ಬಿಗ್ ಬ್ರೇಕಿಂಗ್: ನಿಖಿಲ್ ಗೆ ಬಿಗ್ ಶಾಕ್, ತಪ್ಪೊಪ್ಪಿಕೊಂಡ ಡಿಸಿ, ಬಲಿಯಾಗಿದ್ದು ಯಾರು ಗೊತ್ತಾ??

ಮಂಡ್ಯ ಜಿಲ್ಲೆಯ ಪ್ರತಿ ಕ್ಷಣವೂ ಹೊಸ ಕುತೂಹಲವನ್ನು ಕೆರಳಿಸುತ್ತದೆ ಮುಂದೆ ಸಾಗುತ್ತಿದೆ. ಅದರಲ್ಲಿಯೂ ನಿಖಿಲ್ ಕುಮಾರಸ್ವಾಮಿ ರವರ ನಾಮಪತ್ರ ಚುನಾವಣೆಗೂ ಹೆಚ್ಚು ಸದ್ದು ಮಾಡುತ್ತಿದೆ. ಸುಮಲತಾ ಬೆಂಬಲಿಗರು ಕೇಳಿದ ತಕ್ಷಣ ನಾಮಪತ್ರ ಸಲ್ಲಿಸಿದ ವಿಡಿಯೋ ನೀಡಿದ್ದರೆ ಬಹುಶಹ ಇಷ್ಟೊಂದು ಸುದ್ದಿ ಆಗುತ್ತಿರಲಿಲ್ಲ. ಆದರೆ ಎರಡು-ಮೂರು ಗಂಟೆಗಳಲ್ಲಿ ಕೊಡುತ್ತೇನೆ ಎಂದು ತದನಂತರ 48 ಗಂಟೆಗಳಲ್ಲಿ ತಿರುಚಿದ ವಿಡಿಯೋ ನೀಡಿದ್ದ ಚುನಾವಣಾ ಅಧಿಕಾರಿಯ ನಡೆಯನ್ನು ಸುಮಲತಾ ಬೆಂಬಲಿಗರು ಖಂಡಿಸುತ್ತಿದ್ದಾರೆ.

ಇನ್ನು ಮಧ್ಯಪ್ರವೇಶಿಸಲು ಮುಂದಾದ ಚುನಾವಣಾ ಆಯೋಗವು ಸಹ ಕೋರ್ಟಿನಲ್ಲಿ ತೀರ್ಮಾನ ಆಗಬೇಕು ಎಂದು ಕೈ ಕೊಟ್ಟಾಗ ಬೇರೆ ವಿಧಿಯಿಲ್ಲದೆ ಸುಮಲತಾ ಬೆಂಬಲಿಗರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಕುಮಾರಸ್ವಾಮಿ ರವರು ತಮ್ಮ ಮಗನನ್ನು ಗೆಲ್ಲಿಸಲು ಇನ್ನಿಲ್ಲದ ಕುತಂತ್ರ ರಾಜಕಾರಣವನ್ನು ಪ್ರಯೋಗ ಮಾಡುತ್ತಾ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸುಮಲತಾ ಬೆಂಬಲಿಗರು ಮಂಡ್ಯ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಲ್ಲಾ ವಿದ್ಯಮಾನಗಳ ನಡುವೆ ಇದೀಗ ಮಂಡ್ಯ ಚುನಾವಣಾ ಅಧಿಕಾರಿ ಆಗಿರುವ ಮಂಜುಶ್ರೀ ರವರು ವಿಡಿಯೋ ಬಗ್ಗೆ ಶಾಕಿಂಗ್ ಸತ್ಯವನ್ನು ಹೊರ ಹಾಕಿದ್ದು, ನಿಖಿಲ್ ಕುಮಾರಸ್ವಾಮಿ ರವರಿಗೆ ಹೊಸ ತಲೆನೋವು ಶುರುವಾಗಿದೆ. ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದರೂ ಸಹ ಈ ಪ್ರಕರಣ ಸಾಬೀತಾದಲ್ಲಿ ಸಂಸದ ಸ್ಥಾನದಿಂದ ಕೆಳಗಿಳಿಯ ಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ ಡಿಸಿ ರವರ ಈ ಹೇಳಿಕೆಯಿಂದ ಸುಮಲತಾ ಬೆಂಬಲಿಗರು ಮಾತ್ರ ತೃಪ್ತಿ ಗೊಂಡಿಲ್ಲ ಯಾಕೆಂದರೆ ತಪ್ಪನ್ನು ಒಪ್ಪಿಕೊಂಡಿದ್ದರು ಸಹ ಬಲಿಯಾಗಿದ್ದು ಮಾತ್ರ ಸಾಮಾನ್ಯ ಕ್ಯಾಮೆರಾಮೆನ್ ಎಂದು ಆರೋಪ ಮಾಡುತ್ತಿದ್ದಾರೆ.

ಹೌದು ಚುನಾವಣಾ ಅಧಿಕಾರಿ ಮಂಜುಶ್ರೀ ರವರು ವಿಡಿಯೋ ತುಣುಕುಗಳನ್ನು ಎಡಿಟ್ ಮಾಡಲಾಗಿದೆ ಎಂದು ಒಪ್ಪಿಕೊಂಡು ಆ ತಪ್ಪನ್ನು ಕ್ಯಾಮೆರಾಮೆನ್ ಮೇಲೇ ಹೊರಿಸಿದ್ದಾರೆ ಹಾಗೂ ಕ್ಯಾಮೆರಾ ಮ್ಯಾನ್ ರವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ. ಕ್ಯಾಮೆರಾಮೆನ್ ನಾಮಪತ್ರ ಸಲ್ಲಿಕೆಯ ನಂತರ ಮದುವೆ ವಿಡಿಯೋ ರೆಕಾರ್ಡ್ ಮಾಡಲು ಹೋಗಿದ್ದರು, ಆದಕಾರಣ ವಿಡಿಯೋ ತಡವಾಗಿ ನಮ್ಮ ಕೈಗೆ ಬಂದಿತ್ತು ಆದರೆ ಅಷ್ಟರಲ್ಲಿ ಕ್ಯಾಮೆರಾಮೆನ್ ರವರು ವಿಡಿಯೋ ಕತ್ತರಿಸಿದ್ದಾರೆ ಎಂಬ ಆರೋಪವನ್ನು ಚುನಾವಣಾ ಅಧಿಕಾರಿ ಮಂಜುಶ್ರೀ ಅವರು ಮಾಡಿದ್ದಾರೆ.

ಈ ಆರೋಪದಿಂದ ಸುಮಲತಾ ಬೆಂಬಲಿಗರ ಆಕ್ರೋಶ ಮತ್ತಷ್ಟು ಕೆರಳಿದ್ದು ತಪ್ಪು ಮಾಡಿದ್ದು ಯಾರು ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಕ್ಯಾಮೆರಾಮೆನ್ ತಪ್ಪು ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ರವರ ಭವಿಷ್ಯ ಬದಲಾಗದು ಸಂಸದ ಸ್ಥಾನದಿಂದ ಕೆಳಗಿಳಿಯಲು ಬೇಕಾದ ಪರಿಸ್ಥಿತಿ ಎದುರಾಗುತ್ತದೆ ಕಾದು ನೋಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Post Author: Ravi Yadav