ಕೇವಲ ಎರಡು ಟ್ವೀಟ್ ಗೆ ಕಾಂಗ್ರೆಸ್ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ??

ನರೇಂದ್ರ ಮೋದಿ ರವರ ಅಲೆಗೆ ಅಕ್ಷರ ಸಹ ಕಳೆದ ಬಾರಿ ಚುನಾವಣೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಕಾಂಗ್ರೆಸ್ ಪಕ್ಷವು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದು ಕೊಂಡಿದೆ. ಕೇವಲ ನರೇಂದ್ರ ಮೋದಿ ರವರನ್ನು ಸೋಲಿಸಿದರೆ ಸಾಕು ಎಂದು ಹವಣಿಸುತ್ತಿರುವ ಕಾಂಗ್ರೆಸ್ ಪಕ್ಷವು ತಾನು ಒಂದು ರಾಷ್ಟ್ರೀಯ ಪಕ್ಷ ಎಂಬುದನ್ನು ಮರೆತು ಪ್ರಾದೇಶಿಕ ಪಕ್ಷಗಳ ಮೊರೆ ಹೋಗಿ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡು ಸೀಟು ಹಂಚಿಕೆಯ ವಿಚಾರಗಳಲ್ಲಿಯೂ ಸಹ ಬಹಳಷ್ಟು ತಾಳ್ಮೆಯಿಂದ ವ್ಯವಹರಿಸಿ ಬೇರೆ ದಾರಿಯಿಲ್ಲದೆ ಚುನಾವಣೆಯನ್ನು ಎದುರಿಸುತ್ತಿದೆ. ಹೀಗಿರುವಾಗ ತನ್ನ ಪ್ರಚಾರಕ್ಕಾಗಿ ಕೇವಲ ಎರಡು ಟ್ವೀಟ್ ಪ್ರಮೋಟ್ ಮಾಡಲು ಕಾಂಗ್ರೆಸ್ ಪಕ್ಷ ವ್ಯಹಿಸಿದ ಲಕ್ಷಗಳು ಎಷ್ಟು ಗೊತ್ತಾ??

ದೆಹಲಿಯ ಚುನಾವಣೆಯ ಹಿಂದಿನ ದಿನ ಕೇವಲ ಎರಡು ಟ್ವೀಟ್ ಗಳನ್ನು ಪೋಸ್ಟ್ ಮಾಡಿ ಪ್ರಮೋಟ್ ಮಾಡಿರುವ ಕಾಂಗ್ರೆಸ್ ಪಕ್ಷವು ಬರೋಬ್ಬರಿ 6.8 ಲಕ್ಷ ರೂಗಳನ್ನು ಟ್ವಿಟರ್ ಗೆ ಪಾವತಿಸಿದೆ. ಈ ವಿಷಯವನ್ನು ಖುದ್ದು ತನ್ನ ಅಧಿಕೃತ ವೆಬ್ಸೈಟ್ ಅಲ್ಲಿ ಟ್ವಿಟರ್ ಸಂಸ್ಥೆಯು ಬಿಡುಗಡೆ ಮಾಡಿದ್ದು, ಬಿಜೆಪಿ ಪಕ್ಷದ ಅಭಿವೃದ್ಧಿಯ ಬಗ್ಗೆ ವ್ಯಂಗ್ಯಭರಿತವಾಗಿ ಮಾಡಿರುವ ವಿಡಿಯೋ ಹೆಚ್ಚು ಜನರಿಗೆ ತಲುಪಲಿ ಎಂದು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಮೋಟ್ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿ ಪಕ್ಷವೂ ಸಹ 1.4 ಲಕ್ಷ ಹಣವನ್ನು ತನ್ನ ಇಡೀ ಚುನಾವಣೆಯ ಪ್ರಚಾರಕ್ಕಾಗಿ  ಟ್ವಿಟರ್ ಖಾತೆಯಲ್ಲಿ ಬಳಸಿಕೊಂಡಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಇನ್ನುಳಿದಂತೆ ಒಡಿಶಾ ರಾಜ್ಯದ ಪಟ್ನಾಯಕ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ.

Post Author: Ravi Yadav