ರಾಜೀನಾಮೆ ನೀಡಲು ಸಮಯ ಕೇಳಿದ ನಾಯ್ಡು! ಕುತಂತ್ರ ನೀತಿ ಅರಿತ ಆಂಧ್ರ ಜನ ಮಾಡಿದ್ದೇನು ಗೊತ್ತಾ??

ಚಂದ್ರಬಾಬು ನಾಯ್ಡು ರವರು ನರೇಂದ್ರ ಮೋದಿ ರವರ ಜೊತೆ ಸ್ನೇಹ ಸಂಬಂಧವನ್ನು ಕಳೆದುಕೊಂಡು ಬಿಜೆಪಿ ಪಕ್ಷವನ್ನು ಸೋಲಿಸುತ್ತೇವೆ ಎಂದು ಸಮರ ಸಾರಿದ್ದರು. ಇತ್ತ ಬಿಜೆಪಿ ಪಕ್ಷವು ಸಹ ಆಂಧ್ರಪ್ರದೇಶದಲ್ಲಿ ಕೊಂಚಮಟ್ಟಿಗೆ ತನ್ನ ಪ್ರಭಾವವನ್ನು ಬೀರುವ ಪ್ರಯತ್ನ ಪಟ್ಟಿತು. ಉಳಿದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಪಕ್ಷವು ಗೆಲ್ಲುವ ನೆಚ್ಚಿನ ಪಕ್ಷವಾಗಿ ಮುನ್ನುಗ್ಗುತ್ತಿದ್ದ ಸಮಯದಲ್ಲಿ ಚಂದ್ರಬಾಬುನಾಯ್ಡು ರವರು, ತೃತಿಯ ರಂಗ ರಚನೆ ಮಾಡಿ ಪ್ರಧಾನಿಯಾಗುವ ಕನಸು ಕಂಡಿದ್ದರು ದೇವೇಗೌಡರು ತೃತೀಯರಂಗದ ಸಭೆಗಳಿಗೆ ಭಾಗವಹಿಸುವುದಿಲ್ಲ ಎಂದು ಘೋಷಣೆ ಮಾಡಿದ ಕೇವಲ ಮೂರು ಗಂಟೆಗಳಲ್ಲಿ ಚಂದ್ರಬಾಬು ನಾಯ್ಡುರವರ ನೇರವಾಗಿ ದೇವೇಗೌಡರ ಮನೆಗೆ ಬಂದು ಚರ್ಚೆ ನಡೆಸಿ ದೇವೇಗೌಡರ ಮನವೊಲಿಸಿದರು.

ಇಷ್ಟೆಲ್ಲಾ ಸರ್ಕಸ್ ಗಳನ್ನು ಮಾಡಿದ ಚಂದ್ರಬಾಬುನಾಯ್ಡು ರವರು ಇದೀಗ ಹೀನಾಯವಾಗಿ ಸೋಲನ್ನು ಕಂಡಿದ್ದಾರೆ. ಇಂದು ಸಂಜೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಚಂದ್ರಬಾಬು ನಾಯ್ಡು ರವರು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಸಹ ಕಳೆದುಕೊಂಡಿದ್ದು ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸೀಟು ಗೆಲ್ಲದೆ ಹೀನಾಯವಾಗಿ ಮೊದಲಿನಿಂದಲೂ ಬಿಜೆಪಿ ಬೆಂಬಲಿತ ಪಾರ್ಟಿ ಎಂದು ಹೆಸರು ಪಡೆದುಕೊಂಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಂದೆ ಮಂಡಿಯೂರಿ ದ್ದಾರೆ. ಕೇವಲ 23 ವಿಧಾನಸಭಾ ಸೀಟುಗಳನ್ನು ಗಳಿಸಿಕೊಂಡಿರುವ ಚಂದ್ರಬಾಬು ನಾಯ್ಡು ರವರು, ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದು ಅಧಿಕೃತ ಫಲಿತಾಂಶಕ್ಕೂ ಮುನ್ನವೇ ರಾಜ್ಯಪಾಲರನ್ನು ಭೇಟಿ ಮಾಡಲು ನಿರ್ಧರಿಸಿ ಸಂಜೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

Post Author: Ravi Yadav