ಸೋಲಿಲ್ಲದ ಸರದಾರ ರಿಗೆ ಸೋಲುಣಿಸಿದ ಉಮೇಶ್ ಜಾದವ್- ಮೋದಿ ಅಲೆಗೆ ಕೊಚ್ಚಿಹೋದ ಖರ್ಗೆ

ಇದೀಗ ಇಡೀ ವಿಶ್ವವೇ ಕಾದು ನೋಡುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರ ಬೀಳುತ್ತಿದೆ. ಒಂದೊಂದಾಗಿ ಕ್ಷೇತ್ರಗಳು ಬಿಜೆಪಿ ಪಕ್ಷದ ತೆಕ್ಕೆಗೆ ಹೋಗುತ್ತಿವೆ, ಚುನಾವಣೋತ್ತರ ಸಮೀಕ್ಷೆ ಯ ಟ್ರೆಂಡನ್ನು ಮುಂದುವರಿಸುತ್ತಿರುವ ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ಮತ್ತೊಮ್ಮೆ ತನ್ನ ಪ್ರಭುತ್ವ ಸ್ಥಾಪಿಸುವತ್ತ ಹೆಜ್ಜೆ ಇಟ್ಟಿದೆ. ಇನ್ನು ಕೇಂದ್ರದ ಅಧಿಕಾರದ ಗದ್ದುಗೆ ವಿಷಯಕ್ಕೆ ಬಂದರೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಇದೀಗ ಬಹುತೇಕ ಖಚಿತವಾಗಿದೆ. ಹೀಗಿರುವಾಗ ಒಂಬತ್ತು ಬಾರಿಯ ಶಾಸಕ ಹಾಗೂ ಎರಡು ಬಾರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಇಡೀ ರಾಜಕಾರಣದಲ್ಲಿ ಕಾಣದ ಸೋಲನ್ನು ಈ ಬಾರಿ ಉಮೇಶ್ ಜಾದವ್ ರವರ ಮುಂದೆ ಕಂಡಿದ್ದಾರೆ.

ಹೌದು ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದುಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಕೊನೆಯ ಚುನಾವಣೆಯಲ್ಲಿ ನರೇಂದ್ರ ಮೋದಿ ರವರ ಅಲೆಗೆ ಅಕ್ಷರ ಸಹ ಕೊಚ್ಚಿಕೊಂಡು ಹೋಗಿದ್ದಾರೆ. ಮೀಸಲು ಕ್ಷೇತ್ರದಲ್ಲಿ ತಾನೇ ರಾಜನೆಂದು ಮೆರೆಯುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಇದೀಗ ಮೊಟ್ಟಮೊದಲ ಬಾರಿಗೆ ಇತಿಹಾಸದಲ್ಲಿ ಸೋಲನ್ನು ಕಂಡಿದ್ದಾರೆ. ಪಕ್ಷಾಂತರ ಗೊಂಡು ಬಿಜೆಪಿ ಪಕ್ಷಕ್ಕೆ ಗೆಲುವು ತಂದುಕೊಟ್ಟ ಉಮೇಶ್ ಜಾದವ್ ಅವರಿಗೆ ಬಾರಿ ಜೈಕಾರಗಳು ಕೇಳಿಬರುತ್ತಿದ್ದು ಮೊದಲಬಾರಿಗೆ ಬಿಜೆಪಿ ಪಕ್ಷದಿಂದ ಕಲಬುರ್ಗಿಯಿಂದ ದೆಹಲಿಗೆ ತೆರಳುವ ಸಂಸದರಾಗಿ ಮೆರೆಯಲಿದ್ದಾರೆ. ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಸಂಪೂರ್ಣ ಫಲಿತಾಂಶ ಹೊರಬೀಳಲಿದ್ದು, ಕಾಂಗ್ರೆಸ್ ಪಕ್ಷವು ಈಗಾಗಲೇ ಹೀನಾಯ ಸ್ಥಿತಿಗೆ ತಲುಪಿದೆ ಇನ್ನುಳಿದಂತೆ ಬಿಜೆಪಿ ಪಕ್ಷವು ಅಧಿಕಾರದ ಮತ್ತೊಮ್ಮೆ ಹೆಜ್ಜೆಯಿಟ್ಟಿದೆ.

Post Author: Ravi Yadav