ಕರ್ನಾಟಕದಲ್ಲಿ ಮುನ್ನಡೆಯ ನಾಗಾಲೋಟ ಆರಂಭಿಸಿದ ಬಿಜೆಪಿ

ಕರ್ನಾಟಕದಲ್ಲಿ ಮುನ್ನಡೆಯ ನಾಗಾಲೋಟ ಆರಂಭಿಸಿದ ಬಿಜೆಪಿ

ಇದೀಗ ಕರ್ನಾಟಕದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿ ಅಂಚೆ ಮತ ಎಣಿಕೆ ಗಳ ಮೂಲಕ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಕನಿಷ್ಠ ಇಪ್ಪತ್ತು ಸೀಟುಗಳನ್ನು ಗೆಲ್ಲಬೇಕು ಎಂಬ ಗುರಿ ಇಟ್ಟುಕೊಂಡು ಕಣಕ್ಕೆ ಇಳಿದಿರುವ ಬಿಜೆಪಿ ಪಕ್ಷ ಹಾಗೂ ನರೇಂದ್ರ ಮೋದಿ ರವರ ಅಲೆಯನ್ನು ತಡೆಯಲು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಫಲಿತಾಂಶಕ್ಕಾಗಿ ಕಾದು ಕುಳಿತಿವೆ. ಬಾರಿ ಭದ್ರತೆಯೊಂದಿಗೆ ಮತಗಳ ಎಣಿಕೆ ಕಾರ್ಯಕ್ರಮ ಆರಂಭವಾಗಿದ್ದು ಬಿಜೆಪಿ ಪಕ್ಷವು ಆರಂಭದಲ್ಲಿ ಮುನ್ನಡೆಯ ನಾಗಾಲೋಟವನ್ನು ಆರಂಭಿಸಿದೆ. ಇನ್ನು ಎನ್ಡಿಎ ಮೈತ್ರಿಕೂಟವು 542 ಲೋಕಸಭಾ ಕ್ಷೇತ್ರಗಳಲ್ಲಿ 195ರಲ್ಲಿ ಮುನ್ನಡೆ ಸಾಧಿಸಿದೆ, ಉಳಿದಂತೆ ಕಾಂಗ್ರೆಸ್ ಪಕ್ಷ 100ರಲ್ಲಿ ಮುನ್ನಡೆ ಸಾಧಿಸಿದ್ದು ಮತ್ತಷ್ಟು ಅಂಚೆ ಮತಗಳ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ.

ಇದೀಗ ಬಂದ ಅಪ್ಡೇಟ್ ನ ಪ್ರಕಾರ ಬಿಜೆಪಿ ಪಕ್ಷವು ಮತಗಳ ಎಣಿಕೆಯಲ್ಲಿ 24 ಲೋಕಸಭಾ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಪಡೆದುಕೊಂಡಿದೆ ಇನ್ನುಳಿದಂತೆ ಕಾಂಗ್ರೆಸ್ ಪಕ್ಷವು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡು ಉತ್ತಮ ಆರಂಭ ಪಡೆದಿದೆ. ಇತ್ತ ಜೆಡಿಎಸ್ ಪಕ್ಷವು ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಮಿಥುನ್ ರೈ ಹಾಗೂ ಡಿಕೆ ಸುರೇಶ್ ರವರು ಅಂಚೆ ಮತ ಎಣಿಕೆಯಲ್ಲಿ ಮುನ್ನಡೆಯಲ್ಲಿದ್ದಾರೆ, ಚಿಕ್ಕೋಡಿ ಬಳ್ಳಾರಿ ದಾವಣಗೆರೆ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಪಕ್ಷ ಮುನ್ನಡೆ ಪಡೆದುಕೊಂಡಿದೆ.