ತಮ್ಮ ನಾಲ್ಕೈದು ಶಾಸಕರೊಂದಿಗೆ ಒಟ್ಟಿಗೆ ರಾಜೀನಾಮೆ ನೀಡಿದ್ದರು. ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದ ರಾಮಲಿಂಗಾರೆಡ್ಡಿ ಅವರು ಇದೀಗ ಯು-ಟರ್ನ್ ಹೊಡೆದಿದ್ದಾರೆ. ರಾಜೀನಾಮೆ ವಾಪಸ್ ಪಡೆಯುತ್ತಿರುವುದಾಗಿ ಘೋಷಣೆ ಮಾಡುವ ಮೂಲಕ ದೋಸ್ತಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದರಿಂದ ದೋಸ್ತಿಗಳ ಸಂಖ್ಯಾಬಲವನ್ನು ಸಾಬೀತು ಮಾಡಿ ಅಧಿಕಾರದ ಗದ್ದುಗೆ ಏರುವ ಕನಸು ಕಂಡಿದ್ದ ಬಿಜೆಪಿ ಪಕ್ಷದ ಆಸೆಗೆ ಬಹುತೇಕ ತಣ್ಣೀರೆರಚಿದ್ದಾರೆ. ಒಂದು ವೇಳೆ ಇವರೊಂದಿಗೆ ರಾಜೀನಾಮೆ ನೀಡಿದ್ದ ಮತ್ತಷ್ಟು ಶಾಸಕರು ಇವರ ಈ ನಿರ್ಧಾರದಿಂದ ರಾಜೀನಾಮೆಯನ್ನು ವಾಪಸ್ ತೆಗೆದುಕೊಂಡಲ್ಲಿ ದೋಸ್ತಿ ಸರ್ಕಾರ ಮತ್ತೊಂದು ದೊಡ್ಡ ಗಂಡಾಂತರದಿಂದ ಪಾರಾಗಲಿದ್ದು, ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ.