ನನ್ನ ಮತ ಬಿಜೆಪಿಗೆ ಹೋಯಿತು ಎಂದ ಶರದ್ ಪವರ್ !! ಸೋಲುವ ಭೀತಿ ವಿಪಕ್ಷಗಳಿಗೆ ಎದುರಾಯಿತೇ??

ನನ್ನ ಮತ ಬಿಜೆಪಿಗೆ ಹೋಯಿತು ಎಂದ ಶರದ್ ಪವರ್ !! ಸೋಲುವ ಭೀತಿ ವಿಪಕ್ಷಗಳಿಗೆ ಎದುರಾಯಿತೇ??

ಕಳೆದ ಹತ್ತು ವರ್ಷಗಳ ಕಾಂಗ್ರೆಸ್ ನ ಅಧಿಕಾರ ಅವಧಿಯನ್ನು ಕೊನೆಗಾಣಿಸಲು ಇಡೀ ದೇಶದಲ್ಲಿ ಬಿಜೆಪಿ ಪಕ್ಷವು ನರೇಂದ್ರ ಮೋದಿ ಎಂಬ ಅಸ್ತ್ರವನ್ನು ಬಳಸಿಕೊಂಡಿತ್ತು. 2014ರಲ್ಲಿ ನರೇಂದ್ರ ಮೋದಿ ಎಂಬ ಬ್ರಹ್ಮಾಸ್ತ್ರಕ್ಕೆ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಕೊಚ್ಚಿಕೊಂಡು ಹೋಗಿ ಕೇವಲ ಎರಡಂಕಿ ಸ್ಥಾನಗಳಿಗೆ ತೃಪ್ತಿ ಪಟ್ಟಿತ್ತು. ತದನಂತರ ಇಡೀ ಭಾರತವೇ ಕೇಸರಿಮಯ ವಾಗುವ ಸೂಚನೆ ಕಂಡು ಬಂದು ಹಲವಾರು ರಾಜ್ಯಗಳಲ್ಲಿ ಸ್ಥಳೀಯ ಚುನಾವಣೆ ಯಿಂದ ಹಿಡಿದು ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಪಕ್ಷ ಗೆದ್ದು ಬೀಗುತ್ತಿತ್ತು. ಪರಿಸ್ಥಿತಿ ಹೀಗಿರುವಾಗ ವಿಪಕ್ಷಗಳು ಮತ ಯಂತ್ರದ ಮೇಲೆ ದೋಷವನ್ನು ಹೊರಿಸಿ ಬಿಜೆಪಿ ಪಕ್ಷವು ಈವಿಎಂ ಯಂತ್ರಗಳನ್ನು ಹ್ಯಾಕ್ ಮಾಡಿ ಗೆದ್ದು ಬೀಗುತ್ತಿದೆ ಎಂಬ ಆರೋಪವನ್ನು ಹೊರಿಸಿದ್ದರು.

ಇದೀಗ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಸಹ ಮತಯಂತ್ರಗಳನ್ನು ಬಳಸಬಾರದು ಎಂದು ಹಲವಾರು ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷವು ಸುಪ್ರೀಂ ಕೋರ್ಟಿನಲ್ಲಿ ಕೇಸು ದಾಖಲಿಸಿ ಹಲವಾರು ತಿಂಗಳುಗಳ ಕಾಲ ಹೋರಾಡಿದರು. ಆದರೆ ಪ್ರಕರಣ ಸಾಬೀತಾಗದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಸನ್ನೂ ವಜಾಗೊಳಿಸಿ ವಿರೋಧ ಪಕ್ಷಗಳಿಗೆ ಮತಯಂತ್ರ ಬಳಸುತ್ತೇವೆ ಎಂದು ಸ್ಪಷ್ಟ ಸಂದೇಶ ನೀಡಿತ್ತು. ಪ್ರತಿಬಾರಿಯೂ ಚುನಾವಣಾ ಫಲಿತಾಂಶ ಬಂದ ನಂತರ ಆರಂಭವಾಗುತ್ತಿದ್ದ ಈವಿಎಂ ಮೇಲಿನ ಆರೋಪಗಳು ಇದೀಗ ಫಲಿತಾಂಶಕ್ಕೂ ಮುನ್ನವೇ ಆರಂಭವಾಗಿದೆ. ಈ ಆರೋಪಗಳನ್ನು ಕೇಳಿದ ಬಿಜೆಪಿ ಪಕ್ಷದ ನಾಯಕರು ನರೇಂದ್ರ ಮೋದಿ ರವರ ಗೆಲುವು ಈಗಾಗಲೇ ಖಚಿತ ಗೊಂಡಂತೆ ಕಾಣುತ್ತಿದೆ ಆದ ಕಾರಣದಿಂದ ವಿಪಕ್ಷಗಳು ಈಗಲೇ ಟೀಕೆಗಳನ್ನು ಆರಂಭಿಸಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಎನ್ಸಿಪಿ ಪಕ್ಷದ ಮುಖ್ಯಸ್ಥ ರಾಗಿರುವ ಶರದ್ ಪವರ್ ರವರು ಶಾಕಿಂಗ್ ಹೇಳಿಕೆಯೊಂದನ್ನು ಹೊರಹಾಕಿದ್ದಾರೆ. ಬಿಜೆಪಿ ಪಕ್ಷದ ಗೆಲುವು ಈ ಬಾರಿ ಕಷ್ಟವಿದೆ, ಹಾಗೊಮ್ಮೆ ಬಿಜೆಪಿ ಪಕ್ಷವು ಗೆದ್ದರೂ ಸಹ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ ಎಂದು ಹೇಳಿಕೆಗಳನ್ನು ನೀಡುತ್ತಿದ್ದ ಶರದ್ ಪವಾರ್ ಅವರು ಇದೀಗ ಮತ ಯಂತ್ರಗಳ ಮೇಲೆ ಆರೋಪಗಳನ್ನು ಪ್ರತಿಪಾದಿಸುತ್ತಾ ತಮ್ಮ ಮತವೂ ಸಹ ಬಿಜೆಪಿ ಪಕ್ಷಕ್ಕೆ ಹೋಗಿದೆ, ಇದನ್ನು ನಾನೇ ನನ್ನ ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಮತ ಯಂತ್ರಗಳ ಮೇಲಿನ ಆರೋಪವನ್ನು ಎತ್ತಿಹಿಡಿದಿರುವ ಶರತ್ ಪವಾರ್ ಅವರ ಈ ಹೇಳಿಕೆ ಇದೀಗ ಬಾರಿ ಸದ್ದು ಮಾಡುತ್ತಿದೆ.

ಹೈದರಾಬಾದ್ ಹಾಗೂ ಗುಜರಾತಿನಲ್ಲಿ ಮತಯಂತ್ರಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದು ಅದು ನನ್ನ ಕಣ್ಣಿಗೆ ಬಿದ್ದಿದೆ. ಕೆಲವು ಜನರು ಮತಯಂತ್ರವನ್ನು ಮುಂದೆ ಇಟ್ಟು ಬಟನ್ ಪ್ರೆಸ್ ಮಾಡಲು ಹೇಳಿದರು, ನಾನು ನನ್ನ ಪಕ್ಷದ ಗಡಿಯಾರದ ಗುರುತಿಗೆ ಮತ ನೀಡಿದೆ ಆದರೆ ನನ್ನ ಮತ ಕಮಲದ ಗುರುತಿನ ಬಿಜೆಪಿ ಪಕ್ಷಕ್ಕೆ ಹೋಯಿತು ಇದನ್ನು ನನ್ನ ಕಣ್ಣಾರೆ ಕಂಡಿದ್ದೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಶರತ್ ಪವಾರ್ ರವರ ಹೇಳಿಕೆ ಭಾರಿ ಸದ್ದು ಮಾಡುತ್ತಿದ್ದು, ಇದೇ ಹೇಳಿಕೆಯನ್ನು ಮುಂದೆ ಇಟ್ಟುಕೊಂಡು ಚುನಾವಣಾ ಆಯೋಗಕ್ಕೆ ವಕೀಲರ ತಂಡ ದೂರು ನೀಡಿ ಶರದ್ ಪವಾರ್ ಅವರನ್ನು ಸಂಪೂರ್ಣ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಒಂದು ವೇಳೆ ಅದೇ ನಡೆದಲ್ಲಿ ಶರದ್ ಪವರ್ ರವರ ಹೇಳಿಕೆ ಅವರಿಗೆ ತಿರುಗುಬಾಣ ವಾಗುವ ಸಾಧ್ಯತೆ ಗಳಿವೆ.