ದೀದಿ ಭದ್ರಕೋಟೆಯಲ್ಲಿ ಭರ್ಜರಿ ಆರಂಭ ಪಡೆದ ಬಿಜೆಪಿ- ಮೋದಿ ಅಲೆಯಲ್ಲಿ ಸುನಾಮಿ

ಭಾರಿ ಕುತೂಹಲ ಮೂಡಿಸಿರುವ ಪಕ್ಷಿಮ ಬಂಗಾಳದ ಮೊದಲ ಹಂತದ ಮತ ಎಣಿಕೆಯಲ್ಲಿ ಬಿಜೆಪಿ ಪಕ್ಷವು ಭರ್ಜರಿ ಆರಂಭವನ್ನು ಪಡೆದಿದೆ. ಕಳೆದ ಕೆಲವು ತಿಂಗಳಿಂದ ಮಮತಾ ಬ್ಯಾನರ್ಜಿಯವರ ಭದ್ರಕೋಟೆಯನ್ನು ಅಕ್ಷರಸಹ ನಡುಗುವಂತೆ ಮಾಡುತ್ತಿರುವ ಬಿಜೆಪಿ ಪಕ್ಷವು ತನ್ನ ಸಿದ್ಧಾಂತಗಳ ಮೂಲಕ ಪಶ್ಚಿಮ ಬಂಗಾಳದಲ್ಲಿರುವ ಜನರನ್ನು ಸೆಳೆಯುತ್ತಿದೆ ಎಂಬ ಮಾತು ಕೇಳಿ ಬಂದಿದ್ದು ಇದಕ್ಕೆ ಪೂರಕವಾಗಿ ಪ್ರತಿ ಬಾರಿಯೂ ಬಿಜೆಪಿ ಪಕ್ಷದ ಸಭೆ ಸಮಾರಂಭಗಳಿಗೆ ಮಮತಾ ಬ್ಯಾನರ್ಜಿ ಅವರು ಇನ್ನಿಲ್ಲದ ತಡೆಗಳನ್ನು ಒಡ್ಡಲು ಪ್ರಯತ್ನಪಟ್ಟು ಕೊನೆಗೆ ವಿಫಲವಾಗುತ್ತಿದ್ದರು. ಹಲವಾರು ಮಮತಾ ಬ್ಯಾನರ್ಜಿ ರವರ ಹಗರಣಗಳನ್ನು ಬಿಜೆಪಿ ಪಕ್ಷವು ತೆರೆದಿಟ್ಟಿತು, ಇನ್ನು ಹಿಂಸಾಚಾರಗಳಿಗೆ ಬ್ರೇಕ್ ಹಾಕುವ ಕೆಲಸದಲ್ಲಿ ಕೊಂಚ ಮಟ್ಟಿಗೆ ಹಿನ್ನಡೆಯುಂಟು ಆದರೂ, ಒಳ್ಳೆಯ ಕೆಲಸವನ್ನೇ ಮಾಡಿತ್ತು.

ಇದೀಗ ಅದೇ ರೀತಿಯ ಫಲಿತಾಂಶವು ಚುನಾವಣಾ ಮತ ಎಣಿಕೆ ಕಾರ್ಯದಲ್ಲಿ ಆರಂಭವಾಗಿದ್ದು ಬಿಜೆಪಿ ಪಕ್ಷವು ಭಾರಿ ಮುನ್ನಡೆಯೊಂದಿಗೆ ಮುನ್ನುಗ್ಗುತ್ತಿದೆ. 40 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವು ಹೆಚ್ಚೆಂದರೆ 15 ಕ್ಷೇತ್ರ ಗೆಲ್ಲುತ್ತಾರೆ ಎಂಬ ಮಾಹಿತಿ ಕೇಳಿ ಬಂದಿತ್ತು ಆದರೆ ಮೊದಲ ಹಂತದಲ್ಲಿಯೇ ಬಿಜೆಪಿ ಪಕ್ಷವು ಭರ್ಜರಿ ಆರಂಭವನ್ನು ಪಡೆದಿದ್ದು ಮಮತಾ ಬ್ಯಾನರ್ಜಿ ರವರಿಗೆ ದೊಡ್ಡ ಶಾಕ್ ಎದುರಾಗಿದೆ. ಬರೋಬ್ಬರಿ 40 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವು 25 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಒಂದು ವೇಳೆ ಇದೇ ಮುನ್ನಡೆಯನ್ನು ಬಿಜೆಪಿ ಪಕ್ಷವು ಕಾಯ್ದುಕೊಂಡ ಲಿ ಮಮತಾ ಬ್ಯಾನರ್ಜಿ ರವರ ಭದ್ರಕೋಟೆ ಛಿದ್ರ ಛಿದ್ರ ವಾಗಲಿದೆ.

Post Author: Ravi Yadav