10 ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಬಿಜೆಪಿ-ಕರ್ನಾಟಕದಲ್ಲಿ ಎಷ್ಟು ಗೊತ್ತಾ??

10 ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಬಿಜೆಪಿ-ಕರ್ನಾಟಕದಲ್ಲಿ ಎಷ್ಟು ಗೊತ್ತಾ?

ಎಲ್ಲರೂ ಊಹಿಸಿದಂತೆ ನರೇಂದ್ರ ಮೋದಿರವರ ನೇತೃತ್ವದ ಬಿಜೆಪಿ ಸರ್ಕಾರವು ಈಗಾಗಲೇ ಬಹುಮತದತ್ತ ದಾಖಲಾಗಿದೆ. ನರೇಂದ್ರ ಮೋದಿ ರವರ ಅಲೆ ಯಾವರೀತಿ ಇದೆ ಎಂದರೆ ಕೇವಲ 11 ಗಂಟೆಗಳ ಆಗುವಷ್ಟರಲ್ಲಿ ಬರೋಬ್ಬರಿ 10 ಕ್ಷೇತ್ರಗಳಲ್ಲಿ ಗೆದ್ದಿದೆ. ಅದರಲ್ಲಿ 8 ಕ್ಷೇತ್ರ ಕರ್ನಾಟಕದಲ್ಲಿ ಗೆದ್ದಿರುವುದು ವಿಶೇಷ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದ್ದ ಕಾರಣ ಕೆಲವು ಮಾಹಿತಿಗಳ ಪ್ರಕಾರ ಜಿದ್ದಾಜಿದ್ದಿನ ಹೋರಾಟ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಮತ್ತೊಮ್ಮೆ ನರೇಂದ್ರ ಮೋದಿ ರವರ ಅಲೆಯಲ್ಲಿ ವಿರೋಧ ಪಕ್ಷಗಳು ಅಕ್ಷರಸಹ ಕೊಚ್ಚಿಕೊಂಡು ಹೋಗಿವೆ.ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಗಾಂಧಿನಗರದಲ್ಲಿ ಅಮಿತ್ ಶಾ ರವರು ಈಗಾಗಲೇ ಶೇಕಡ ಐವತ್ತಕ್ಕೂ ಹೆಚ್ಚು ಮತಗಳನ್ನು ಪಡೆದು ಕೇವಲ ಚುನಾವಣಾ ಆಯೋಗದ ಅಧಿಕೃತ ಘೋಷಣೆ ಗಾಗಿ ಕಾಯುತ್ತಿದ್ದಾರೆ. ಬರೋಬ್ಬರಿ 22 ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರ ಎಂದು ಕರೆಯಲ್ಪಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವು ಭರ್ಜರಿ ಗೆಲುವು ದಾಖಲಿಸಿದೆ. ಈಗಾಗಲೇ ನಾಲ್ಕು ಲಕ್ಷ ಅಂತರದಿಂದ ಮುನ್ನುಗ್ಗುತ್ತಿರುವ ಕಟೀಲ್ ರವರ ಗೆಲುವು ಖಚಿತವಾಗಿದ್ದು, ಇಂದು ಫೈರ್ ಬ್ರಾಂಡ್ ಖ್ಯಾತಿಯ ಅನಂತ್ ಕುಮಾರ್ ಹೆಗಡೆಯವರು ಗೆಲುವು ಪಡೆದುಕೊಂಡಿದ್ದಾರೆ. ಇನ್ನು ಬಿಜೆಪಿ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ದವರು ಬಹಳ ಸುಲಭವಾಗಿ ಗೆಲುವು ದಾಖಲಿಸಿದ್ದಾರೆ. ಇನ್ನುಳಿದಂತೆ ಬಳ್ಳಾರಿ, ವಿಜಯಪುರ, ಧಾರವಾಡ,ಚಿಕ್ಕಬಳ್ಳಾಪುರ ಹಾಗೂ ಹಾವೇರಿ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಧಿಕೃತ ಗೆಲುವು ಘೋಷಣೆ ಮಾತ್ರ ಬಾಕಿ ಉಳಿದಿದೆ. ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವು ಶೇಕಡ ಐವತ್ತಕ್ಕೂ ಹೆಚ್ಚು ಮತ ಪಡೆದುಕೊಂಡು ಗೆಲುವು ಖಚಿತ ಪಡಿಸಿಕೊಂಡಿದೆ.