ಆಪರೇಷನ್ ಬೇಡ ಎಂದ ಚಾಣಕ್ಯ: ಹೊಸ ರಣತಂತ್ರ ರೂಪಿಸಿದ ಅಮಿತ್ ಶಾ, ಶುರುವಾಗಲಿದೆ ಹೊಸ ಗುದ್ದಾಟ

ಆಪರೇಷನ್ ಬೇಡ ಎಂದ ಚಾಣಕ್ಯ: ಹೊಸ ರಣತಂತ್ರ ರೂಪಿಸಿದ ಅಮಿತ್ ಶಾ, ಶುರುವಾಗಲಿದೆ ಹೊಸ ಗುದ್ದಾಟ

ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದ ಆಪರೇಷನ್ ಕಮಲ ಸದ್ದು ಮಾಡುತ್ತಿದೆ. ಈಗಾಗಲೇ ಮೂರ್ನಾಲ್ಕು ಬಾರಿ ಬಿಜೆಪಿ ಪಕ್ಷವು ಸರ್ಕಾರ ರಚಿಸುವ ಪ್ರಯತ್ನಪಟ್ಟು ವಿಫಲವಾಗಿದೆ. ಇನ್ನು ದೋಸ್ತಿ ಗಳಲ್ಲಿ ಆಂತರಿಕ ಜಗಳ ಹೆಚ್ಚಾಗಿದ್ದು ಯಾವುದೇ ಕ್ಷಣ ಸರ್ಕಾರ ಉರುಳುವ ಸಾಧ್ಯತೆಗಳು ಕಾಣಸಿಗುತ್ತಿವೆ. ಹೀಗಿರುವಾಗ ಅಮಿತ್ ಶಾ ರವರು ರಾಜ್ಯ ರಾಜಕಾರಣದ ಬಗ್ಗೆ ಅಖಾಡಕ್ಕೆ ಇಳಿದಾಗ ಎಲ್ಲರೂ ಬಿಜೆಪಿ ಸರ್ಕಾರ ರಚಿಸುವ ಪ್ರಯತ್ನ ಮಾಡಲಿದೆ ಎಂಬ ಆಲೋಚನೆ ಮಾಡಿದ್ರು, ಆದರೆ ಅಮಿತ್ ಶಾ ರವರ ರಣತಂತ್ರ ವೇ ಬೇರೆಯಾಗಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.

ಹೌದು, ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷವೂ ಸರ್ಕಾರ ರಚಿಸುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಬಿಜೆಪಿ ಪಕ್ಷದ ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕಲು ನಿರ್ಧಾರ ಮಾಡಿದ್ದು, ಜೂನ್ ತಿಂಗಳವರೆಗೆ ಕಾದು ನೋಡುವ ಕೆಲಸ ಮಾಡಲಿದೆ. ಮೈತ್ರಿ ಸರ್ಕಾರದಲ್ಲಿ ಮತ್ತಷ್ಟು ಭಿನ್ನಮತಗಳನ್ನು ಜನರ ಮುಂದೆ ಇಡಲು ಬಿಜೆಪಿ ಪಕ್ಷವು ಈ ರೀತಿಯ ಕಾದು ನೋಡುವ ರಣತಂತ್ರಕ್ಕೆ ಮೊರೆ ಹೋಗಲಿದೆ ಎನ್ನಲಾಗುತ್ತಿದೆ. ಇನ್ನು ಸರ್ಕಾರ ರಚಿಸುವ ವಿಷಯಕ್ಕೆ ಬಂದರೆ ಮಧ್ಯಂತರ ಚುನಾವಣೆಗೆ ಒತ್ತು ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.

ದೋಸ್ತಿ ಗಳಲ್ಲಿ ಭಿನ್ನಮತ ಭುಗಿಲೆದ್ದು ಸರ್ಕಾರ ಉರುಳಿದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭರ್ಜರಿ ಗೆಲುವು ದಾಖಲಿಸಿ ಕನಿಷ್ಠ 150 ರಗಡಿ ದಾಟುವುದು ಖಚಿತವಾಗಲಿದೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ. ಅಷ್ಟೇ ಅಲ್ಲದೇ ಜೆಡಿಎಸ್ ಪಕ್ಷದ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಆಲೋಚನೆ ಮಾಡಬಾರದು ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಮಧ್ಯಂತರ ಚುನಾವಣೆ ನಡೆದಲ್ಲಿ ಬಿಜೆಪಿ ಪಕ್ಷವು ಯುವಕರಿಗೆ ಹೆಚ್ಚು ಆದ್ಯತೆಯನ್ನು ನೀಡಿ ಪಕ್ಷದ ಹಲವಾರು ಹುದ್ದೆಗಳಲ್ಲಿ ಬದಲಾವಣೆ ತರುವ ಸಾಧ್ಯತೆಗಳಿವೆ ಎಂಬ ಮಾಹಿತಿ ಹೊರಬಿದ್ದಿದೆ.

ಮೂಲಗಳ ಪ್ರಕಾರ ಬಿಜೆಪಿ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮರುಕ್ಷಣ ಕೆಲವೇ ಕೆಲವು ಸೀಟುಗಳ ಅಂತರದಿಂದ ಅಧಿಕಾರ ಕೈ ತಪ್ಪಿರುವ ಮಧ್ಯಪ್ರದೇಶದಲ್ಲಿ ಮೊದಲು ಸರ್ಕಾರ ರಚಿಸಲಾಗುವುದು, ತದನಂತರ ರಾಜಸ್ಥಾನ ರಾಜ್ಯದಲ್ಲಿ ಸರ್ಕಾರ ರಚಿಸಿ ಮೂರನೇ ಆಯ್ಕೆಯಾಗಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರ ರಚಿಸಲು ಪ್ರಯತ್ನ ಪಡುವುದು ಬಿಜೆಪಿ ಪಕ್ಷದ ಪ್ಲಾನ್ ಆಗಿದೆ. ಒಟ್ಟಿನಲ್ಲಿ ಈ ಎಲ್ಲ ರಾಜಕೀಯ ಬೆಳವಣಿಗೆಗಳತ್ತ ಗಮನಹರಿಸಿದರೆ ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈ ನಿರ್ಧಾರಕ್ಕೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.