ಕುಮಾರಸ್ವಾಮಿ ರವರಿಗೆ ಮಹತ್ವದ ಹುದ್ದೆ ನೀಡಿದ ಮೋದಿ ! ದ್ವೇಷ ಮರೆತು ಜವಾಬ್ದಾರಿ ಕೊಟ್ಟಿದ್ದು ಯಾಕೆ ಗೊತ್ತಾ??

ಅಭಿವೃದ್ಧಿ ಮೊದಲು ಪಕ್ಷ ನಂತರ ಎಂದು ಮತ್ತೊಮ್ಮೆ ಸಾಭೀತು ಪಡಿಸಿದ ಮೋದಿ. ಒಮ್ಮೆ ಓದಿ ಶೇರ್ ಮಾಡಿ ಎಲ್ಲರಿಗೂ ತಿಳಿಸಿ

ನಿಮಗೆಲ್ಲರಿಗೂ ತಿಳಿದಿರುವ ಬಿಜೆಪಿ ಪಕ್ಷದ ಹಲವಾರು ಹಿರಿಯ ನಾಯಕರು ಎಂದಿಗೂ ದ್ವೇಷ ರಾಜಕಾರಣವನ್ನು ಮಾಡಿಲ್ಲ. ಇತ್ತೀಚೆಗೆ ದೇವೇಗೌಡರು ಸಹ ದೇಶದ ಹಿರಿಯ ರಾಜಕಾರಣಿಯಾದ ನಿತಿನ್ ಗಡ್ಕರಿ ರವರನ್ನು ಇದೇ ಕಾರಣಕ್ಕೆ ಹಾಡಿ ಹೊಗಳಿದ್ದರು. ಇನ್ನು ಮೊದಲಿನಿಂದಲೂ ದೇಶದ ವಿಷಯ ಬಂದಾಗ ಪಕ್ಷವನ್ನು ಪಕ್ಕಕ್ಕಿಟ್ಟು ಯೋಚನೆ ಮಾಡುವ ನರೇಂದ್ರ ಮೋದಿರವರು, ರಾಜಕೀಯ ದ್ವೇಷದ ಬಗ್ಗೆ ಆಲೋಚನೆ ಮಾಡದೆ, ಕೇವಲ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸುತ್ತಾರೆ. ಈಗಾಗಲೇ ಇದಕ್ಕೆ ಹಲವಾರು ನಿದರ್ಶನಗಳು ನಮಗೆ ಕಾಣಸಿಗುತ್ತವೆ. ಇದೇ ರೀತಿ ಇದೀಗ ಮತ್ತೊಮ್ಮೆ ಜೆಡಿಎಸ್ ಪಕ್ಷದ ಜೊತೆಗಿನ ರಾಜಕೀಯ ದ್ವೇಷವನ್ನು ಪಕ್ಕಕ್ಕಿಟ್ಟು ಕುಮಾರಸ್ವಾಮಿ ರವರಿಗೆ ಮಹತ್ವದ ಹುದ್ದೆ ನೀಡಿದ್ದಾರೆ. ಹೌದು ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ದಿನೇದಿನೇ ಕಾಳಗ ನಡೆಯುತ್ತಿದೆ, ಇತ್ತೀಚಿಗೆ ಕುಮಾರಸ್ವಾಮಿ ರವರು ಸಹ ನೇರವಾಗಿ ನರೇಂದ್ರ ಮೋದಿ ಅವರನ್ನು ಹಲವಾರು ಬಾರಿ ತರಾಟೆಗೆ ತೆಗೆದುಕೊಂಡಿದ್ದರು.

ಆದರೆ ಈ ಎಲ್ಲಾ ವಿಚಾರಗಳನ್ನು ದೇಶದ ಅಭಿವೃದ್ಧಿಯ ವಿಷಯ ಎಂದು ಬಂದಾಗ ನರೇಂದ್ರ ಮೋದಿ ರವರು ಮರೆತು ಕುಮಾರಸ್ವಾಮಿ ರವರಿಗೆ ಇದೀಗ ಮಹತ್ವದ ಹುದ್ದೆಯನ್ನು ನೀಡಿದ್ದಾರೆ. ಇಡೀ ದೇಶದಲ್ಲಿ ಕೇವಲ 10 ರಾಜ್ಯದ ಮುಖ್ಯಮಂತ್ರಿಗಳು ಈ ಹುದ್ದೆಗೆ ನೇಮಕ ರಾಗಿದ್ದು, ಅದೇಷ್ಟೋ ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳು ಈ ಹುದ್ದೆಗೆ ನೇಮಕ ಗೊಂಡಿಲ್ಲ. ರಾಜಕೀಯ ದ್ವೇಷವನ್ನು ಬದಿ ಗೊತ್ತಿರುವ ನರೇಂದ್ರ ಮೋದಿರವರ ಈ ಕಾರ್ಯಕ್ಕೆ ಭಾರೀ ಶ್ಲಾಘನೆಗಳು ಕೇಳಿಬಂದಿವೆ. ಅಷ್ಟಕ್ಕೂ ನರೇಂದ್ರ ಮೋದಿ ರವರು ಕುಮಾರಸ್ವಾಮಿ ರವರಿಗೆ ನೀಡಿರುವ ಮಹತ್ವದ ಹುದ್ದೆ ಯಾದರು ಏನು? ಕುಮಾರಸ್ವಾಮಿ ರವರು ಯಾವ ಯೋಜನೆಯನ್ನು ಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂಬುದರ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಕಳೆದ ಚುನಾವಣೆಯಲ್ಲಿ ಒಂದು ಕಡೆ ವಿರೋಧಪಕ್ಷಗಳು ಮೋದಿ ಒಬ್ಬರು ರೈತ ವಿರೋಧಿ ಎಂದು ಟೀಕೆಗಳ ಸುರಿಮಳೆ ಗಿನ್ನು ಸುರಿಸುತ್ತಿದ್ದರೆ, ನರೇಂದ್ರ ಮೋದಿ ರವರು ವಿರೋಧಪಕ್ಷಗಳ ಟೀಕೆಗಳಿಗೆ ಉತ್ತರ ನೀಡುವ ಬದಲು ನೇರವಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇನೆಂದು ಭರವಸೆ ನೀಡಿದರು. 2014ರ ಪ್ರಣಾಳಿಕೆಯಲ್ಲಿ ಹೇಳಿದಂತೆ ಹಲವಾರು ರೈತ ಪರ ಯೋಜನೆಗಳನ್ನು ಜಾರಿಗೆ ತಂದಿದ್ದ ಕಾರಣ ರೈತರು ನರೇಂದ್ರ ಮೋದಿರವರು ಮತ್ತೊಮ್ಮೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುತ್ತಾರೆ ಎಂಬುದರ ಭರವಸೆಯ ಮೇಲೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿದ್ದಾರೆ. ಈಗಾಗಲೇ ಹಲವಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿರುವ ನರೇಂದ್ರ ಮೋದಿರವರು, ಇದೇ ನಿಟ್ಟಿನಲ್ಲಿ ಇದೀಗ 10 ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಿದ್ದಾರೆ.

ಇದರಲ್ಲಿ ಕುಮಾರಸ್ವಾಮಿ ರವರು ಸಹ ಸ್ಥಾನ ಪಡೆದುಕೊಂಡಿದ್ದು, ಈ ಸಮಿತಿಯು ಇಡೀ ದೇಶದ ಕೃಷಿ ಸುಧಾರಣೆಗೆ ಹಾಗೂ ಈಗಾಗಲೇ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಬೇಕಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು, ಭಾರತೀಯ ಕೃಷಿ ವಲಯದಲ್ಲಿ ಬದಲಾವಣೆಯನ್ನು ತಂದು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಮಾಡುವ ಬಗ್ಗೆ ಈ ಸಮಿತಿಯನ್ನು ರಚಿಸಲಾಗಿದ್ದು, ಬೆಳೆದ ಬೆಳೆಗಳ ಸಾಗಾಣಿಕೆ ವ್ಯವಸ್ಥೆ, ಆಧುನಿಕ ತಂತ್ರಜ್ಞಾನಗಳು, ಆಧುನಿಕ ಕೃಷಿ ಉಪಕರಣಗಳನ್ನು ಬಳಸುವ ಬಗ್ಗೆ ಹಾಗೂ ಪ್ರಮುಖವಾಗಿ ರಫ್ತು ಬಗ್ಗೆ ಈ ಸಮಿತಿಯು ಸಂಪೂರ್ಣವಾಗಿ ಹೊಸ ನಿಯಮಗಳನ್ನು ರೂಪಿಸಿ ಶಿಫಾರಸು ಮಾಡಬೇಕಾಗಿದೆ. ಇನ್ನು ಈ ಸಮಿತಿಗೆ ಕೇವಲ ಎರಡು ತಿಂಗಳುಗಳ ಕಾಲ ಕಾಲಾವಕಾಶ ನೀಡಿರುವ ನರೇಂದ್ರ ಮೋದಿರವರು, ಬಹುಬೇಗನೆ ಕೆಲಸ ಮುಗಿಸುವಂತೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಎಲ್ಲರೂ ಇದೇ ರೀತಿಯ ರಾಜಕೀಯ ದ್ವೇಷಗಳನ್ನು ಮರೆತು, ದೇಶದ ಅಭಿವೃದ್ಧಿಗೆ ಕೈಜೋಡಿಸಿದಲ್ಲಿ ಭಾರತವು ವಿಶ್ವಮಟ್ಟದಲ್ಲಿ ರಾರಾಜಿಸಲಿದೆ.