ಐಟಿ ದಾಳಿ ಕುಮಾರಸ್ವಾಮಿ ರವರು ಯು ಟರ್ನ್ ಹೊಡೆದಿದ್ದು ಹೇಗೆ ಗೊತ್ತಾ??

ಕಳೆದ 24 ಗಂಟೆಯಿಂದ ಇಡೀ ರಾಜ್ಯದಲ್ಲಿ ಐಟಿ ದಾಳಿ ಸದ್ದು ಮಾಡುತ್ತಿದೆ. ರಾಜಕೀಯ ಪ್ರೇರಿತ ದಾಳಿಯೆಂದು ಕರ್ನಾಟಕದ ಮುಖ್ಯಮಂತ್ರಿಗಳು ಎನಿಸಿಕೊಂಡಿರುವ ಕುಮಾರಸ್ವಾಮಿ ರವರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ಯಾವುದೇ ರಾಜಕೀಯ ನಾಯಕನ ಮೇಲೆ ಐಟಿ ದಾಳಿ ನಡೆದಿಲ್ಲ ಎಂಬುದನ್ನು ಐಟಿ ಇಲಾಖೆಯೂ ಸಹ ಸ್ಪಷ್ಟಪಡಿಸಿದೆ. ಗುತ್ತಿಗೆದಾರರು ಹಾಗೂ ರಾಜಕೀಯ ನಾಯಕರಿಗೆ ಹಣ ಸಾಗಿಸುತ್ತಾರೆ ಎಂಬ ಅನುಮಾನ ವಿರುವ ಸರ್ಕಾರಿ ಆಪ್ತರ ಮೇಲೆ ದಾಳಿ ಮಾಡಲಾಗಿದೆ. ಇದನ್ನು ಸ್ವತಃ ಐಟಿ ಇಲಾಖೆಯು ಸ್ಪಷ್ಟಪಡಿಸಿದ್ದರೂ ಸಹ ಕುಮಾರಸ್ವಾಮಿ ರವರು ನರೇಂದ್ರ ಮೋದಿ ರವರೇ ಖುದ್ದು ನಮ್ಮ ಮೇಲೆ ಐಟಿ ದಾಳಿ ನಡೆಸಿದ್ದಾರೆ ಎಂಬ ಮಾತುಗಳನ್ನು ಆಡಿ, ತಮ್ಮ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಳಾಗಿರುವ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆ ಯನ್ನು ಸುರಿಸಿದ್ದರು. ಆದರೆ ಇದೀಗ ಕುಮಾರಸ್ವಾಮಿ ಅವರು ಐಟಿ ದಾಳಿಯಲ್ಲಿ ಹೇಗೆ ಯು ಟರ್ನ್ ಹೊಡೆದಿದ್ದಾರೆ ಎಂಬ ಮಾಹಿತಿಯನ್ನು ತಿಳಿಯಲು ಕೆಳಗಡೆ ಓದಿ.ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಕೆಲವೇ ಕೆಲವು ದಿನಗಳ ಹಿಂದೆ ಕರ್ನಾಟಕದ ಚಿತ್ರರಂಗದ ದಿಗ್ಗಜರ ಮೇಲೆ ಐಟಿ ದಾಳಿ ನಡೆದಿತ್ತು. ಕೆಲವರು ನರೇಂದ್ರ ಮೋದಿರವರು ಕನ್ನಡ ಚಿತ್ರರಂಗದ ಏಳಿಗೆಯನ್ನು ಸಹಿಸಲಾರದೆ ಐಟಿ ದಾಳಿ ನಡೆಸಿದ್ದಾರೆ ಎಂಬ ಆರೋಪವನ್ನು ಮಾಡಿದ್ದರು

. ಆದರೆ ಇದನ್ನು ಚಿತ್ರರಂಗದ ನಾಯಕರು ತಳ್ಳಿಹಾಕಿದ್ದರು. ಯಾಕೆಂದರೆ ನಾವು ತೆರಿಗೆ ಮೋಸ ಮಾಡಿಲ್ಲ ಅನುಮಾನ ಬಂದ ತಕ್ಷಣ ಐಟಿ ಇಲಾಖೆಯ ರವರು ನಮ್ಮ ಮೇಲೆ ದಾಳಿ ಮಾಡಿದ್ದಾರೆ ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೋದಿ ಅವರ ಪರವಾಗಿ ನಿಂತಿದ್ದರು.ಅಂದು ಇದೇ ಕುಮಾರಸ್ವಾಮಿ ರವರು ಸಹ ಕೇಂದ್ರ ಸರ್ಕಾರದ ಪರವಾಗಿ ನಿಂತುಕೊಂಡು ಐಟಿ ಇಲಾಖೆ ತನ್ನ ಕೆಲಸವನ್ನು ತಾನು ಮಾಡುತ್ತಿದೆ. ಅದು ಚಿತ್ರರಂಗದ ನಾಯಕರ ಮೇಲೆ ದಾಳಿ ಮಾಡಿದರೆ ಅದು ರಾಜಕೀಯ ಪ್ರೇರಿತ ಹೇಗಾಗುತ್ತದೆ, ಐಟಿ ದಾಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದರು.

ಆದರೆ ಇಂದು ಕಳೆದ ಮೂರು ತಿಂಗಳಿನಿಂದ ಐಟಿ ಇಲಾಖೆಯು ಯೋಚಿಸಿ, ಯೋಜನೆ ರೂಪಿಸಿ ತದನಂತರ ಗುತ್ತಿಗೆದಾರರ ಮೇಲೆ ದಾಳಿ ನಡೆಸಿದೆ, ಚಿತ್ರರಂಗದ ದಾಳಿಯಂತೆ ಇದು ಸಹ ಕೇವಲ ಒಂದು ಐಟಿ ದಾಳಿ ಅಷ್ಟೇ, ತಪ್ಪು ಮಾಡದೇ ಇದ್ದರೆ ಯಾಕೆ ಭಯ ಪಡಬೇಕು. ಅಂದು ಚಿತ್ರ ರಂಗದ ನಾಯಕರ ದಾಳಿಯ ವಿಚಾರದಲ್ಲಿ ನೆನಪಾದ ವಿಷಯ ಇಂದು ಕುಮಾರಸ್ವಾಮಿ ರವರಿಗೆ ಮರೆತು ಹೋಯಿತೇ? ಅಥವಾ ಕುಮಾರಸ್ವಾಮಿ ರವರು ಕೇವಲ ಸಿಂಪತಿ ಪಡೆಯುವ ಉದ್ದೇಶದಿಂದ ಇಂದು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಒಟ್ಟಿನಲ್ಲಿ ಕೆಲವೇ ಕೆಲವು ದಿನಗಳಲ್ಲಿ ಮತ್ತೊಮ್ಮೆ ಐಟಿ ದಾಳಿಯ ವಿಷಯದಲ್ಲಿ ಯು ಟರ್ನ್ ಮಾಡಿದ ಕುಮಾರಸ್ವಾಮಿ ಅವರು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Post Author: Ravi Yadav