ಬಜೆಟ್ ಗೂ ಮುನ್ನವೇ ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಮೋದಿ !

ಬಜೆಟ್ ಗೂ ಮುನ್ನವೇ ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಮೋದಿ !

ನರೇಂದ್ರ ಮೋದಿ ಅವರು ಮೊದಲಿನಿಂದಲೂ ದೇಶದ ರೈತರಿಗೆ ಹಾಗೂ ಸೈನಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸೇನೆಯ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳು ಬಹಳ ಸುಲಭವಾಗಿ ಜನರಿಗೆ ತಲುಪುವ ಕಾರಣ ವಿರೋಧಪಕ್ಷಗಳು ಸೇನೆಯ ಸೌಲಭ್ಯಗಳ ಬಗ್ಗೆ ಟೀಕೆ ಮಾಡದೆ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ, ಮೋದಿ ರವರನ್ನು ಚುನಾವಣಾ ಸಮಯದಲ್ಲಿ ಸಾಲಮನ್ನಾ ಮಾಡಲಿಲ್ಲ ಎಂಬ ಕಾರಣಕ್ಕೆ ಮೋದಿರವರು ಸಂಪೂರ್ಣವಾಗಿ ರೈತ ವಿರೋಧಿ ಎಂಬ ಹಣೆಪಟ್ಟಿಯನ್ನು ಕಟ್ಟಲು ಪ್ರಯತ್ನಪಟ್ಟಿದ್ದರು. ಆದರೆ ಈ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿದ್ದವು. ಯಾಕೆಂದರೆ ರೈತರು ಬೆಳೆದ ಬೆಳೆಗಳಿಗೆ ಬೆಳೆ ವಿಮೆಯಿಂದ ಹಿಡಿದು ಕಿಸಾನ್ ಕ್ರೆಡಿಟ್ ಕಾರ್ಡ್, ಬೆಂಬಲ ಬೆಲೆ ಹಾಗೂ ವರ್ಷಕ್ಕೆ 12 ಸಾವಿರ ರೂಗಳ ಯೋಜನೆಗಳ ಮೂಲಕ ರೈತರ ಮನಗೆಲ್ಲುವಲ್ಲಿ ಮೋದಿ ಅವರು ಸಂಪೂರ್ಣವಾಗಿ ಯಶಸ್ವಿಯಾಗಿದ್ದರು.

ಬಹುಶಃ ಇದೇ ರೀತಿಯ ಕಾರಣಗಳಿಗೆ ರೈತರು ಮತ್ತೊಮ್ಮೆ ಮೋದಿ ರವರನ್ನು ನಂಬಿ ಮತ ನೀಡಿದ್ದಾರೆ. ಇದೀಗ ನರೇಂದ್ರ ಮೋದಿ ರವರು ತಮ್ಮ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಮುನ್ನೂರಕ್ಕೂ ಹೆಚ್ಚು ಸೀಟುಗಳ ಮೂಲಕ ಜಯಗಳಿಸಿ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ಇನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನರೇಂದ್ರ ಮೋದಿ ರವರು ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಯಲ್ಲಿ ಇದೀಗ ಮೊದಲ ಹೆಜ್ಜೆ ಇಟ್ಟಿದ್ದಾರೆ. ಹೌದು ಕಳೆದ ಬಾರಿಯ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಭಾರಿ ಸದ್ದು ಮಾಡಿದ್ದು, ನರೇಂದ್ರ ಮೋದಿ ರವರು ಘೋಷಿಸಿದ ರೈತರ ಆದಾಯ ದ್ವಿಗುಣ ಎಂಬ ಯೋಜನೆ. ಇದೀಗ ಅಧಿಕಾರಕ್ಕೇರಿದ ಕೆಲವೇ ಕೆಲವು ದಿನಗಳಲ್ಲಿ ಇದೇ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ಮೊದಲ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.

ಇನ್ನೂ ಬಜೆಟ್ ಘೋಷಣೆಗೆ 48 ಗಂಟೆಗಳು ಇರುವಾಗಲೇ, ಬಜೆಟ್ ಅಧಿವೇಶನಕ್ಕೆ ಮುನ್ನವೇ ರೈತರಿಗೆ ಬಂಪರ್ ನೀಡಿರುವ ಕೇಂದ್ರ ಸರ್ಕಾರವು 2019-20 ನೇ ಸಾಲಿನಲ್ಲಿ ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಭತ್ತದ ಬೆಲೆಯನ್ನು ಕ್ವಿಂಟಲ್ಗೆ 65 ರೂ ಏರಿಕೆ ಸೇರಿದಂತೆ ಎಣ್ಣೆಕಾಳುಗಳು, ಬೇಳೆ ಹಾಗೂ ಇತರ ಧಾನ್ಯಗಳು ಬೆಂಬಲ ಬೆಲೆ ಹೆಚ್ಚಿಸಲು ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯು ಬುಧವಾರ ತೀರ್ಮಾನ ಮಾಡಿದೆ. (ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ). ಕಳೆದ ವರ್ಷದಲ್ಲಿ ಭತ್ತದ ಬೆಂಬಲ ಬೆಲೆಯನ್ನು 200 ಹೆಚ್ಚಿಸಲಾಗಿತ್ತು, ಅದೇ ನಿಟ್ಟಿನಲ್ಲಿ ರೈತರಿಗೆ ನೆರವಾಗುವಂತೆ ಇದೀಗ ಮತ್ತೊಮ್ಮೆ ಬೆಂಬಲ ಬೆಲೆಯನ್ನು ಸರ್ಕಾರ ಹೆಚ್ಚಳ ಮಾಡಿದ್ದು ಮಳೆ ತಡವಾದ ಕಾರಣ ಬಿತ್ತನೆ ಪ್ರದೇಶವು ಕೇವಲ 146 ಲಕ್ಷ ಹೆಕ್ಟೇರ್ ಗೆ ಇಳಿಕೆ ಯಾಗಿರುವುದರಿಂದ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ.

ಕೇವಲ ಭತ್ತದ ಬೆಲೆಯಷ್ಟೇ ಅಲ್ಲದೆ ರಾಗಿಗೆ ಬೆಂಬಲ ಬೆಲೆಯನ್ನು 253 ರೂ ಗೆ ಹೆಚ್ಚಿಸಲಾಗಿದ್ದು ಒಟ್ಟು 3150 ರೂ ಗೆ ಮುಟ್ಟಿದೆ. ಇದೇ ರೀತಿ ಜೋಳದ ಬೆಂಬಲ ಬೆಲೆ ಏರಿಕೆಯಾಗಿದ್ದು 120 ರೂ ಹೆಚ್ಚಳ ಮಾಡಲಾಗಿದ್ದು ಇದೀಗ ಒಂದು ಕ್ವಿಂಟಾಲ್ ಗೆ ಬೆಂಬಲ ಬೆಲೆ 2550 ರೂಗೆ ತಲುಪಿದಂತಾಗಿದೆ. ಇನ್ನು ಮೆಕ್ಕೆಜೋಳದ ಬೆಂಬಲ ಬೆಲೆ 60 ರೂ ಏರಿಕೆ ಮಾಡಲಾಗಿದ್ದು ಸಾವಿರದ ಏಳುನೂರ ಐವತ್ತು ರೂಪಾಯಿ ತಲುಪಿದೆ. ಇನ್ನುಳಿದಂತೆ ತೊಗರಿ ಬೆಳೆಗೆ 125 ರೂ, ಉದ್ದಿನ ಕಾಳಿಗೆ 100 ರೂ, ಹೆಸರು ಕಾಳಿಗೆ 75 ರೂ, ಸೂರ್ಯಕಾಂತಿಗೆ 262 ರೂ, ಕಡಲೇಕಾಯಿ ಗೆ 233 ರೂ, ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಬಜೆಟ್ ಘೋಷಣೆಗೆ ಇನ್ನು ಕೇವಲ ಕೆಲವೇ ಕೆಲವು ಗಂಟೆಗಳು ಬಾಕಿ ಉಳಿದಿದ್ದು ನರೇಂದ್ರಮೋದಿಯವರು ಬಜೆಟ್ ಗೂ ಮುನ್ನವೇ ರೈತರಿಗೆ ಮೊದಲ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಇನ್ನು ಬಜೆಟ್ ನಲ್ಲಿ ಯಾವ ಯಾವ ರೀತಿಯ ಯೋಜನೆಗಳನ್ನು ರೈತರಿಗಾಗಿ ಘೋಷಣೆ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.