ದೇಶದ ಭವಿಷ್ಯಕ್ಕಿಂತ, ತನ್ನ ನಟನೆ ಮುಖ್ಯವಾಯಿತೇ ರಶ್ಮಿಕಾ ಗೆ??

ಕೆಲವೇ ಕೆಲವು ವರ್ಷಗಳ ಹಿಂದೆ ನಟಿಸಿದ ಮೊದಲನೇ ಚಿತ್ರದಲ್ಲಿ ಇಡೀ ಕರ್ನಾಟಕದ ಹೃದಯ ಗೆದ್ದು ಕರ್ನಾಟಕದ ಕ್ರಷ್ ಎನಿಸಿಕೊಂಡಿದ್ದ ರಶ್ಮಿಕ ಮಂದನ್ನ ರವರು ಇತ್ತೀಚೆಗೆ ಭಾರಿ ಸುದ್ದಿ ಆಗುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಧೂಳ್ ಎಬ್ಬಿಸಿದ ನಂತರ ತೆಲುಗಿನ ಹಲವಾರು ಚಿತ್ರಗಳಲ್ಲಿ ನಟಿಸಿ ಈಗಾಗಲೇ ತೆಲುಗಿನ ಜನರ ಮನವನ್ನು ಕದ್ದಿರುವ ರಶ್ಮಿಕ ಮಂದನ್ನ ರವರು ಹಲವಾರು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಮತ್ತಷ್ಟು ಚಿತ್ರಗಳನ್ನು ಪಡೆದುಕೊಂಡು ಭೇಷ್ ಎನಿಸಿಕೊಂಡಿದ್ದಾರೆ. ಈಗಾಗಲೇ ಹಲವಾರು ದಿಗ್ಗಜ ನಟರೊಂದಿಗೆ ಸಿನಿಮಾ ಮಾಡಲು ಒಪ್ಪಿಗೆ ನೀಡಿರುವ ರಶ್ಮಿಕಾ ಮಂದನ್ನ ರವರು ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಯಾಕೆ ಗೊತ್ತಾ?? ತಿಳಿಯಲು ಸಂಪೂರ್ಣ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ದೇಶದ ಭವಿಷ್ಯಕ್ಕಾಗಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಕೊಡಗಿನ ಬೆಡಗಿ ರಶ್ಮಿಕ ಮಂದನ್ನ ರವರು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಮತದಾನದ ಹಕ್ಕನ್ನು ಹೊಂದಿದ್ದರು, ಆದರೆ ಹೈದರಾಬಾದ್ ನಲ್ಲಿ ತೆಲುಗು ಸಿನಿಮಾ ಒಂದರ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಮಾಹಿತಿ ಇದೀಗ ಹೊರಬಿದ್ದಿದ್ದು, ಅದೇ ಕಾರಣಕ್ಕಾಗಿ ಮತದಾನ ಮಾಡಿಲ್ಲ. ಕೇವಲ ಒಂದು ದಿನ ತಮ್ಮ ಶೂಟಿಂಗ್ ನಲ್ಲಿ ಬ್ರೇಕ್ ತೆಗೆದುಕೊಂಡು ದೇಶದ ಭವಿಷ್ಯಕ್ಕಾಗಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬಹುದಿತ್ತು ಎಂದು ಅಭಿಮಾನಿಗಳು ಆಕ್ರೋಶವನ್ನು ಹೊರ ಹಾಕಿದ್ದಾರೆ. ಆದರೆ ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ರವರಿಂದ ಯಾವುದೇ ಉತ್ತರ ಇದುವರೆಗೂ ಹೊರಬಿದ್ದಿಲ್ಲ.

Post Author: Ravi Yadav