ದೋಸ್ತಿ ಗಳಿಗೆ ಶಾಕ್ ನೀಡಲು ಖುದ್ದು ಆಖಾಡಕ್ಕೆ ಇಳಿದ ಮೋದಿ- ದೋಸ್ತಿಗಳ ಗೆಲುವು ಮತ್ತಷ್ಟು ಕಗ್ಗಂಟು.

ದೋಸ್ತಿ ಗಳಿಗೆ ಶಾಕ್ ನೀಡಲು ಖುದ್ದು ಆಖಾಡಕ್ಕೆ ಇಳಿದ ಮೋದಿ- ದೋಸ್ತಿಗಳ ಗೆಲುವು ಮತ್ತಷ್ಟು ಕಗ್ಗಂಟು

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ನರೇಂದ್ರ ಮೋದಿ ರವರ ಅಲೆ ಇಲ್ಲಿ ಅಕ್ಷರಸಹ ಪ್ರಾದೇಶಿಕ ಪಕ್ಷಗಳು ಕೊಚ್ಚಿಕೊಂಡು ಹೋಗಿವೆ. ಒಂದು ಕಾಲದಲ್ಲಿ ದೇಶದ ಬೃಹತ್ ಪಕ್ಷ ಎನಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷವೂ ಸಹ ಕೇವಲ 44 ಸೀಟುಗಳನ್ನು ಕಳೆದ ಬಾರಿಯ ಚುನಾವಣೆಯಲ್ಲಿ ಪಡೆದುಕೊಂಡಿತ್ತು. ಅಂದು ಅಕ್ಷರಸಹ ನರೇಂದ್ರ ಮೋದಿ ರವರ ಅಲೆಗೆ ಕಾಂಗ್ರೆಸ್ ಪಕ್ಷ ಕೊಚ್ಚಿಕೊಂಡು ಹೋಗಿತ್ತು. ಚುನಾವಣಾ ಫಲಿತಾಂಶದ ಮೂಲಕವೇ ಎಲ್ಲದಕ್ಕೂ ನರೇಂದ್ರ ಮೋದಿ ರವರು ಉತ್ತರ ನೀಡಿದ್ದರು. ಅದಾದ ಮೇಲೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನರೇಂದ್ರ ಮೋದಿ ರವರಿಗೆ ಎದುರೇ ಇಲ್ಲ ಎಂಬಂತೆ ಮುನ್ನುಗ್ಗುತ್ತಿದ್ದಾರೆ.

ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ದೇಶದ ರಾಜಕಾರಣದ ವಿಷಯದಲ್ಲಿ ಮಹತ್ವದ ಪಾತ್ರ ವೆನಿಸುವ 28 ಲೋಕಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಕರ್ನಾಟಕಕ್ಕೆ ಖುದ್ದು ನರೇಂದ್ರ ಮೋದಿರವರು ಎಂಟ್ರಿ ಕೊಟ್ಟಿದ್ದಾರೆ. ಕಳೆದ ಬಾರಿ ನರೇಂದ್ರ ಮೋದಿ ರವರ ಅಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಭರ್ಜರಿ ಗೆಲುವು ದಾಖಲಿಸಿತ್ತು, ಆದರೆ ಈ ಬಾರಿ ನರೇಂದ್ರ ಮೋದಿ ಅವರ ಅಲೆ ಕರ್ನಾಟಕದಲ್ಲಿ ಕೇವಲ ಅಲೆಯಾಗಿ ಉಳಿದಿಲ್ಲ ಬದಲಾಗಿ ಸುನಾಮಿಯಾಗಿ ಬದಲಾಗಿದೆ. ಇಂತಹ ಸಮಯದಲ್ಲಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ತಮ್ಮ ಛಾಪನ್ನು ಮತ್ತಷ್ಟು ಹೆಚ್ಚಿಸಲು ತಾವೇ ಸ್ವತಃ ಅಖಾಡಕ್ಕೆ ಇಳಿಯಲಿದ್ದಾರೆ.

ಹೌದು ಇಂದು ಬಿಜೆಪಿ ಪಕ್ಷದ ನಾಯಕರಾಗಿರುವ ಆರ್ ಅಶೋಕ್ ಅವರು ಈ ಮಾಹಿತಿಯನ್ನು ಹೊರಹಾಕಿದ್ದು, ನರೇಂದ್ರ ಮೋದಿ ಅವರು ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ವಿವಿಧೆಡೆ ಬರೋಬ್ಬರಿ ಏಳು ಬೃಹತ್ ಸಮಾವೇಶಗಳನ್ನು ಮಾಡಲಿದ್ದಾರೆ, ಎಂಬ ಮಾಹಿತಿ ಹೊರ ಹಾಕಿದ್ದಾರೆ. ಈ ಪೈಕಿ ಇದೇ ತಿಂಗಳು ಏಪ್ರಿಲ್ 7ರಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಹಾಗೂ ಪ್ರತಾಪ್ ಸಿಂಹರವರು ಸ್ಪರ್ಧಿಸಲಿರುವ ಮೈಸೂರು ಕ್ಷೇತ್ರದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.ಈ ಮೂಲಕ ಕರ್ನಾಟಕ ರಾಜ್ಯವನ್ನು ಮತ್ತಷ್ಟು ಕೇಸರಿಮಯ ಮಾಡಲು ಹೊರಟಿದ್ದಾರೆ.

narendra_modi_prime_minister_presentation_indium_106405_2048x1152

ಇನ್ನುಳಿದಂತೆ ಬೆಂಗಳೂರು, ಕೋಲಾರ, ಚಿತ್ರದುರ್ಗ, ಯಡಿಯೂರಪ್ಪನವರ ಭದ್ರಕೋಟೆಯಾದ ಶಿವಮೊಗ್ಗ ಹಾಗೂ ವಿಜಯಪುರ ಗಳಲ್ಲಿ ನರೇಂದ್ರ ಮೋದಿರವರು ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಒಟ್ಟು ಏಳು ಸಮಾವೇಶಗಳನ್ನು ನಡೆಸಲು ನಿರ್ಧರಿಸಿರುವ ನರೇಂದ್ರ ಮೋದಿ ಅವರು ತಮ್ಮ ಮಾತಿನ ಮೂಲಕ ಮತ್ತಷ್ಟು ಮತ ಬೇಟೆಯಾಡುವ ನಿರ್ಧಾರ ಮಾಡಿದ್ದಾರೆ. ಒಂದು ವೇಳೆ ನರೇಂದ್ರ ಮೋದಿರವರು ವರ್ಚಸ್ಸು ಹಾಗೂ ಅಲೆ  ಮುಂದುವರೆದಲ್ಲಿ ಬಹಳ ಸುಲಭವಾಗಿ ಅಧಿಕಾರದ ಗದ್ದುಗೆ ಏರುತ್ತಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.