ಜೆಡಿಎಸ್ ಇದೀಗ ಫಲಿತಾಂಶ ಬದಲಿಸಿ ಹೆಚ್ಚು ಸ್ಥಾನ ಗೆಲ್ಲಲು ಇರುವುದು ಒಂದೇ ದಾರಿ !!

ಜೆಡಿಎಸ್ ಇದೀಗ ಫಲಿತಾಂಶ ಬದಲಿಸಿ ಹೆಚ್ಚು ಸ್ಥಾನ ಗೆಲ್ಲಲು ಇರುವುದು ಒಂದೇ ದಾರಿ !!

ಚುನಾವಣೋತ್ತರ ಸಮೀಕ್ಷೆಗಳು ಬಂದ ನಂತರ ಬಿಜೆಪಿ ಪಕ್ಷವು ಇನ್ನಿಲ್ಲದ ಹುಮ್ಮಸ್ಸಿನಲ್ಲಿ ವಿಜಯೋತ್ಸವ ಆಚರಿಸಲು ಸಿದ್ಧತೆ ನಡೆಸಿಕೊಂಡಿದೆ. ಈಗಾಗಲೇ ಇಡೀ ದೇಶದ ಎಲ್ಲೆಡೆ ಚುನಾವಣೋತ್ತರ ಸಮೀಕ್ಷೆಗಳು ಸದ್ದು ಮಾಡುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಎಲ್ಲರೂ ಊಹಿಸಿದಂತೆ ಬಿಜೆಪಿ ಪಕ್ಷವು ಸಮೀಕ್ಷೆಯಲ್ಲಿ ಭಾರಿ ಜಯ ದಾಖಲಿಸುವಂತೆ ಕಾಣುತ್ತಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೂ ಸಹ ಗೆಲುವು ಅಷ್ಟಾಗಿ ಕಾಣಸಿಗುವುದಿಲ್ಲ ಎಂಬುದು ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ. ಇನ್ನು ಅಧಿಕಾರದಲ್ಲಿ ಇರುವ ಕುಮಾರಸ್ವಾಮಿರವರ ಜೆಡಿಎಸ್ ಪಕ್ಷ ಯಾವುದೇ ಸಮೀಕ್ಷೆಯಲ್ಲಿ ಯೂ ಹೆಚ್ಚು ಸ್ಥಾನ ಗಳಿಸುವ ಸೂಚನೆ ನೀಡಿಲ್ಲ, ಬಹುತೇಕ ಸಮೀಕ್ಷೆಗಳಲ್ಲಿ ಒಂದು ಅಥವಾ ಎರಡು ಸ್ಥಾನಗಳಿಗೆ ತೃಪ್ತಿ ಪಟ್ಟಿ ಕೊಂಡಿರುವ ಜೆಡಿಎಸ್ ಪಕ್ಷವು ಒಂದೆರಡು ಸಮೀಕ್ಷೆಗಳಲ್ಲಿ ಮೂರು ಸ್ಥಾನ ಪಡೆಯಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಆದರೆ ಇದೀಗ ಜೆಡಿಎಸ್ ಪಕ್ಷ ಹೆಚ್ಚು ಸ್ಥಾನ ಪಡೆದುಕೊಳ್ಳುವ ದಾರಿಯನ್ನು ನೆಟ್ಟಿಗರು ಕಂಡುಹಿಡಿದಿದ್ದಾರೆ.

ಜೆಡಿಎಸ್ ಪಕ್ಷದ ಮುಖವಾಣಿ ಕಸ್ತೂರಿ ಚಾನೆಲ್ ನಲ್ಲಿ ಜೆಡಿಎಸ್ ಪಕ್ಷವು ಬರೋಬ್ಬರಿ ನಾಲ್ಕು ಸೀಟುಗಳನ್ನು ಗೆದ್ದು ಬೀಗಲಿದೆ ಎಂಬ ಅಂಕಿ ಅಂಶಗಳನ್ನು ಒಳಗೊಂಡ ಸಮೀಕ್ಷೆ ಹೊರಬಿದ್ದಿದೆ. ಇನ್ನು ಕಾಂಗ್ರೆಸ್ ಪಕ್ಷವು ಹನ್ನೊಂದರಿಂದ ಹದಿನಾರು ಸೀಟುಗಳು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಇದನ್ನು ಕಂಡ ಸಾಮಾಜಿಕ ಜಾಲತಾಣಗಳ ನಮೋ ಭಕ್ತರು ಹಾಗೂ ನೆಟ್ಟಿಗರು ಜೆಡಿಎಸ್ ಪಕ್ಷ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಕಸ್ತೂರಿ ಚಾನೆಲ್ ನಲ್ಲಿ ಮಾತ್ರ ಸಾಧ್ಯ ಆದ ಕಾರಣದಿಂದ ಜೆಡಿಎಸ್ ಪಕ್ಷದ ಅಭಿಮಾನಿಗಳು ಕಸ್ತೂರಿ ಚಾನೆಲ್ ಮಾತ್ರ ನೋಡಿ, ಫಲಿತಾಂಶ ಪ್ರಕಟಣೆಗೊಂಡ ನಂತರವೂ ಸಹ ಹೆಚ್ಚಿನ ಸಂಖ್ಯೆಗಳನ್ನು ತೋರಿಸುತ್ತಾರೆ, ದೇವೇಗೌಡರು ಪ್ರಧಾನಿ ಸಾಲಿನಲ್ಲಿ ಮೊದಲಿಗರಾಗಿ ಕಾಣಸಿಗುತ್ತಾರೆ ಹಾಗೂ ಪ್ರಮಾಣವಚನಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿಗಳನ್ನು ಮೊದಲು ಕಸ್ತೂರಿ ಚಾನೆಲ್ ನಲ್ಲಿ ಪ್ರಕಟಣೆ ಗೊಳಿಸಲಾಗುತ್ತದೆ ಎಂದು ಕಾಲೆಳೆದಿದ್ದಾರೆ.

ಇದು ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯವಲ್ಲ, ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ಸುದ್ದಿಯನ್ನು ಪ್ರಕಟಣೆ ಮಾಡುತ್ತಿದ್ದೇವೆ.