ದೋಸ್ತಿಗಳಿಗೆ ಮರ್ಮಾಘಾತ, ರಾಮಲಿಂಗ ರೆಡ್ಡಿಗೆ ಬಿಗ್ ಶಾಕ್ ! ದೋಸ್ತಿ ಪತನ ಖಚಿತ

ಕುಮಾರಸ್ವಾಮಿರವರ ನೇತೃತ್ವದ ಸರ್ಕಾರದ ವಿರುದ್ಧ ಅಭಿವೃದ್ಧಿಯ ನೆಪ ಹೊಡ್ಡಿ ರಾಮಲಿಂಗಾರೆಡ್ಡಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರ ಜೊತೆ ಹಲವಾರು ಬೆಂಬಲಿಗ ಶಾಸಕರೂ ಸಹ ರಾಜೀನಾಮೆ ನೀಡಿ ಸರ್ಕಾರವನ್ನು ಉರುಳಿಸುವ ಹಂತಕ್ಕೆ ತಲುಪಿದ್ದರು. ಆದರೆ ಕೊನೆಕ್ಷಣದಲ್ಲಿ ಇನ್ನೇನು ಬಿಜೆಪಿ ಸರ್ಕಾರ ರಚಿಸುತ್ತದೆ ಎಂದು ಎಲ್ಲರೂ ಅಂದುಕೊಂಡಿರುವ ಸಮಯದಲ್ಲಿ ರಾಮಲಿಂಗಾರೆಡ್ಡಿ ಅವರು ಕಳೆದ ರಾತ್ರಿ ರಾಜೀನಾಮೆಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿ ದೋಸ್ತಿ ಸರ್ಕಾರವನ್ನು ಉಳಿಸುವ ಸೂಚನೆಗಳು ನೀಡಿದರು. ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ವಾಪಸಾದ ನಂತರ ಅವರೊಂದಿಗೆ ಬೆಂಬಲ ಸೂಚಿಸಿ ರಾಜೀನಾಮೆ ಹಿಂಪಡೆದಿದ್ದಾರೆ ಶಾಸಕರು ವಾಪಸು ಬರಲಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿ ಬಂದಿತ್ತು.

ಆದರೆ ಇದೀಗ ಅತೃಪ್ತ ಶಾಸಕರು ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದು, ನಾವು ರಾಮಲಿಂಗ ರೆಡ್ಡಿ ರವರ ಜೊತೆ ರಾಜೀನಾಮೆಯನ್ನು ನೀಡಿರಬಹುದು ಆದರೆ ರಾಮಲಿಂಗ ರೆಡ್ಡಿ ರವರು ರಾಜೀನಾಮೆ ವಾಪಸ್ ತೆಗೆದುಕೊಂಡು ವಿಧಾನಸಭೆಯಲ್ಲಿ ಹಾಜರಾದ ತಕ್ಷಣ ನಾವು ಅವರನ್ನು ಫಾಲೋ ಮಾಡುವುದಿಲ್ಲ. ನಮ್ಮ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಈ ಮೂಲಕ ದೋಸ್ತಿ ಪಕ್ಷಗಳಿಗೆ ಕೊನೆಯ ಆಧಾರವಾಗಿದ್ದ ರಾಮಲಿಂಗ ರೆಡ್ಡಿ ರವರ ಬೆಂಬಲಿಗರು ಕೈಕೊಡುವುದು ಖಚಿತವಾಗಿದ್ದು, ಕುಮಾರಸ್ವಾಮಿ ರವರು ಬಹುಮತ ಸಾಬೀತು ಮಾಡಲು ಮುಂದಾದರೆ ಸರ್ಕಾರ ಉರುಳುವುದು ಖಚಿತವಾಗಲಿದೆ. ಈ ಮೂಲಕ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕಲಿದ್ದು ಬಿಜೆಪಿ ಪಕ್ಷವು ಅಧಿಕಾರದ ಗದ್ದುಗೆ ಏರಿದರೆ ಆಶ್ಚರ್ಯ ಪಡುವ ಅಗತ್ಯವಿಲ್ಲ.

Post Author: Ravi Yadav