ಜೆಡಿಎಸ್ ಗೆ ಮರ್ಮಾಘಾತ- ಕೊನೆ ಹಂತದ ಗುಪ್ತಚರ ವರದಿ ಕಂಡು ಬೆಚ್ಚಿಬಿದ್ದ ಸಿಎಂ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಡೀ ಕರ್ನಾಟಕ ರಾಜ್ಯದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅತಿ ಹೆಚ್ಚು ಗಮನವನ್ನು ಸೆಳೆದಿದೆ ಎಂದರೆ ತಪ್ಪಾಗಲಾರದು. ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯ ಜಿಲ್ಲೆಯು ಭಾರೀ ಕುತೂಹಲವನ್ನು ಮೂಡಿಸಿದೆ. ಬಹಿರಂಗವಾಗಿ ಬೆಂಬಲ ನೀಡುವ ವಿಷಯಕ್ಕೆ ಬಂದರೆ ಸುಮಲತಾ ಅಂಬರೀಶ್ ರವರ ಮುಂದೆ ನಿಖಿಲ್ ಕುಮಾರಸ್ವಾಮಿ ರವರು ಸೋಲುವುದು ಖಚಿತ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದ ಕೆಲವು ಆಣೆ ಪ್ರಮಾಣಗಳ ಹಾಗೂ ಹಣದ ಹರಿವಿನ ಲೆಕ್ಕಾಚಾರಗಳನ್ನು ತೆಗೆದುಕೊಂಡು ನೋಡಿದರೆ ಯಾವ ಪಕ್ಷ ಗೆಲ್ಲುತ್ತದೆ ಎಂದು ಹೇಳಲು ಕಷ್ಟವಾಗುತ್ತದೆ ಎಂದು ಸಹ ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನು ಮಗನ ಗೆಲುವಿಗಾಗಿ ಭಾರಿ ತಲೆಕೆಡಿಸಿಕೊಂಡಿರುವ ಕುಮಾರಸ್ವಾಮಿ ರವರಿಗೆ ಈಗಾಗಲೇ ಹಲವು ಬಾರಿ ಶಾಕ್ ಗಳು ಎದುರಾಗಿದೆ. ರಾಜ್ಯದ ಗುಪ್ತಚರ ಇಲಾಖೆಯನ್ನು ಮಗನ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಬಳಸಿಕೊಳ್ಳುತ್ತಿರುವ ಕುಮಾರಸ್ವಾಮಿ ರವರಿಗೆ ಮೊದಲಿನಿಂದಲೂ ಗುಪ್ತಚರ ಇಲಾಖೆಯು ಒಮ್ಮೆಯು ಸಿಹಿಸುದ್ದಿಯನ್ನು ನೀಡಿಲ್ಲ. ಈಗಾಗಲೇ ಹಲವು ಹಂತಗಳಲ್ಲಿ ಗುಪ್ತಚರ ಇಲಾಖೆಯು ವರದಿ ನೀಡಿರುವ ಕಾರಣ ಕೊನೆಯ ಬಾರಿಗೆ ಮಂಡ್ಯ ಜಿಲ್ಲೆಯ ತಳಮಟ್ಟದಲ್ಲಿ ವರದಿಯನ್ನು ನೀಡುವಂತೆ ಗುಪ್ತಚರ ಇಲಾಖೆಗೆ ಆದೇಶಿಸಿದ್ದರು ಎನ್ನಲಾಗಿದೆ. ತಳಮಟ್ಟದ ಈ ಗುಪ್ತಚರ ಇಲಾಖೆಯ ವರದಿಯು ಇದೀಗ ಹೊರಬಿದ್ದಿದ್ದು ಕುಮಾರಸ್ವಾಮಿ ರವರು ಈ ವರದಿ ಕಂಡು ಬೆಚ್ಚಿ ಬಿದ್ದಿರುವುದು ಸತ್ಯ.

ಗುಪ್ತಚರ ಇಲಾಖೆಯು ನಡೆಸಿರುವ ವರದಿಯ ಪ್ರಕಾರ ಮಂಡ್ಯ ಜಿಲ್ಲೆಯ ನಾಗಮಂಗಲ, ಮೇಲುಕೋಟೆ, ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕೊಂಚ ಮಟ್ಟಿಗೆ ನಿಖಿಲ್ ಕುಮಾರಸ್ವಾಮಿ ಅವರು ಲೀಡ್ ಪಡೆದುಕೊಳ್ಳಲಿದ್ದಾರೆ. ಆದರೆ ಉಳಿದ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಕೆ ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಲತಾ ರವರು ಭಾರಿ ಅಂತರದಿಂದ ಲೀಡ್ ಪಡೆದುಕೊಂಡು ಬಹಳ ಸುಲಭವಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲು ಇದ್ದಾರೆ ಎಂಬ ಫಲಿತಾಂಶ ಹೊರಬಿದ್ದಿದೆ. ಕಾರಣಗಳ ಸಮೇತ ತನ್ನ ನಿಲುವನ್ನು ಸ್ಪಷ್ಟ ಪಡಿಸಿರುವ ಗುಪ್ತಚರ ಇಲಾಖೆಯ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಇನ್ನು ಇನ್ನು ಗುಪ್ತಚರ ಇಲಾಖೆಯು ನಿಖಿಲ್ ಕುಮಾರಸ್ವಾಮಿ ರವರ ಹಿನ್ನಡೆ ಮುನ್ನಡೆ ಗೆ ಕಾರಣಗಳನ್ನು ತಿಳಿಸಿ ವರದಿಯನ್ನು ಸಿದ್ಧ ಮಾಡಿದ್ದು ವರದಿ ಹೊರಬಿದ್ದ ತಕ್ಷಣ ಕುಮಾರಸ್ವಾಮಿ ಅವರು ತಮ್ಮ ಆಪ್ತರನ್ನು ಕರೆಸಿಕೊಂಡು ಸಂಪೂರ್ಣ ಸಮಾಲೋಚನೆಯಲ್ಲಿ ತೊಡಗಿಕೊಂಡಿದ್ದರು ಎಂಬ ಸುದ್ದಿ ಹೊರಬಿದ್ದಿದೆ. ರೆಸಾರ್ಟ್ ನಲ್ಲಿ ವಿಶ್ರಾಂತಿ ಮೂಡ್ ನಲ್ಲಿದ್ದ ಕುಮಾರಸ್ವಾಮಿ ರವರು ಮುಂದಿನ ವಿಧಾನಸಭಾ ಉಪಚುನಾವಣೆಯ ಪ್ರಚಾರ ಕಾರ್ಯಕ್ರಮಕ್ಕಾಗಿ ತೆರಳಲು ಸಿದ್ಧವಾಗಿದ್ದರು. ಇದೀಗ ಈ ಫಲಿತಾಂಶ ಹೊರಬಿದ್ದ ಕಾರಣ ಕುಮಾರಸ್ವಾಮಿ ರವರ ಸಭೆಗಳು ಮತ್ತಷ್ಟು ಹೆಚ್ಚಾಗಲಿದೆ.

ಜೆಡಿಎಸ್ ಜೆಡಿಎಸ್ ಪಕ್ಷಕ್ಕೆ ಇದೀಗ ಅಂತರ್ಯುದ್ಧದ ಭೀತಿ ಕಾಡುತ್ತಿದ್ದು, ಈಗಾಗಲೇ ಹಲವಾರು ಜೆಡಿಎಸ್ ನಾಯಕರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿಯೂ ಸಹ ನಿಖಿಲ್ ಕುಮಾರಸ್ವಾಮಿ ರವರಿಗೆ ತಳಮಟ್ಟದಲ್ಲಿ ಬೆಂಬಲ ನೀಡದೇ ಕೇವಲ ಮಾಧ್ಯಮಗಳ ಮುಂದೆ ಹೇಳಿಕೆಗಷ್ಟೇ ಸೀಮಿತ ಮಾಡಿ, ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರಿಗೆ ಬಹಳ ತಳಮಟ್ಟದಲ್ಲಿ ಬೆಂಬಲ ನೀಡಿ ತಮ್ಮ ಬೆಂಬಲಿಗರನ್ನು ಸುಮಲತಾ ರವರಿಗೆ ಮತ ನೀಡುವಂತೆ ಪ್ರೇರೇಪಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಜೆಡಿಎಸ್ ಪಕ್ಷದ ಕೆಲವು ಶಾಸಕರು ಖುದ್ದು ಈ ವಿಷಯವನ್ನು ಕುಮಾರಸ್ವಾಮಿ ರವರ ಗಮನಕ್ಕೆ ತಂದಿರುವುದಾಗಿ ಮಾಹಿತಿಗಳು ಲಭ್ಯವಾಗಿವೆ. ಕಾಂಗ್ರೆಸ್‌ನ ಪರಾಜಿತ ಶಾಸಕರು, ಬಿಜೆಪಿ, ರೈತಸಂಘ ಎಲ್ಲರೂ ಒಗ್ಗೂಡಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕಾರ್ಯಾಚರಣೆ ನಡೆಸಿರುವುದು ಸಿಎಂಗೆ ತಲೆನೋವು ತಂದಿದ್ದರೆ, ಜೆಡಿಎಸ್‌ ಶಾಸಕರಲ್ಲಿ ಕೆಲವರು ಚುನಾವಣೆ ವೇಳೆ ಸರಿಯಾಗಿ ಕೆಲಸ ಮಾಡದಿರುವುದು ಪುತ್ರನ ಸೋಲಿನ ಆತಂಕ ಹೆಚ್ಚುವಂತೆ ಮಾಡಿದೆ. ಮಹಿಳಾ ಮತ್ತು ಯುವ ಮತದಾರರ ಬಗ್ಗೆ ಗುಪ್ತಚರ ಇಲಾಖೆ ನಿಖರ ವರದಿ ನೀಡುವಲ್ಲಿ ವಿಫಲವಾಗಿದೆ ಎಂಬ ಮಾಹಿತಿ ಇದ್ದು, ಮಂಡ್ಯದ ಬಿಜೆಪಿ, ರೈತ ಸಂಘ ಮತ್ತು ಜೆಡಿಎಸ್ ನ ಕೆಲ ಅತೃಪ್ತರು ಸುಮಲತಾಗೆ ಬೆಂಬಲ ನೀಡಿರುವುದು ಸಿಎಂಗೆ ನುಂಗಲಾರದ ತುಪ್ಪವಾಗಿದೆ ಎನ್ನಲಾಗುತ್ತಿದೆ.

ಕ್ಷೇತ್ರದೊಳಗೆ ಮತದಾರರು ಬಹಿರಂಗವಾಗಿಯೇ ಸುಮಲತಾ ಅವರನ್ನು ಬೆಂಬಲಿಸಿರುವುದಾಗಿ ಮಾತನಾಡುತ್ತಿದ್ದಾರೆ. ಈ ವರದಿಯ ಆಧಾರದ ಮೇಲೆ ಸುಮಲತಾ ಗೆಲುವು ಖಚಿತ ಎಂದೇ ಹೇಳಲಾಗುತ್ತಿದೆ. ಆದರೆ, ಅಂತಿಮವಾಗಿ ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎನ್ನುವುದು ಮೇ 23ರಂದು ಅಧಿಕೃತವಾಗಿ ಬಹಿರಂಗವಾಗಲಿದೆ ಅದಕ್ಕೂ ಮುನ್ನ ಸಮೀಕ್ಷೆಗಳು ಸಮೀಕ್ಷೆಗಳೇ ಎಂದು ಸುಮ್ಮನಾಗೋಣ ಎಂದು ಜೆಡಿಎಸ್ ನಾಯಕರು ಅಭಿಪ್ರಾಯ ಹೊರಹಾಕಿದ್ದಾರೆ. ಗುಪ್ತಚರ ಇಲಾಖೆ ಈವರೆಗೆ ಸಲ್ಲಿಸಿರುವ 3 ವರದಿಗಳು ಕುಮಾರಸ್ವಾಮಿಗೆ ನಿದ್ದೆಗೆಡಿಸುವಂತೆ ಮಾಡಿದ್ದವು. ಕೊನೆಯ ಹಂತದಲ್ಲಿ ನಡೆಸಿರುವ ಅಂತಿಮ ವರದಿಯೂ ಪುತ್ರನ ಗೆಲುವಿಗೆ ವಿರುದ್ಧವಾಗಿಯೇ ಬಂದಿರುವುದು ತಳಮಳ ಹಾಗೂ ಆತಂಕ ಮೂಡಿಸಿದೆ. ಆದರೆ, ನಿಖೀಲ್‌ ಸೋಲು-ಗೆಲುವಿನ ಬಗ್ಗೆ ಸ್ಪಷ್ಟತೆ ನೀಡದ ಗುಪ್ತಚರ ಇಲಾಖೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವರದಿ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.

Post Author: Ravi Yadav