ಮೋದಿ ರವರ ಕನಸಿನ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರ ಎಳ್ಳು ನೀರು ಬಿಟ್ಟಿದ್ದು ಹೇಗೆ ಗೊತ್ತಾ??

ಮೋದಿ ರವರ ಕನಸಿನ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರ ಎಳ್ಳು ನೀರು ಬಿಟ್ಟಿದ್ದು ಹೇಗೆ ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನರೇಂದ್ರಮೋದಿ ರವರು ಕಳೆದ 2014ರಲ್ಲಿ ಅಧಿಕಾರದ ಗದ್ದುಗೆ ಏರುವಾಗ ಹಲವಾರು ಭರವಸೆಗಳನ್ನು ನೀಡಿ ದೇಶದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಭಾರಿ ಯಶಸ್ಸನ್ನು ಕಂಡಿದ್ದ, ಮೋದಿರವರ ಆಡಳಿತವನ್ನು ಇಡೀ ದೇಶದ ಜನತೆಯು ನಂಬಿ ಮೋದಿ ರವರಿಗೆ ಪ್ರಧಾನಿಪಟ್ಟ ನೀಡಿದ್ದರು. ಇನ್ನು ಅಧಿಕಾರಕ್ಕೇರಿದ ಮೇಲೆ ನೀಡಿದ ಭರವಸೆಗಳನ್ನು ಈಡೇರಿಸುವತ್ತಾ ಗಮನಹರಿಸಿದ ನರೇಂದ್ರ ಮೋದಿರವರು ಭಾರತ ದೇಶವನ್ನು ಪ್ರಬಲ ದೇಶ ಹಾಗೂ ಅಭಿವೃದ್ಧಿ ಹೊಂದಿದ ದೇಶವಾಗಿ ಮಾರ್ಪಡಿಸಲು ಹಲವಾರು ಕನಸಿನ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದೇ ರೀತಿ ದೇಶದ ಹಲವಾರು ನಗರಗಳನ್ನು ಆಯ್ಕೆಮಾಡಿಕೊಂಡು, ಈ ನಗರಗಳಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಸ್ಮಾರ್ಟ್ ಸಿಟಿ ಎಂಬ ಯೋಜನೆಯ ಅಡಿಯಲ್ಲಿ ಅಭಿವೃದ್ಧಿ ಮಾಡಲು ನಿರ್ಧಾರ ಮಾಡಿದ್ದರು.

ಮೋದಿರವರು ಅಂದುಕೊಂಡಂತೆ ಎಲ್ಲ ರಾಜ್ಯಗಳನ್ನು ಅಳೆದು-ತೂಗಿ ಹಲವಾರು ಮಹಾನಗರಗಳನ್ನು ಆಯ್ಕೆಮಾಡಿಕೊಂಡು ಅನುದಾನವನ್ನು ಬಿಡುಗಡೆ ಮಾಡಲು ಆರಂಭಿಸಿದರು. ಅದೇ ರೀತಿ ಕರ್ನಾಟಕ ರಾಜ್ಯದ 7ಮಹಾನಗರ ಪಾಲಿಕೆ ಗಳನ್ನು ಆಯ್ಕೆ ಮಾಡಿದ ನರೇಂದ್ರ ಮೋದಿ ರವರು, ಕೇಂದ್ರ ಸರ್ಕಾರದಿಂದ ಅನುದಾನ ನೀಡಿ ರಾಜ್ಯ ಸರ್ಕಾರಗಳಿಗೆ ಈ ಅನುದಾನವನ್ನು ಬಳಸಿಕೊಂಡು ಮಹಾನಗರ ಪಾಲಿಕೆಗಳನ್ನು ಸ್ಮಾರ್ಟ್ ಸಿಟಿಯಾಗಿ ಬದಲಾಯಿಸಲು ಅವಕಾಶ ಮಾಡಿಕೊಟ್ಟಿದ್ದರು. ಈಗಾಗಲೇ 2 ವರ್ಷಗಳ ಹಿಂದೆ 1255 ಕೋಟಿ ರೂಪಾಯಿ ಈ ಯೋಜನೆಯಡಿಯಲ್ಲಿ ಕರ್ನಾಟಕಕ್ಕೆ ಬಿಡುಗಡೆಯಾಗಿದೆ. ಆದರೆ ಅಂದಿನ ಕಾಂಗ್ರೆಸ್ ಸರ್ಕಾರವಾಗಲಿ ಅಥವಾ ಇಂದಿನ ಮೈತ್ರಿ ಸರ್ಕಾರವಾಗಲಿ ಈ ಅನುದಾನವನ್ನು ಬಳಸಿಕೊಳ್ಳುತ್ತಿಲ್ಲ. ಇದುವರೆಗೂ ಕೇವಲ 190 ಕೋಟಿ ರೂಗಳನ್ನು ಮಾತ್ರ ರಾಜ್ಯ ಸರ್ಕಾರ ಬಳಕೆ ಮಾಡಿಕೊಂಡಿದ್ದು ಇನ್ನುಳಿದ ಹಣ ಹಾಗೆ ಕೊಳೆಯುತ್ತಿದೆ, ರಾಜ್ಯ ಸರ್ಕಾರ ಅಭಿವೃದ್ಧಿಯತ್ತ ಗಮನ ಹರಿಸದೆ ಕಿತ್ತಾಟದಲ್ಲಿ ತೊಡಗಿಕೊಂಡಿರುವುದು ವಿಪರ್ಯಾಸವೇ ಸರಿ. ಇದರ ಬಗ್ಗೆ ರಾಜ್ಯಸಭೆಯಲ್ಲಿ ಕರ್ನಾಟಕದ ಸಂಸದ ಪ್ರಭಾಕರ್  ಕೇಳಿದ ಪ್ರಶ್ನೆಗೆ ಕೇಂದ್ರದ ವಸತಿ ಹಾಗೂ ನಗರ ವ್ಯವಹಾರ ರಾಜ್ಯ ಸಚಿವ ಅರ್ಜಿತ್ ಸಿಂಗ್ ರವರು ಉತ್ತರ ನೀಡಿದ್ದಾರೆ.