24 ಗಂಟೆಗಳಲ್ಲಿ ಆಪರೇಷನ್ ಕಮಲ ಸಕ್ಸಸ್- ಬಿಎಸ್ವೈ ನೀಡಿದ ಶಾಕ್ ಗೆ ಬೆಚ್ಚಿಬಿದ್ದ ಡಿಕೆಶಿ.

ಮುಂದಿನ ರಾಜ್ಯ ಸರ್ಕಾರದ ಭವಿಷ್ಯ ಚುನಾವಣೆಯೆಂದೇ ಬಿಂಬಿತವಾಗುತ್ತಿರುವ ಕರ್ನಾಟಕದ 2 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಕ್ಷಣ ಕ್ಷಣವೂ ರಂಗೇರುತ್ತಿದೆ. ದೋಸ್ತಿ ಸರ್ಕಾರವು ಅಧಿಕಾರದ ಗದ್ದುಗೆಯನ್ನು ಉಳಿಸಿಕೊಳ್ಳಬೇಕು ಎಂದರೆ ಈ ಎರಡು ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ದೋಸ್ತಿ ಗಳನ್ನು ಸೋಲಿಸಿ ಮೈತ್ರಿ ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ತಂದು, ತನ್ನ ಸಂಖ್ಯಾಬಲವನ್ನು 106ಕ್ಕೆ ಏರಿಸಿಕೊಂಡು ಪಕ್ಷೇತರ ಅಭ್ಯರ್ಥಿಗಳ ಬೆಂಬಲವನ್ನು ತೆಗೆದುಕೊಂಡು ಬಿಜೆಪಿ ಪಕ್ಷವು 109 ಕ್ಕೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಹೋರಾಡುತ್ತಿದೆ.

ಇನ್ನು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಶಿವಳ್ಳಿ ಅವರ ನಿಧನದಿಂದ ತೆರವಾಗಿರುವ, ಕುಂದಗೋಳ ವಿಧಾನಸಭಾ ಕ್ಷೇತ್ರವು ಸಹ ಮತ್ತಷ್ಟು ಕುತೂಹಲವನ್ನು ಕೆರಳಿಸುತ್ತಾ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಅವರು ಕುಂದಗೋಳ ವಿಧಾನಸಭಾ ಕ್ಷೇತ್ರವನ್ನು ತಮ್ಮ ಸ್ನೇಹಿತ ಶಿವಳ್ಳಿ ರವರಿಗಾಗಿ ಸ್ವಂತ ಪ್ರತಿಷ್ಠೆಯನ್ನು ಪಣಕ್ಕೆ ಇಟ್ಟು ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಕೋಟ್ಯಂತರ ಹಣ ವಿಧಾನಸಭಾ ಚುನಾವಣೆಗೆ ಖರ್ಚು ಮಾಡಲಾಗುತ್ತಿದೆ, ಬಿಜೆಪಿ ಮುಖಂಡರಿಗೆ ಬರೋಬ್ಬರಿ ಒಬ್ಬರಿಗೆ 5 ಲಕ್ಷ ಆಫರ್ ನೀಡಲಾಗುತ್ತಿದೆ ಎಂಬ ಆರೋಪಗಳು ಸಹ ಡಿಕೆ ಶಿವಕುಮಾರ್ ಅವರ ಮೇಲೆ ಕೇಳಿ ಬಂದಿದ್ದವು. ಈ ಹೇಳಿಕೆಗಳಿಗೆ ಮತ್ತಷ್ಟು ಪೂರಕ ಎಂಬಂತೆ ಇದ್ದಕ್ಕಿದ್ದ ಹಾಗೆ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸೇರಿಕೊಂಡಿದ್ದರು.

ಇದೀಗ ಡಿಕೆ ಶಿವಕುಮಾರ್ ಅವರ ಆಪರೇಷನ್ ಕಾಂಗ್ರೆಸ್ ಗೆ ಶಾಕ್ ನೀಡಿರುವ ಬಿ ಎಸ್ ಯಡಿಯೂರಪ್ಪನವರು ತಮ್ಮ ರಾಜಕೀಯ ತಂತ್ರದ ಮೂಲಕ ಡಿಕೆ ಶಿವಕುಮಾರ್ ರವರನ್ನು ಬೆಚ್ಚಿ ಬೀಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಕಡಿಮೆ ಸಂಖ್ಯೆಯಲ್ಲಿ ಇರುವ ಕ್ಷೇತ್ರದಲ್ಲಿ ಕೇವಲ ಒಬ್ಬ ಬಿಜೆಪಿ ಮುಖಂಡರನ್ನು ಸೆಳೆದು ಬೀಗುತ್ತಿದ್ದ ಡಿಕೆ ಶಿವಕುಮಾರ್ ಅವರಿಗೆ, ಬಿ ಎಸ್ ಯಡಿಯೂರಪ್ಪನವರು ಒಂದೇ ಬಾರಿಗೆ ಹಲವಾರು ಕಾಂಗ್ರೆಸ್ ಮುಖಂಡರನ್ನು ಸೆಳೆಯುವ ಮೂಲಕ ದೊಡ್ಡ ಶಾಕ್ ನೀಡಿದ್ದಾರೆ. ಕೆಲವು ಗಂಟೆಗಳ ಹಿಂದಷ್ಟೇ ಡಿಕೆ ಶಿವಕುಮಾರ್ ಹಾಗೂ ಯಡಿಯೂರಪ್ಪ ನಡುವೆ ವಾಕ್ಸಮರ ಹೆಚ್ಚಾಗಿದ್ದು, ಇದಾದ ಕೆಲವೇ ಕೆಲವು ಗಂಟೆಗಳ ನಂತರ ಬಿಜೆಪಿ ಪಕ್ಷಕ್ಕೆ ಹಲವಾರು ಕಾರ್ಯಕರ್ತರ ದಂಡು ಹರಿದು ಬಂದಿದ್ದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಒಬ್ಬ ಬಿಜೆಪಿ ಮುಖಂಡನಿಗೆ ಬದಲಾಗಿ ಕಾಂಗ್ರೆಸ್ ಪಕ್ಷದ ಕುಬಿಹಾಳ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿರುವ ಈಶ್ವರಪ್ಪ ರವರು, ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಇಂದು ಬಿಜೆಪಿ ಪಕ್ಷಕ್ಕೆ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಅವರ ಆಪರೇಷನ್ ಕಾಂಗ್ರೆಸ್ ಗೆ ಭರ್ಜರಿಯಾಗಿ ತಿರುಗೇಟು ನೀಡಿರುವ ಬಿ ಎಸ್ ಯಡಿಯೂರಪ್ಪನವರು ತಮ್ಮ ರಾಜತಾಂತ್ರಿಕತೆ ಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ. ಇನ್ನು ಕೇವಲ ಕೆಲವೇ ಕೆಲವು ದಿನಗಳು ಮತದಾನಕ್ಕೆ ಬಾಕಿ ಉಳಿದಿರುವ ಕಾರಣ ಪಕ್ಷಾಂತರ ಗಳು ಬಾರಿ ಮಹತ್ವವನ್ನು ಪಡೆದುಕೊಳ್ಳುತ್ತಿದ್ದು, ಈಗಾಗಲೇ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವನ್ನು ಖಚಿತಪಡಿಸಿಕೊಂಡಿರುವ ಬಿಜೆಪಿ ಪಕ್ಷವು ಒಂದು ವೇಳೆ ಇದೇ ವರ್ಚಸ್ಸನ್ನು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿಯೂ ಚುನಾವಣೆಯವರೆಗೂ ಉಳಿಸಿಕೊಂಡಿದ್ದಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರವು ಸಹ ಕೇಸರಿಮಯ ವಾಗಲಿದೆ ಹಾಗೂ ಬಿಜೆಪಿ ಪಕ್ಷವು ಅಧಿಕಾರಕ್ಕೆ ಮತ್ತಷ್ಟು ಹತ್ತಿರ ವಾಗಲಿದೆ.

Post Author: Ravi Yadav