ಕುಮಾರಸ್ವಾಮಿಗೆ ಟಾಂಗ್ ನೀಡಿ, ಸೇನೆಗೆ ಯಾವ ಕಾರಣಕ್ಕಾಗಿ ಸೇರುತ್ತಾರೆ ಎಂಬುದಕ್ಕೆ ಸ್ಪಷ್ಟನೆ ನೀಡಿದ ಮೋದಿ

ಕುಮಾರಸ್ವಾಮಿಗೆ ಟಾಂಗ್ ನೀಡಿ, ಸೇನೆಗೆ ಯಾವ ಕಾರಣಕ್ಕಾಗಿ ಸೇರುತ್ತಾರೆ ಎಂಬುದಕ್ಕೆ ಸ್ಪಷ್ಟನೆ ನೀಡಿದ ಮೋದಿ

ಇತ್ತೀಚಿಗೆ ಕರ್ನಾಟಕದ ಮುಖ್ಯಮಂತ್ರಿಗಳಾಗಿರುವ ಕುಮಾರಸ್ವಾಮಿ ಅವರು ದೇಶದ ಭದ್ರತೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಸೈನಿಕರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿತ್ತು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕುಮಾರಸ್ವಾಮಿ ಅವರು ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ, ದೇಶದ ಸೈನಿಕರು ಎರಡು ಹೊತ್ತು ಊಟಕ್ಕೆ ಗತಿ ಇಲ್ಲದ ಸೇನೆಗೆ ಸೇರುತ್ತಾರೆ, ಆದರೆ ನರೇಂದ್ರ ಮೋದಿರವರು ಅವರ ವಿಷಯದಲ್ಲಿ ತಮಾಷೆ ಮಾಡುತ್ತಾರೆ ಎಂಬ ಹೇಳಿಕೆ ನೀಡುವ ಮೂಲಕ ಭಾರೀ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದರು.

ಇದೇ ವಿಷಯವನ್ನು ಇಂದು ಚಿಕ್ಕೋಡಿ ಯಲ್ಲಿ ನಡೆದ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು ಸರಿಯಾದ ಉತ್ತರವನ್ನು ನೀಡಿ ಕುಮಾರಸ್ವಾಮಿ ರವರಿಗೆ ಟಾಂಗ್ ನೀಡಿದ್ದಾರೆ. ಮೊದಲಿನಿಂದಲೂ ದೇಶ ಹಾಗೂ ದೇಶದ ಸೈನಿಕರ ವಿಷಯದಲ್ಲಿ ಬಾರಿ ಕಟ್ಟುನಿಟ್ಟಿನ ಆಯಾಮಗಳನ್ನು ಪಾಲಿಸಿರುವ ನರೇಂದ್ರ ಮೋದಿ ಅವರು ಇಂದು ದೇಶದ ಭದ್ರತೆಯ ವಿಷಯದಲ್ಲಿ ಮತ್ತೊಮ್ಮೆ ಗುಡುಗಿದ್ದಾರೆ. ಈ ಹೇಳಿಕೆಯ ಮೂಲಕ ನೇರವಾಗಿ ಕುಮಾರಸ್ವಾಮಿರವರ ವಿವಾದಾತ್ಮಕ ಹೇಳಿಕೆಗೆ ಉತ್ತರ ನೀಡಿ ಸೇನೆಯ ಸೇರುವಿಕೆಗೆ ಕಾರಣ ತಿಳಿಸಿ ದ್ದಾರೆ. ಅಷ್ಟೇ ಅಲ್ಲದೆ ತಮ್ಮ ಯೋಜನೆ ಹಾಗೂ ಮುಂದಿನ ರೂಪುರೇಶೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಂದು ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು ದೇಶದ ರಕ್ಷಣೆ ಮಾಡುವವರು ಬಡವರು ಇರುತ್ತಾರೆ, ಶ್ರೀಮಂತರು ಇರುತ್ತಾರೆ, ಆದರೆ ಕರ್ನಾಟಕದ ಮುಖ್ಯ ಮಂತ್ರಿಗಳು ಸೈನಿಕರು ಗತಿ ಇಲ್ಲದವರು ಎಂದು ಹೇಳಿಕೆ ನೀಡುತ್ತಾರೆ. ಸೈನಿಕರ ಬಗ್ಗೆ ಇದು ಅತ್ಯಂತ ನೀಚವಾದ ಮಾತು ಅದಕ್ಕೆ ಎಲ್ಲರೂ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಎದುರಾಗಿದೆ, ದೇಶದ ಗಡಿಯಲ್ಲಿ ಯಾವೊಬ್ಬ ಯೋಧನು ಊಟಕ್ಕೆ ಗತಿಯಿಲ್ಲದೆ ಹೋಗುವುದಿಲ್ಲ ಬದಲಾಗಿ ದೇಶದ ಭದ್ರತೆಯ ವಿಚಾರದಲ್ಲಿ ಗುಂಡಿಗೆ ಎದೆ ಕೊಡಲು ಹೋಗುತ್ತಾರೆ, ಇಂತಹ ಮುಖ್ಯಮಂತ್ರಿಗಳ ಮಾತು ಸೈನಿಕರಿಗೆ ಮಾಡಿದ ಅವಮಾನ ಹೌದೋ ಅಲ್ಲವೋ ನೀವೇ ನಿರ್ಧರಿಸಿ, ಇಂತಹ ಮನಸ್ಥಿತಿಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ಎಂದು ತಿಳಿಸಿದ್ದಾರೆ.

ಇನ್ನೂ ರೈತರ ಬಗ್ಗೆ ಮಾತನಾಡಿದ ನರೇಂದ್ರ ಮೋದಿರವರು ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಮೂರು ಕೋಟಿ ರೈತರಿಗೆ ಈಗಾಗಲೇ ಲಾಭವಾಗಿದೆ. ಹಣದುಬ್ಬರವನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ನಿಯಂತ್ರಣ ಮಾಡಿದೆ. ಅರವತ್ತು ವರ್ಷಗಳ ಕಾಲ ನೀರಾವರಿ ಕ್ಷೇತ್ರವನ್ನು ಕಡೆಗಣಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿ ನಾವು ಪ್ರತ್ಯೇಕ ಜನಶಕ್ತಿ ಸಚಿವಾಲಯವನ್ನು ರಚನೆ ಮಾಡಲಿದ್ದೇವೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಹೊಸ ರಣ ರೀತಿಯನ್ನು ಈಗಾಗಲೇ ರೂಪಿಸಿದ್ದೇವೆ. ಆಯುಷ್ಮಾನ್ ಎಂಬ ಯೋಜನೆಯ ಮೂಲಕ ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಲು ಇದ್ದೇವೆ. ಯುವಜನತೆಯನ್ನು ಪ್ರೇರೇಪಿಸಲು ಮುದ್ರ ಯೋಜನೆಯ ಮೂಲಕ ಲೋನ್ ಗಳನ್ನು ನೀಡಿದ್ದೇವೆ, ಇನ್ನು 60ಕ್ಕೂ ಹೆಚ್ಚು ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿಯನ್ನು ನೀಡಲು ಈಗಾಗಲೇ ಯೋಜನೆಯನ್ನು ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ.