ಬಿಗ್ ಬ್ರೇಕಿಂಗ್: ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ 4 ಪಕ್ಷೇತರರು ! MP ಕಾಂಗ್ರೆಸ್ ನಲ್ಲಿ ನಡುಕ

ಚುನಾವಣೋತ್ತರ ಸಮೀಕ್ಷೆ ಹೊರಬೀಳುತ್ತಿದ್ದಂತೆ ಮಧ್ಯಪ್ರದೇಶ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಸರಿಸುಮಾರು ಎಲ್ಲಾ ಸಮೀಕ್ಷೆಗಳ ಅಂದಾಜು ತೆಗೆದುಕೊಂಡಾಗ ಮಧ್ಯಪ್ರದೇಶದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ 26ರಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂಬ ಅಂಕಿ ಅಂಶಗಳು ಹೊರಬಿದ್ದಿವೆ. ಈ ಮೂಲಕ ಅಧಿಕಾರದಲ್ಲಿ ಇದ್ದರೂ ಸಹ ಜನರ ಮನಗೆಲ್ಲುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಇನ್ನು ಅತಂತ್ರ ವಿಧಾನ ಸಭಾ ಫಲಿತಾಂಶ ವನ್ನು ಬಳಸಿಕೊಂಡು ಪಕ್ಷೇತರ ಹಾಗೂ ಎಸ್ಪಿ ಬಿಎಸ್ಪಿ ಪಕ್ಷಗಳ ಶಾಸಕರೊಂದಿಗೆ ಮೈತ್ರಿಯನ್ನು ಮಾಡಿಕೊಂಡು ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಪಕ್ಷಕ್ಕೆ ಅತಿ ದೊಡ್ಡ ಶಾಕ್ ಎದುರಾಗಿದೆ.

ಚುನಾವಣೋತ್ತರ ಸಮೀಕ್ಷೆ ಹೊರಬೀಳುತ್ತಿದ್ದಂತೆ ಬಿಜೆಪಿ ಪಕ್ಷವು ರಾಜ್ಯಪಾಲರಿಗೆ ಪತ್ರ ಬರೆದು ವಿಶೇಷ ವಿಧಾನಸಭಾ ಅಧಿವೇಶನವನ್ನು ಆಯೋಜಿಸಿ ಕಾಂಗ್ರೆಸ್ ಪಕ್ಷವು ಬಹುಮತ ಸಾಬೀತು ಮಾಡಲಿ ಎಂದು ಕೋರಿ ಕೊಂಡಿತ್ತು. ಇದೀಗ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ 4 ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ 5 ಕಾಂಗ್ರೆಸ್ ಶಾಸಕರು ಸಹ ಬಿಜೆಪಿ ಪಕ್ಷದ ಸಂಪರ್ಕದಲ್ಲಿದ್ದು ಯಾವುದೇ ಕ್ಷಣದಲ್ಲಿ ಬೇಕಾದರೂ ಸರಕಾರ ಉರುಳಬಹುದು ಎಂಬ ಮಾಹಿತಿ ಹೊರ ಬಿದ್ದಿದೆ. ಒಂದು ವೇಳೆ ಅದೇ ನಡೆದಲ್ಲಿ ನರೇಂದ್ರ ಮೋದಿ ರವರಿಗೂ ಮುನ್ನ ಶಿವರಾಜ್ ಸಿಂಗ್ ಚೌಹಾನ್ ರವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಹಾಗೂ ಮತ್ತೊಮ್ಮೆ ಮಧ್ಯಪ್ರದೇಶ ಕೇಸರಿಮಯ ವಾಗಲಿದೆ.

Post Author: Ravi Yadav