ಮಮತಾ ಕೋಟೆ ಛಿದ್ರ ಛಿದ್ರ ,ಬರೋಬ್ಬರಿ 100 ಶಾಸಕರು ಬಿಜೆಪಿಗೆ !!

ಮಮತಾ ಕೋಟೆ ಛಿದ್ರ ಛಿದ್ರ ,ಬರೋಬ್ಬರಿ 100 ಶಾಸಕರು ಬಿಜೆಪಿಗೆ !!

ಕೆಲವೇ ಕೆಲವು ದಿನಗಳ ಹಿಂದೆ ಮಮತಾ ಬ್ಯಾನರ್ಜಿ ರವರ ಭದ್ರಕೋಟೆ ಎನಿಸಿಕೊಂಡಿದ್ದ ಪಶ್ಚಿಮ ಬಂಗಾಳ ದಲ್ಲಿ ಬಿಜೆಪಿ ಪಕ್ಷದ ಅಸ್ತಿತ್ವ ಅಷ್ಟಾಗಿ ಇರಲಿಲ್ಲ. ಆದರೆ ನರೇಂದ್ರ ಮೋದಿ ಅವರ ಅಲೆ, ಅಮಿತ್ ಶಾ ರವರ ಚಾಕಚಕ್ಯತೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾನ್ ರವರ ಮಾತುಗಳು ಹಾಗೂ ಯೋಗಿ ಆದಿತ್ಯನಾಥ್ ರವರ ವರ್ಚಸ್ಸು ಇಡೀ ಪಶ್ಚಿಮ ಬಂಗಾಳವನ್ನು ಕೇಸರಿಮಯ ಮಾಡಲು ಹೊರಟಿದೆ. ಇದೀಗ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಮಮತಾ ಬ್ಯಾನರ್ಜಿ ರವರ ರಾಜಕೀಯ ಅಂತ್ಯ ಸನಿಹ ವಾಗಿದೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಮಮತಾ ಬ್ಯಾನರ್ಜಿ ರವರ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಜನತೆಯು ರೊಚ್ಚಿಗೆದ್ದಿದ್ದಾರೆ, ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಭರ್ಜರಿಯಾಗಿ ಗೆದ್ದು ಬೀಗಿದೆ. ಇಷ್ಟು ಸಾಲದು ಎಂಬಂತೆ ಹಲವಾರು ದಿನಗಳಿಂದ ತೃಣಮೂಲ ಕಾಂಗ್ರೆಸ್ ಪಕ್ಷದ ಹಲವಾರು ಸಚಿವರು ಹಾಗೂ ಶಾಸಕರು ಬಿಜೆಪಿ ಪಕ್ಷದತ್ತ ವಲಸೆ ಹೋಗುತ್ತಿದ್ದಾರೆ. ಮಮತಾ ಬ್ಯಾನರ್ಜಿ ರವರ ಸರ್ವಾಧಿಕಾರವನ್ನು ತೆರೆದಿಟ್ಟಿರುವ ಶಾಸಕರು ಬಿಜೆಪಿ ಪಕ್ಷ ಸೇರಿ ಇನ್ನೂ ಹತ್ತು ಹಲವಾರು ಬೆಂಬಲಿಗರನ್ನು ಕರೆತರುವ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ.

ಇತ್ತೀಚೆಗೆ ಐಪಿಎಸ್ ಅಧಿಕಾರಿಯು ನೇರವಾಗಿ ಮಮತಾ ಬ್ಯಾನರ್ಜಿ ರವರ ಹೆಸರನ್ನು ಆತ್ಮಹತ್ಯೆ ಪತ್ರದಲ್ಲಿ ಬರೆದಿಟ್ಟು ಮರಣ ಹೊಂದಿದ ನಂತರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ರವರ ವಿರುದ್ಧ ಕೂಗು ಮತ್ತಷ್ಟು ಹೆಚ್ಚಾಗಿದೆ. ಇದರಿಂದ ವಿಚಲಿತಗೊಂಡ ಇರುವ ಹಲವಾರು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಪಕ್ಷ ತೊರೆಯುವ ಚಿಂತನೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಹಾಗೂ ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಅರ್ಜುನ್ ಸಿಂಗ್ ಅವರು ಹೊರಹಾಕಿದ್ದಾರೆ.

ಮಮತಾ ಬ್ಯಾನರ್ಜಿ ರವರ ಸರ್ವಾಧಿಕಾರದಿಂದ ಬಳಲಿರುವ ನೂರಕ್ಕೂ ಹೆಚ್ಚು ಶಾಸಕರು ಬಿಜೆಪಿ ಪಕ್ಷ ಸೇರುವ ಇಚ್ಛೆಯನ್ನು ಹೊಂದಿದ್ದಾರೆ, ಚುನಾವಣಾ ಸಮಯದಲ್ಲಿ ಅನರ್ಹ ಭೀತಿಯಿಂದ ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಎಲ್ಲಾ ಶಾಸಕರು ಒಂದೇ ದಿನ ಒಂದೇ ವೇದಿಕೆಯಲ್ಲಿ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ. ಈ ವಿಷಯ ತಿಳಿದ ತಕ್ಷಣ ಪಕ್ಷಿಮ ಬಂಗಾಳ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ, ಖುದ್ದು ಮಮತಾ ಬ್ಯಾನರ್ಜಿ ಅವರು ತುರ್ತು ಸಭೆಗಳನ್ನು ನಡೆಸಿ ಪಕ್ಷಾಂತರ ಮಾಡಲು ಇಚ್ಚಿಸುತ್ತಿರುವ ಶಾಸಕರನ್ನು ಕಂಡುಹಿಡಿದು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.