ಬಿಗ್ ನ್ಯೂಸ್: ಬೆನ್ನಿಗೆ ಚೂರಿ ಹಾಕಲು ಹೊರಟ ಪಾಕಿಗಳು

ಭಾರತ ದೇಶವು ಇದ್ದಕ್ಕಿದ್ದ ಹಾಗೆ ನಡೆಯುವ ದಾಳಿಯನ್ನು ಎದುರಿಸುವ ಉದ್ದೇಶದಿಂದ ಪುಲ್ವಾಮಾ ದಾಳಿಯ ನಂತರ ಗಡಿಯಲ್ಲಿ ಸೇನಾ ಜಮಾವಣೆ ಮಾಡಿ ಕಾದು ನಿಂತಿದೆ.  ಇದೇ ವಿಷಯವನ್ನು ಗಮನದಲ್ಲಿ ಇಟ್ಟಿಕೊಂಡು ಕೆಲವೇ ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ರವರು ಇದ್ದಕಿದ್ದ ಹಾಗೆ ಟ್ವಿಟರ್ ನಲ್ಲಿ ವಿಡಿಯೋ ಮುಖಾಂತರ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ಯುದ್ಧದ ವಾತಾವರಣ ಇನ್ನೂ ತಿಳಿಗೊಂಡು ಇಲ್ಲ ಎಂಬ ಮಾತನ್ನು ಹೇಳಿದ್ದರು.

ಪುಲ್ವಾಮಾ ದಾಳಿಯಾಗಿ ಒಂದು ತಿಂಗಳು ಕಳೆದರೂ ಸಹ ಭಾರತ ದೇಶವು ಸೇನೆಯನ್ನು ಹಿಂದಕ್ಕೆ ಕಕರೆಸಿಕೊಂಡಿಲ್ಲ ಆದ ಕಾರಣದಿಂದ ಈ ರೀತಿ ಇಮ್ರಾನ್ ಖಾನ್ ರವರು ಹೇಳಿಕೆ ನೀಡುತ್ತಿದ್ದಾರೆ ಎಂದು ಎಲ್ಲರಿಗೆ ಅನಿಸಿತು.  ಆದರೆ ಇದು ಪಾಕಿಸ್ತಾನದ ಕುತಂತ್ರ ನೀತಿಗಳಲ್ಲಿ ಒಂದಾಗಿದೆ ಎಂಬುದು ಈದೀಗ ತಿಳಿದು ಬಂದಿದೆ, ತಕ್ಷಣ ಎಚ್ಚ್ಚೆತ್ತುಕೊಂಡ ಭಾರತೀಯ ಸೇನೆಯು ದಿಟ್ಟ ತಿರುಗೇಟನ್ನು ನೀಡಲು ಸಿದ್ಧವಾಗಿದೆ. ಯಾಕೆಂದರೆ ಪಾಕಿಸ್ತಾನವು ಇದ್ದಕ್ಕಿದ್ದ ಹಾಗೆ ಹೇಳಿಕೆ ನೀಡಿದ ಕೆಲವೇ ಕೆಲವು ದಿನಗಳಲ್ಲಿ ಅಮೃತಸರ ಹಾಗೂ ಸಂಬ ವಲಯಗಳ ಸೂಕ್ಷ್ಮ ಪ್ರದೇಶಗಳ ಬಳಿ ತನ್ನ ಸೇನೆಯನ್ನು ಅಧಿಕ ಸಂಖ್ಯೆಯಲ್ಲಿ ನಿಯೋಜಿಸಿದೆ.

ಪಾಕಿಸ್ತಾನವು ತನ್ನ ಗಡಿ ಪ್ರದೇಶದ ಗ್ರಾಮಗಳಿಂದ ಸಂಪೂರ್ಣವಾಗಿ ಜನರನ್ನು ತೆರವುಗೊಳಿಸಿ ಬೇರೆ ಕಡೆ ನಿಯೋಜನೆ ಮಾಡಿ, ಅಲ್ಲಿ ಸೇನೆಯನ್ನು ಜಮಾವಣೆ ಗೊಳಿಸಿ ಶಸ್ತ್ರಸ್ತ್ರ ಕ್ರೂಢಿಕರಣದಲ್ಲಿ ನಿರತವಾಗಿದೆ.ಈ ವಿಷಯದಿಂದ ಎಚ್ಚೆತ್ತ ಭಾರತೀಯ ಸೇನೆಯು ರಾಜಸ್ಥಾನದ ಅಬೋಹರ್ ಹಾಗೂ ಪಂಜಾಬಿನ ಬಿಕನೇರ್ ಮತ್ತು ಬರ್ಮರ್ ಪ್ರದೇಶಗಳಲ್ಲಿ ಸೇನಾ ಮಿಲಿಟರಿ ಟ್ಯಾಂಕ್ ಗಳು, ಮತ್ತಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕ್ರೋಡೀಕರಿಸಿ ಸೇನೆಯನ್ನು ಅಧಿಕ ಸಂಖ್ಯೆಯಲ್ಲಿ ನಿಯೋಜನೆ ಮಾಡಿದೆ.

ಉತ್ತರ ಪ್ರದೇಶ ಝಾನ್ಸಿ ಮತ್ತು ಕಾನ್ಪುರ ಹಾಗೂ ಮಧ್ಯ ಪ್ರದೇಶ ಗಳಿಂದ ಯುದ್ಧ ಟ್ಯಾಂಕ್‍ಗಳು ಮತ್ತು ಆರ್ಟಿಲರಿ ಗನ್‍ಗಳನ್ನು  ಕಳೆದ ಎರಡು ದಿನಗಳಿಂದ ಗಡಿಗೆ ರವಾನಿಸುತ್ತಿದೆ.ಆದ ಕಾರಣ ಕ್ಕಾಗಿಯೇ ಭಾರತವು ಹೈ ಅಲರ್ಟ್  ಘೋಷಿಸಿ ರಾಜಸ್ಥಾನ ಹಾಗೂ ಪಂಜಾಬ್ ಗಡಿಯಲ್ಲಿ ಎಂತಹ ಸಮರ್ಥ ದಾಳಿಯನ್ನು ಎದುರಿಸಲು ಸಿದ್ಧವಾಗಿ ನಿಂತಿದೆ. ಬಹುಶಹ ಪಾಕಿಸ್ತಾನವು ಲೋಕಸಭಾ ಚುನಾವಣೆಯ ಸಮಯದಲ್ಲಿ ಭಾರತದಲ್ಲಿ ಶಾಂತಿಯನ್ನು ಕದಡಲು ಈ ರೀತಿಯ ಕೆಲಸ ಮಾಡುತ್ತಿದೆ ಎಂದು ಹಲವಾರು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

Post Author: Ravi Yadav