ಚೌಕಿದಾರ್ ಚೋರ್ ಹೈ ಎಂದು ದೂಷಿಸುವ ಸಂಸದರ ಆಸ್ತಿ ಬಗ್ಗೆ ನಿಮಗೆ ಗೊತ್ತಾ??

ಬಹುಶಹ ಇಡೀ ವಿಶ್ವದ ಪ್ರಧಾನ ಮಂತ್ರಿಗಳ ಆಸ್ತಿಗೆ ಹೋಲಿಸಿಕೊಂಡರೆ ನರೇಂದ್ರ ಮೋದಿ ರವರ ಆಸ್ತಿ ಬಹಳ ತೀರ ಕಡಿಮೆ, ತದ ನಂತರದ ಸ್ಥಾನದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷರಾಗಿರುವ ಬರಾಕ್ ಒಬಾಮಾ ರವರು ನಿಲ್ಲುತ್ತಾರೆ ಎಂಬ ಮಾಹಿತಿ ಹಲವಾರು ತಿಂಗಳುಗಳ ಹಿಂದೆ ಹೊರಬಿದ್ದಿತ್ತು. ಇದೀಗ ಕೆಲವು ಕಾಂಗ್ರೆಸ್ ಮಾಜಿ ಸಂಸದರ ಆಸ್ತಿಯ ವಿವರ ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಯಾಕೆಂದರೆ ಸದಾ ನರೇಂದ್ರ ಮೋದಿ ರವರನ್ನು ಕಳ್ಳರು ಎಂದು ದೂಷಿಸುವ ಕಾಂಗ್ರೆಸ್ ಪಕ್ಷದ ಕೆಲವು ಸಂಸದರ ಆಸ್ತಿ ಕೇವಲ ಐದು ವರ್ಷಗಳಲ್ಲಿ ಎಷ್ಟು ಏರಿಕೆ ಕಂಡಿದೆ ಗೊತ್ತಾ?? ಕೆಲವು ಪ್ರಮುಖ ಸಂಸದರ ದಿಡೀರ್ ಆಸ್ತಿ ಏರಿಕೆಯ ಸಂಕ್ಷಿಪ್ತ ವರದಿಗಾಗಿ ಕೆಳಗಡೆ ಓದಿ.

ಮಧ್ಯಪ್ರದೇಶದ ಗುನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ ರವರ ಆಸ್ತಿ ಮೊತ್ತ 2014 ರಲ್ಲಿ ಕೇವಲ 33 ಕೋಟಿ ರೂ ಆಗಿತ್ತು. ಆದರೆ ಇದೀಗ ನೇರವಾಗಿ 341 ಕೋಟಿ ಏರಿಕೆ ಕಂಡು ಬರೋಬ್ಬರಿ 374 ಕೋಟಿ ಆಸ್ತಿಯನ್ನು ಬಹಿರಂಗಗೊಳಿಸಿದ್ದಾರೆ. ಇನ್ನು ಇವರನ್ನು ಮೀರಿಸುವಂತೆ ಇರುವ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿಶ್ವೇಶ್ವರ ರೆಡ್ಡಿ ಅವರು ಕಳೆದ ಬಾರಿ 528 ಕೋಟಿ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿದ್ದರು, ಈ ಬಾರಿ ತಮ್ಮ ಆಸ್ತಿಯ ಪ್ರಮಾಣವನ್ನು 366 ಕೋಟಿ ಹೆಚ್ಚಿಸಿಕೊಂಡು 895 ಕೋಟಿ ರೂ ಆಸ್ತಿ ತೋರಿಸಿದ್ದಾರೆ. ಇನ್ನು ಕರ್ನಾಟಕದ ಸಿರಿವಂತ ಅಭ್ಯರ್ಥಿಗಳ ಪೈಕಿ ಮೊದಲನೆ ಸಾಲಿನಲ್ಲಿ ನಿಲ್ಲುವ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿಕೆ ಸುರೇಶ್ ರವರು ಕಳೆದ ಬಾರಿ ಕೇವಲ 85 ಕೋಟಿ ಆಸ್ತಿ ವಿವರಗಳನ್ನು ಸಲ್ಲಿಸಿದ್ದರು, ಆದರೆ ಈ ಬಾರಿ 338 ಕೋಟಿ ಆಸ್ತಿಯ ವಿವರಗಳನ್ನು ಸಲ್ಲಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಇಷ್ಟೆಲ್ಲಾ ಆಸ್ತಿ ಏರಿಕೆ ಕಂಡರೂ ಚೌಕಿದಾರ್ ಚೋರ್ ಹೈ. ನಗು ಬರುತ್ತಿಲ್ಲವೇ???

Post Author: Ravi Yadav