ಜೆಡಿಎಸ್ ಕುಟುಂಬಕ್ಕೆ ಭರ್ಜರಿ ಟಾಂಗ್ ನೀಡಿದ ಅಂಬರೀಶ್ ಪುತ್ರ- ವೈರಲ್ ಆಯ್ತು ಅಭಿಷೇಕ್ ಅಣ್ಣನ ಮಾತು

ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆಯು ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಕನ್ನಡಿಗರ ನೆಚ್ಚಿನ ದಿವಂಗತ ಅಂಬರೀಶ್ ಅಣ್ಣನವರ ಧರ್ಮ ಪತ್ರಿ ಯಾಗಿರುವ ಸುಮಲತಾ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಆಗಿರುವ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮೊದಲಿನಿಂದಲೂ ಬಾರಿ ಜನ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ಸುಮಲತಾ ರವರು ಗೆಲ್ಲುವ ಸೂಚನೆಗಳು ಕಾಣಸಿಗುತ್ತಿದ್ದರೂ ಕೊನೆಯಲ್ಲಿ ಮತದಾರ ಯಾವ ಪಕ್ಷಕ್ಕೆ ಮತ ನೀಡಿದ್ದಾನೆ ಎಂಬುದು ಯಾರ ಊಹೆಗೂ ಸಿಗುತ್ತಿಲ್ಲ. ಹೀಗಿರುವಾಗ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕುಮಾರಸ್ವಾಮಿ ಹಾಗೂ ಕುಟುಂಬದವರು ನಿಖಿಲ್ ಕುಮಾರಸ್ವಾಮಿ ರವರ ಗೆಲುವಿಗಾಗಿ ದೇವಸ್ಥಾನಗಳ ಮೇಲೆ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ, ಹೋಮ ಹವನ ಎಂದು ನಿರತರಾಗಿದ್ದಾರೆ.

ಜೆಡಿಎಸ್ ಪಕ್ಷದ ಈ ನಡೆಗೆ ಪ್ರತಿಕ್ರಿಯೆ ನೀಡಿರುವ ಅಂಬರೀಶ್ ರವರ ಪುತ್ರ ಅಭಿಷೇಕ ರವರು ಮಂಡ್ಯ ತಾಲೂಕಿನ ಹನಿಯಂಬಾಡಿಯಲ್ಲಿ ತಮ್ಮ ಆಪ್ತರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿ ಜನರು ಈಗಾಗಲೇ ತಮ್ಮ ನಿರ್ಧಾರವನ್ನು ಮತಯಂತ್ರಗಳಲ್ಲಿ ತೀರ್ಮಾನ ಮಾಡಿದ್ದಾರೆ. ಎಷ್ಟು ಸಮೀಕ್ಷೆ ನಡೆಸಿದರೂ ಫಲಿತಾಂಶ ಬದಲಾಗುವುದಿಲ್ಲ, ಹೋಮ ಪೂಜೆ ಮಾಡಿಸಿದರೆ ಮತ ಯಂತ್ರದಲ್ಲಿ ಇರುವ ಮತಗಳು ಬದಲಾಗಲು ಸಾಧ್ಯವಿಲ್ಲ ಎಂದು ಜೆಡಿಎಸ್ ಪಕ್ಷದ ದೇವಸ್ಥಾನಗಳ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಅಭಿಷೇಕ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲರೂ ಸತ್ಯ ಹಾಗೂ ಸುಮಲತಾ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ಅಭಿಷೇಕ್ ಅವರ ಮಾತಿಗೆ ಜೈ ಎಂದಿದ್ದಾರೆ.

Post Author: Ravi Yadav