ಮಂಡ್ಯ ಎಫೆಕ್ಟ್: ಚುನಾವಣಾ ಆಯೋಗದ ಹಾಗೂ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡರೇ ಜನ!

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂಡ್ಯ ಜಿಲ್ಲೆಯು ಕರ್ನಾಟಕದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮೊಟ್ಟ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಾರಣ ನಿಖಿಲ್ ಕುಮಾರಸ್ವಾಮಿ ರವರ ಗೆಲುವು ಕಗ್ಗಂಟಾಗಿದೆ. ಈಗಾಗಲೇ ಭಾರೀ ಜನ ಬೆಂಬಲ ವನ್ನು ಹೊಂದಿರುವ ಸುಮಲತಾ ರವರು ಬಹಳ ಸುಲಭವಾಗಿ ಗೆದ್ದು ಬರುತ್ತಾರೆ ಎಂಬ ಲೆಕ್ಕಾಚಾರ ವಿತ್ತು.

ಆದರೆ ಕುಮಾರಸ್ವಾಮಿ ರವರು ರೂಪಿಸುತ್ತಿದ್ದಾರೆ ಎನ್ನಲಾಗುತ್ತಿರುವ ರಾಜಕೀಯ ತಂತ್ರಗಳ ಮುಂದೆ ಸುಮಲತಾ ಅವರು ಕೊಂಚ ಯಾಮಾರಿದರೂ ಸೋಲು ಕಟ್ಟಿಟ್ಟ ಬುತ್ತಿ. ಯಾಕೆಂದರೆ ಮೊದಲು ಸುಮಲತಾ ಎಂಬ ಹೆಸರಿನ 3 ಜನರು ನಾಮಪತ್ರ ಸಲ್ಲಿಸಿ ಗೊಂದಲ ಮೂಡಿಸಲು ಪ್ರಯತ್ನ ಪಟ್ಟಿದ್ದರು. ತದನಂತರ ಎರಡನೇ ಬಾರಿ ನಾಮಪತ್ರ ಸಲ್ಲಿಸಿರುವ ಆರೋಪ ಕೇಳಿಬಂದಿದ್ದು ನಿಖಿಲ್ ಕುಮಾರಸ್ವಾಮಿ ರವರಿಗೆ ಜಿಲ್ಲಾಧಿಕಾರಿ ಬೆಂಬಲವಿದೆ ಎಂಬ ಆರೋಪ ಕೇಳಿಬಂದಿದೆ.

ಈ ಎಲ್ಲಾ ಆರೋಪಗಳಿಗೆ ಮತ್ತಷ್ಟು ಪೂರಕ ಎಂಬಂತೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯನ್ನು ಪಕ್ಕಕ್ಕೆ ಇಟ್ಟು ಮೊದಲು ನಿಖಿಲ್ ಕುಮಾರಸ್ವಾಮಿ ರವರ ಹೆಸರು ಬರುವಂತೆ ನೋಡಿಕೊಳ್ಳಲಾಗಿದೆ. ಕ್ರಮ ಸಂಖ್ಯೆ ಒಂದನ್ನು ಪಡೆದಿರುವ ನಿಖಿಲ್ ಕುಮಾರಸ್ವಾಮಿ ರವರು ಯಾವ ರೀತಿಯಲ್ಲಿ ಮೊದಲಿಗರಾಗಿದ್ದಾರೆ ಎಂಬ ಅಂಶ ಇಲ್ಲಿಯವರೆಗೂ ಹೊರಬಿದ್ದಿಲ್ಲ. ಇಷ್ಟೆಲ್ಲಾ ಆದ ನಂತರ ಎ ಸುಮಲತಾ ಎಂದು ಹೆಸರಿಟ್ಟುಕೊಂಡಿರುವ ಪಕ್ಷೇತರ ಅಭ್ಯರ್ಥಿ ಸುಮಲತ ಹೆಸರು ಬರೋಬ್ಬರಿ ಕ್ರಮ ಸಂಖ್ಯೆ 20ಕ್ಕೆ ಬಂದು ನಿಂತಿದೆ.

ರಾಷ್ಟ್ರೀಯ ಪಕ್ಷಗಳ ನಂತರ ವರ್ಣಮಾಲೆ ಯಲ್ಲಿ ಬರುವ ಆಧಾರದ ಮೇಲೆ ಪಕ್ಷಗಳ ಅಭ್ಯರ್ಥಿಗಳ ಕ್ರಮ ಸಂಖ್ಯೆಯನ್ನು ನಿರ್ಧರಿಸಬೇಕು. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಮನಸ್ಸಿಗೆ ಬಂದಂತೆ ಕ್ರಮ ಸಂಖ್ಯೆ ಗಳನ್ನು ವಿತರಿಸಿರುವ ಜಿಲ್ಲಾಧಿಕಾರಿಯ ಮೇಲೆ ಭಾರೀ ಆಕ್ರೋಶ ಕೇಳಿ ಬಂದಿದೆ. ಮೊದಲಿನಿಂದಲೂ ಕುಮಾರಸ್ವಾಮಿ ರವರಿಗೆ ಆಪ್ತರಾಗಿದ್ದಾರೆ ಎನ್ನಲಾಗುತ್ತಿರುವ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ ಮಂಜು ಶ್ರೀ ರವರ ಮೇಲೆ ಬಾರೀ ಆಕ್ರೋಶ ಕೇಳಿ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.

ಇಷ್ಟೆಲ್ಲ ಮುಗಿದ ನಂತರ ಸಾಮಾನ್ಯ ಜನರು ಚುನಾವಣಾ ಆಯೋಗದ ಮೇಲೆ ನಂಬಿಕೆ ಇಟ್ಟು ಚುನಾವಣಾ ಆಯೋಗದ ತೀರ್ಪಿಗಾಗಿ ಕಾಯುತ್ತಿದ್ದರು. ಆದರೆ ಚುನಾವಣಾ ಆಯೋಗವು ಸಹ ಈಗಾಗಲೇ ನಾಮಪತ್ರ ಸಿಂದು ವಾಗಿರುವ ಕಾರಣ ಕೋರ್ಟ್ ಗೆ ಹೋಗಬೇಕು ಎಂದು ಜಾರಿಕೊಂಡಿದ್ದಾರೆ. ಇದರಿಂದ ಚುನಾವಣಾ ಆಯೋಗದ ಮೇಲೆ ಹಾಗೂ ಕುಮಾರಸ್ವಾಮಿ ರವರ ಸರ್ಕಾರದ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಇದು ಹೀಗೆ ಮುಂದುವರೆದರೆ ಜನರಿಗೆ ಸಂಪೂರ್ಣ ನಂಬಿಕೆ ಹೋದಲ್ಲಿ ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಈ ಕೂಡಲೇ ಈ ತೀರ್ಪನ್ನು ಪ್ರಕಟಿಸಿ ತಪ್ಪು ಯಾರೇ ಮಾಡಿದ್ದರೂ ಸರಿ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

Post Author: Ravi Yadav