ಮೋದಿಗೆ ಮತ ನೀಡಿ ಎಂದು ಹೇಳಿ ಸೋಲೋಪ್ಪಿಕ್ಕೊಂದು ಪಲಾಯನ ಮಾಡಿದ ರಾಹುಲ್

ಈ ಬಾರಿಯ ಲೋಕಸಭಾ ಚುನಾವಣೆ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತದೆ. ಅದರಲ್ಲಿಯೂ ನರೇಂದ್ರ ಮೋದಿ ಅವರನ್ನು ಕಟ್ಟಿ ಹಾಕಬೇಕು ಎಂಬ ಉದ್ದೇಶದಿಂದ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಯನ್ನು ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಒಂದಲ್ಲ ಒಂದು ಆಘಾತಗಳು ಎದುರಾಗುತ್ತವೆ. ನರೇಂದ್ರ ಮೋದಿ ರವರ ಅಲೆಗೆ ತಿರುವೆ ಇಲ್ಲದಂತೆ, ದೇಶದಲ್ಲಿ ಈಗ ನರೇಂದ್ರ ಮೋದಿ ಎಂಬ ಸುನಾಮಿ ಎದ್ದಿದೆ ಎಲ್ಲಿ ಹೋದರು ಎಲ್ಲಿ ನೋಡಿದರೂ ನರೇಂದ್ರ ಮೋದಿ ಮತ್ತೊಮ್ಮೆ ಎಂಬ ಘೋಷ ವಾಕ್ಯಗಳು ಕೇಳಿ ಬರುತ್ತಿವೆ. ಇದೀಗ ರಾಹುಲ್ ಗಾಂಧಿ ರವರ ಬಾಯಲ್ಲೂ ಸಹ ಈ ಮಾತು ಕೇಳಿ ಬಂದಿದೆ ಆದರೆ ಇದು ಎಂದಿನಂತೆ ಅಚಾನಕ್ಕಾಗಿ ನಡೆದ ಅಲ್ಲ ಬದಲಾಗಿ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಲಾಗದೆ ಸೋಲನ್ನು ಒಪ್ಪಿಕೊಂಡಿದ್ದು ನರೇಂದ್ರ ಮೋದಿ ರವರಿಗೆ ಮತ ನೀಡುವಂತೆ ಪ್ರೇರೇಪಿಸಿ ಇದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಹುಲ್ ಗಾಂಧಿ ರವರು ಈ ಬಾರಿ ಅಮೇತಿ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸೃತಿ ಇರಾನಿ ಅವರಿಂದ ಭಾರೀ ಮಟ್ಟದಲ್ಲಿ ಪೈಪೋಟಿಯನ್ನು ಎದುರಿಸುತ್ತಿದ್ದಾರೆ. ಕಳೆದ ಬಾರಿ ಕೇವಲ 20 ದಿನಗಳಲ್ಲಿ ಮ್ಯಾಜಿಕ್ ನಡೆಸಿದ ಸ್ಮೃತಿ ಇರಾನಿ ರವರು ಈ ಬಾರಿ ಹಲವು ದಿನಗಳು ದೊರಕಿರುವ ಕಾರಣ ಅಮೇತಿ  ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿ ರಾಹುಲ್ ಗಾಂಧಿ ಅವರಿಗೆ ತೀವ್ರ ಪೈಪೋಟಿ ನೀಡಿ ಮೊದಲ ಗೆಲುವನ್ನು ಕಾಣುವ ನಿಟ್ಟಿನಲ್ಲಿ ಹಗಲು-ರಾತ್ರಿಯೆನ್ನದೆ ಹೋರಾಟ ಮಾಡುತ್ತಿದ್ದಾರೆ. ಇನ್ನು ಈಗಾಗಲೇ ಪರ್ಯಾಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ರಾಹುಲ್ ಗಾಂಧಿ ರವರು ಸೋಲನ್ನು ಮೊದಲೇ ಅರಿತುಕೊಂಡಂತೆ ಕಾಣುತ್ತಿದೆ.

ಸೃತಿ ಇರಾನಿ ಅವರ ಅಲೆಯನ್ನು ತಡೆಗಟ್ಟಲು ರಾಹುಲ್ ಗಾಂಧಿ ರವರು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡ ವೇಳೆಯಲ್ಲಿ ಅಮೇತಿ ಜನರು ರಾಹುಲ್ ಗಾಂಧಿ ಅವರ ವಿರುದ್ಧ ಸಿಡಿದೆದ್ದಿದ್ದಾರೆ. ನೀವು ಅಮೇತಿ ಕ್ಷೇತ್ರದ ಸಂಸದರಾಗಿ ಕೆಲಸ ಮಾಡಿದ್ದೀರಿ, ಆದರೆ ನೀವು ಪ್ರಚಾರ ಮಾಡುತ್ತಿರುವ ರಸ್ತೆಗಳನ್ನು ನೋಡಿದ್ದೀರಾ, ನಮ್ಮ ಹಳ್ಳಿಯಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ, ಯಾವ ಕಾರಣಕ್ಕಾಗಿ ನಿಮಗೆ ಮತ ನೀಡಬೇಕು ಎಂದು ಅಮೇತಿ ಜನರು ರಾಹುಲ್ ಗಾಂಧಿ ರವರನ್ನು ಪ್ರಶ್ನೆ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಅಭಿವೃದ್ಧಿಯನ್ನು ಕಂಡಿಲ್ಲ ಎಂದು ಜನರು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಸಾಕ್ಷಿ ಕಣ್ಣಿಗೆ ಇದ್ದ ಕಾರಣ ರಾಹುಲ್ ಗಾಂಧಿ ರವರು ಪ್ರಶ್ನೆಗೆ ಉತ್ತರ ನೀಡದೆ ಸ್ಥಳದಿಂದ ಕಾಲ್ತೆಗೆಯಲು ಪ್ರಯತ್ನಿಸಿದಾಗ ಪ್ರಜೆಗಳು ರಾಹುಲ್ ಗಾಂಧಿ ಅವರ ಉತ್ತರಕ್ಕಾಗಿ ಒತ್ತಾಯ ಮಾಡಿದ್ದಾರೆ. ಇದರಿಂದ ಕೆಂಡಾಮಂಡಲವಾದ ರಾಹುಲ್ ಗಾಂಧಿ ರವರು ನರೇಂದ್ರ ಮೋದಿ ಅವರಿಗೆ ಮತ ನೀಡಿ ಎಂದು ಹೇಳಿ ಸ್ಥಳದಿಂದ ಪಲಾಯನ ಮಾಡಿದ್ದಾರೆ, ರಾಹುಲ್ ಗಾಂಧಿ ಬಾಯಲ್ಲಿ ನರೇಂದ್ರ ಮೋದಿ ರವರಿಗೆ ಮತ ನೀಡಿ  ಎಂಬ ಹೇಳಿಕೆ ಕೇಳಿ ಬಂದ ತಕ್ಷಣ  ಸ್ಥಳದಲ್ಲಿದ್ದ ಸಂಪೂರ್ಣ ಜನರು ನರೇಂದ್ರ ಮೋದಿ ಮತ್ತೊಮ್ಮೆ ಎಂಬ ಘೋಷಣೆಗಳ ಮೂಲಕ ರಾಹುಲ್ ಗಾಂಧಿ ಅವರನ್ನು ಮತ್ತಷ್ಟು ಮುಜುಗರಕ್ಕೆ ಒಳಪಡಿಸಿದ್ದಾರೆ. ದಾಖಲೆಗಾಗಿ ಮೇಲಿನ ವೀಡಿಯೊವನ್ನು ಸಂಪೂರ್ಣ ನೋಡಿ.

Post Author: Ravi Yadav