ಕುರಾನ್ ಹಂಚಬೇಕು ಎಂಬ ಶರತ್ತಿಗೆ ತಿರುಗೇಟು ನೀಡಿದ ದಿಟ್ಟ ಯುವತಿ ! ಅಖಾಡಕ್ಕೆ ಸ್ವಾಮಿ ! ಅಸಲಿ ಆಟ ಈಗ ಶುರು !!

ಕುರಾನ್ ಹಂಚಬೇಕು ಎಂಬ ಶರತ್ತಿಗೆ ತಿರುಗೇಟು ನೀಡಿದ ದಿಟ್ಟ ಯುವತಿ ! ಅಖಾಡಕ್ಕೆ ಸ್ವಾಮಿ ! ಅಸಲಿ ಆಟ ಈಗ ಶುರು !!

ಕಳೆದ ಕೆಲವು ದಿನಗಳ ಹಿಂದೆ ಒಂದು ಕೆಳ ನ್ಯಾಯಾಲಯದ ತೀರ್ಪು ಇಡೀ ದೇಶದಲ್ಲಿ ಹೊಸ ರೀತಿಯ ಬಿರುಗಾಳಿಯನ್ನು ಎಬ್ಬಿಸಿತ್ತು. ರಾಂಚಿ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ರಿಚಾ ರವರು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರ ವಿರುದ್ಧ ಆಕ್ರಮಣಕಾರಿ ಪೋಸ್ಟನ್ನು ಶೇರ್ ಮಾಡಿದ್ದಾರೆ ಎಂಬ ಆರೋಪ ಮಾಡಿ ಪ್ರಕರಣ ದಾಖಲಿಸಲಾಗಿತ್ತು. ಅಂಜುಮನ್ ಸಮಿತಿಯ ಸದಸ್ಯರೊಬ್ಬರು ಈ ಯುವತಿಯ ಮೇಲೆ ಪ್ರಕರಣ ದಾಖಲು ಮಾಡಿ, ಇತರ ಫೇಸ್ಬುಕ್ ಬಳಕೆದಾರರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡುತ್ತಿದ್ದಾರೆ ಎಂದು ದೂರಲ್ಲಿ ತಿಳಿಸಿದರು. ಪ್ರಕರಣ ದಾಖಲಾದ ಕೂಡಲೇ ಹಿಂದೂ ಯುವತಿಯನ್ನು ಪೋಲಿಸರು ಬಂಧಿಸಿದ್ದರು. ಇಲ್ಲಿಯವರೆಗೆ ಯಾವುದೇ ವಿವಾದಾತ್ಮಕ ನಡೆಗಳು ಕಂಡುಬಂದಿರಲಿಲ್ಲ.

ಆದರೆ ಪ್ರಥಮದರ್ಜೆ ಮನೀಶ್ ಕುಮಾರ್ ಸಿಂಗ್ ರವರು ನಾನೊಬ್ಬ ನ್ಯಾಯಮೂರ್ತಿ ಸ್ಥಾನದಲ್ಲಿ ಕುಳಿತಿದ್ದೇನೆ ಎಂಬುದನ್ನು ಮರೆತು ಜಾಮೀನು ನೀಡುವ ವಿಚಾರದಲ್ಲಿ, ಇಡೀ ದೇಶದಲ್ಲಿ ಬಿರುಗಾಳಿ ಎಬ್ಬಿಸುವಂತೆ ಜಾಮೀನು ನೀಡಬೇಕಾದರೆ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಗ್ರಂಥವನ್ನು ಅಂಜುಮನ್ ಸಮಿತಿ ಹಾಗೂ ನಗರದ ವಿವಿಧ ಗ್ರಂಥಾಲಯಗಳಿಗೆ ಪೋಲಿಸರ ಸಮ್ಮುಖದಲ್ಲಿ ವಿತರಿಸಲು ಆದೇಶ ಹೊರಡಿಸಿತ್ತು. ಆದರೆ ಜೈಲಿನಿಂದ ಬಿಡುಗಡೆಯಾದರೂ ಸಹ ನಾನು ಈ ಶರತ್ತಿಗೆ ಒಪ್ಪುವುದಿಲ್ಲ ಎಂದು ರಿಚಾ ರವರು ಅವರು ಪಟ್ಟು ಹಿಡಿದು ಕುಳಿತಿದ್ದರು. ಅಷ್ಟೇ ಅಲ್ಲದೆ ಕೆಳ ನ್ಯಾಯಾಲಯವು ಈ ರೀತಿ ಮಾಡುವ ಮೂಲಕ ನನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಆರೋಪ ಮಾಡಿ, ಅಧಿಕೃತವಾಗಿ ನ್ಯಾಯಾಲಯದ ತೀರ್ಪಿನ ಪ್ರತಿ ನನ್ನ ಕೈಗೆ ಸಿಕ್ಕ ತಕ್ಷಣ ನಾನು ಹೈಕೋರ್ಟ್ ಸಂಪರ್ಕಿಸಲು ಮುಂದಾಗುತ್ತಾನೆ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದರು.

ಕೆಳ ನ್ಯಾಯಾಲಯದ ಈ ತೀರ್ಪು ಇಡೀ ದೇಶದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತ್ತು, ರಿಚಾ ರವರ ವಿರುದ್ಧದ ಈ ತೀರ್ಪಿಗೆ ಭಾರೀ ಆಕ್ರೋಶ ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ ರಿಚಾರವರು ಈ ತೀರ್ಪಿಗೆ ನೀಡಿದ್ದ ತಿರುಗೇಟು ನೋಡಿ ಇಡೀ ದೇಶದ ಜನ ಭೇಷ್ ಎಂದಿದ್ದರು. ಹೀಗಿರುವಾಗ ಇದೇ ವಿಚಾರವಾಗಿ ರಿಚಾ ಅವರ ಬೆಂಬಲಕ್ಕೆ ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದುಕೊಂಡಿರುವ ಸುಬ್ರಮಣಿಯನ್ ಸ್ವಾಮಿ ರವರು ಆಖಾಡಕ್ಕೆ ಇಳಿದಿದ್ದಾರೆ. ಅಂದರೆ ಅಸಲಿ ಆಟ ಇದೀಗ ಶುರುವಾಗಲಿದೆ. ಹೌದು ರಿಚಾ ಅವರ ಸಾಮಾಜಿಕ ಜಾಲತಾಣದ ಪ್ರಕರಣದ ವಿಚಾರವಾಗಿ ಖುದ್ದು ಅಖಾಡಕ್ಕಿಳಿದಿರುವ ಸುಬ್ರಹ್ಮಣಿಯನ್ ಸ್ವಾಮಿ ರವರು ಏನು ಹೇಳಿದ್ದಾರೆ ಗೊತ್ತಾ??

ರಿಚಾ ಭಾರತಿ ರವರು ಇಶ್ ಭಂಡಾರಿ ರವರನ್ನು ಸಂಪರ್ಕಿಸಿ ( ಖ್ಯಾತ ವಕೀಲ), ಈ ವಿವಾದಕ್ಕೆ ಇವರಿಗಿಂತ ಉತ್ತಮ ಆಯ್ಕೆ ಸಿಗುವುದಿಲ್ಲ, ನಾನು ಅವರಿಗೆ ನ್ಯಾಯಾಲಯದಲ್ಲಿ ಸಂಪೂರ್ಣ ಸಹಾಯ ಮಾಡುತ್ತೇನೆ. ಕುರಾನ್ ವಿತರಣೆ ಎಂದರೆ ಕಾಫಿರ್ ಮತ್ತು ಅದರಿಂದಾಗುವ ಪರಿಣಾಮಗಳ ವಿಭಾಗಗಳ ಅನುಮೋದನೆ. ರಿಚಾ ಅವರು ನಿಜವಾಗಿಯೂ ಎಲ್ಲಾ ಹಿಂದುಗಳ ಪರವಾಗಿ ಹೋರಾಡುತ್ತಿದ್ದಾರೆ, ನಾವು ಇತರ ಧರ್ಮಗಳ ಧರ್ಮಶಾಸ್ತ್ರವನ್ನು ಹಂಚಲು ಸಾಧ್ಯವಿಲ್ಲ ಎಂದು ಟ್ವಿಟ್ಟರ್ನಲ್ಲಿ ಭರವಸೆ ನೀಡಿದ್ದಾರೆ. ಈಗಾಗಲೇ ಬಿಜೆಪಿ ಪಕ್ಷದ ದೆಹಲಿಯ ವಕ್ತಾರ ರಾಜಿಂದರ್ ಸಿಂಗ್ ರಿಚಾ ರವರು ಸುಪ್ರೀಂಕೋರ್ಟ್ ಅನ್ನು ಸಂಪರ್ಕ ಮಾಡಿದರೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಂದ ಮೇಲೆ ಅಸಲಿ ಆಟ ಇದೀಗ ಶುರುವಾಗಿದೆ !!