ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಾರಣ ಯಾರು ಗೊತ್ತಾ?? ಕೇಜ್ರಿವಾಲ್ ರವರ ವರದಿ

ಇಡೀ ದೇಶದಲ್ಲಿ ಇದೀಗ ನರೇಂದ್ರ ಮೋದಿ ಅಲೆಯು ಸುನಾಮಿಯಾಗಿ ಪರಿವರ್ತನೆ ಗೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಷ್ಟೇ ಆತ್ಮವಿಶ್ವಾಸದಿಂದ ನರೇಂದ್ರ ಮೋದಿರವರು ಸಹ ಮತ್ತೊಮ್ಮೆ ಪ್ರಧಾನಿ ಯಾಗುತ್ತೇನೆ ಎಂದು ಮುಂದುವರೆದು ಈಗಾಗಲೇ ದೇಶದ ನೂರು ದಿನಗಳ ದಿಕ್ಸೂಚಿ ಯನ್ನು ತಯಾರಿಸಿ ಕೇವಲ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನರೇಂದ್ರ ಮೋದಿ ಅವರನ್ನು ಕಟ್ಟಿಹಾಕಲು ಹಲವಾರು ಪಕ್ಷಗಳು ಟೊಂಕಕಟ್ಟಿ ನಿಂತಿರುವ ಸಮಯದಲ್ಲಿ ಅರವಿಂದ ಕೇಜ್ರಿವಾಲ್ ಅವರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದ್ದಾರೆ. ಈ ಮಾತಿನ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ಭಯ ಕೇಜ್ರಿವಾಲ್ ರವರಿಗೆ ಕಾಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಇದು ಸೋಲಿನ ಭೀತಿ ಯೋ ಅಥವಾ ಹತಾಶೆಯೋ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ, ಆದರೆ ದೆಹಲಿಯ ಮುಖ್ಯಮಂತ್ರಿಗಳಾಗಿರುವ ಅರವಿಂದ ಕೇಜ್ರಿವಾಲ್ ರವರು ಬಿಜೆಪಿ ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅದಕ್ಕೆ ಈಗಲೇ ಒಬ್ಬರನ್ನು ಹೊಣೆ ಮಾಡಿದ್ದಾರೆ. ಪಿ ಟಿ ಐ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್ ರವರು ಒಂದು ವೇಳೆ ಬಿಜೆಪಿ ಪಕ್ಷವು ಬಹುಮತವನ್ನು ಸಾಧಿಸಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ ಅದಕ್ಕೆ ನೇರ ಕಾರಣ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯೇ ಹೊರತು ಬೇರೆ ಯಾರು ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿರುವ ನಮೋ ಭಕ್ತರು ಹೌದು ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕ ಎಂದರೆ ಸುಮ್ಮನಲ್ಲ ಅವರು ಪ್ರಚಾರ ಮಾಡಿದ ಮೇಲೆ ನೂರಕ್ಕೆ ನೂರರಷ್ಟು ನರೇಂದ್ರ ಮೋದಿರವರು ಗೆದ್ದು ಬರುತ್ತಾರೆ ಎಂದು ಅರವಿಂದ ಕೇಜ್ರಿವಾಲ್ ರವರ ಸಮೇತ ರಾಹುಲ್ ಗಾಂಧಿ ರವರ ಕಾಲೆಳೆದಿದ್ದಾರೆ.

Post Author: Ravi Yadav