ಬಯಲಾಯಿತು ಕುಮಾರಸ್ವಾಮಿ ಹಾಗೂ ಜಿಲ್ಲಾಧಿಕಾರಿಯ ಕುತಂತ್ರ ! ಅನರ್ಹತೆ ಭೀತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಸುಮಲತಾ ಗೆಲುವು ಖಚಿತ

ಬಯಲಾಯಿತು ಕುಮಾರಸ್ವಾಮಿ ಹಾಗೂ ಜಿಲ್ಲಾಧಿಕಾರಿಯ ಕುತಂತ್ರ ! ಅನರ್ಹತೆ ಭೀತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಸುಮಲತಾ ಗೆಲುವು ಖಚಿತ

ಮುಖ್ಯಮಂತ್ರಿಮುಖ್ಯಮಂತ್ರಿ ಕುಮಾರಸ್ವಾಮಿರವರ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಜಿಲ್ಲೆಯು ಪ್ರತಿ ಕ್ಷಣವೂ ಹೊಸ ಕುತೂಹಲವನ್ನು ಕೆರಳಿಸುತ್ತ ಸಾಗುತ್ತಿದೆ. ಒಂದು ಕಡೆ ಹಲವಾರು ರಾಜಕೀಯ ನಾಯಕರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ರುವ ಸಂದರ್ಭದಲ್ಲಿ ಇದೀಗ ನಿಖಿಲ್ ಕುಮಾರಸ್ವಾಮಿ ರವರ ರಾಜಕೀಯ ಭವಿಷ್ಯ ಇನ್ನು ಕೇವಲ ಕೆಲವೇ ಕೆಲವು ಗಂಟೆಗಳಲ್ಲಿ ನಿರ್ಧಾರವಾಗಲಿದೆ. ಖುದ್ದು ಅಕಾಡಕ್ಕೆ ಕೇಂದ್ರ ಚುನಾವಣಾ ಅಧಿಕಾರಿಗಳು ಇಳಿದಿದ್ದು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಮಂಡ್ಯ ಚುನಾವಣಾ ಅಧಿಕಾರಿ ಮಂಜುಶ್ರೀ ರವರಿಗೆ ದೊಡ್ಡ ಕಂಟಕ ಎದುರಾಗಿದೆ.

ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಗೊತ್ತಾ??ಕುಮಾರಸ್ವಾಮಿ ರವರು ಮಾಡಿದ್ದು ಏನು ಗೊತ್ತಾ?? ಸಂಪೂರ್ಣ ತಿಳಿಯಲು ಒಮ್ಮೆ ಓದಿ. 

ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2018 ರಲ್ಲಿ ಸುಪ್ರೀಂಕೋರ್ಟ್ ಹೊಸ ನಾಮಪತ್ರ ಮಾದರಿಯನ್ನು ಜಾರಿ ಮಾಡಿದೆ. ಹೊಸ ರೀತಿಯ ನಾಮಪತ್ರದಲ್ಲಿ ಕುಟುಂಬದ ಬಗ್ಗೆ ತಿಳಿದುಕೊಳ್ಳಲು ಅವಿಭಕ್ತ ಕುಟುಂಬ ಹಾಗು ವಿಭಕ್ತ ಕುಟುಂಬ ಎಂದು ವಿಂಗಡನೆ ಮಾಡಿ ಪ್ರತ್ಯೇಕವಾಗಿ ಉತ್ತರ ನೀಡುವಂತೆ ಅಭ್ಯರ್ಥಿಗಳಿಗೆ ತಾಕೀತು ಮಾಡಿದೆ. ಹೊಸ ಮಾದರಿಯಲ್ಲಿ 8 ಸ್ಥಳಗಳನ್ನು ಭರ್ತಿ ಮಾಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿತ್ತು ಆದರೆ ನಿಖಿಲ್ ಕುಮಾರಸ್ವಾಮಿ ಅವರು ಹಳೆಯ ನಾಮಪತ್ರವನ್ನು ಬಳಸಿಕೊಂಡು 6 ಸ್ಥಳಗಳನ್ನುಭರ್ತಿ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಪರಿಶೀಲನೆ ಯ ವೇಳೆಯಲ್ಲಿ ಇದರ ಬಗ್ಗೆ ತಿಳಿದ ಸುಮಲತಾ ಅಂಬರೀಶ್ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಸೊಪ್ಪು ಹಾಕದ ಮಂಡ್ಯ ಜಿಲ್ಲೆಯ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಧಿಕಾರಿ ಮಂಜುಶ್ರೀ ರವರು ಬರಹ ರೂಪದಲ್ಲಿ ದೂರು ಕೊಡುವಂತೆ ತಾಕೀತು ಮಾಡಿದರು. ಆಗ ಬೇರೆ ವಿಧಿ ಇಲ್ಲದೆ ಸುಮಲತಾ ಅಂಬರೀಶ್ ಅವರ ಬೆಂಬಲಿಗರು ಬರಹ ರೂಪದಲ್ಲಿ ದೂರನ್ನು ನೀಡುವ ವೇಳೆಯಲ್ಲಿ ನಿಖಿಲ್ ಸಲ್ಲಿಸಿರುವ ನಾಮಪತ್ರವನ್ನು ಅಧಿಕೃತವಾಗಿ ಸ್ವೀಕೃತ ಮಾಡಿದ್ದಾರೆ.

ಇದನ್ನು ಅರಿತುಕೊಂಡ ಸುಮಲತಾ ಅಂಬರೀಶ್ ರವರು ನೇರವಾಗಿ ರಾಜ್ಯ ಹಾಗೂ ಕೇಂದ್ರ ಚುನಾವಣಾ ಅಧಿಕಾರಿಗಳ ಜೊತೆ ಮಾತನಾಡಿ ಬರಹ ರೂಪದಲ್ಲಿ ದೂರು ನೀಡಿ, ನಿಖಿಲ್ ಕುಮಾರಸ್ವಾಮಿ ರವರ ನಾಮಪತ್ರವನ್ನು ತಿರಸ್ಕರಿಸುವಂತೆ ಕೋರಿಕೊಂಡಿದ್ದಾರೆ. ನಾಮಪತ್ರ ಬಹಳ ಮುಖ್ಯವಾದ ಪಾತ್ರ ವಹಿಸುವುದರಿಂದ ನೇರವಾಗಿ ದೂರಿನ ಅನ್ವಯ ಚುನಾವಣಾ ಅಧಿಕಾರಿಗಳು ಮಂಡ್ಯ ಜಿಲ್ಲೆಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ, ಈ ವಿಷಯ ತಿಳಿದ ಕೂಡಲೇ ಮಂಜ ಶ್ರೀ ರವರು ಕುಮಾರಸ್ವಾಮಿ ರವರಿಗೆ ಕರೆ ಮಾಡಿ ಹೊಸ ಮಾದರಿಯ ನಾಮಪತ್ರ ತಂದು ಕೊಡುವಂತೆ ಕೇಳಿಕೊಂಡಿದ್ದಾರೆ.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಮುಗಿದ ಮೇಲೆ ಜಿಲ್ಲಾಧಿಕಾರಿಯ ಬೆಂಬಲ ತೆಗೆದುಕೊಂಡು ಹೊಸ ರೀತಿಯ ನಾಮಪತ್ರ ಸಲ್ಲಿಸಿದ್ದಾರೆ ಎಂಬ ಆರೋಪ ಕುಮಾರಸ್ವಾಮಿ ರವರ ಮೇಲೆ ಕೇಳಿ ಬಂದಿದೆ. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಚುನಾವಣಾ ಅಧಿಕಾರಿಗಳು ನಾಮಪತ್ರ ಸ್ವೀಕರಿಸುವ ವೇಳೆಯಲ್ಲಿ ಚಿತ್ರೀಕರಣ ಮಾಡಲಾದ ವಿಡಿಯೋ ನೀಡಿ ಎಂದು ಕೇಳಿದ ತಕ್ಷಣ ಮಂಜುಶ್ರೀ ರವರು ಗಾಬರಿಗೊಂಡು 3 ಗಂಟೆಗಳ ಕಾಲ ಕಾಲಾವಕಾಶ ಕೇಳಿದ್ದಾರೆ. ಮೇಲ್ನೋಟಕ್ಕೆ ಚುನಾವಣಾ ಅಧಿಕಾರಿ ಮಂಜುಶ್ರೀ ರವರು ಈ ಪ್ರಕರಣದಲ್ಲಿ ಭಾಗಿ ಯಾಗಿರುವುದು ತಿಳಿದುಬಂದಿದೆ.

ಒಂದು ವೇಳೆ ಈ ವಿಡಿಯೋ ಚುನಾವಣಾ ಅಧಿಕಾರಿಗಳ ಕೈಗೆ ದೊರೆತು ನಿಖಿಲ್ ನಾಮಪತ್ರದಲ್ಲಿ ಅಸ್ಪಷ್ಟತೆ ಇರುವುದು ಕಂಡು ಬಂದರೆ ಚುನಾವಣಾ ಅಧಿಕಾರಿಗಳನ್ನು ಕೆಲಸದಿಂದ ಅಮಾನತು ಮಾಡಿ ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣೆಯಿಂದ ಅನರ್ಹಗೊಳಿಸುತ್ತಾರೆ ಹಾಗೂ ಒಂದು ವೇಳೆ ಕುಮಾರಸ್ವಾಮಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ರೀತಿಯ ಕೆಲಸ ಮಾಡಿದ್ದಾರೆ ಎಂದು ಮಂಜುಶ್ರೀ ರವರು ಒಪ್ಪಿಕೊಂಡಲ್ಲಿ ಕುಮಾರಸ್ವಾಮಿರವರ ಮುಖ್ಯಮಂತ್ರಿ ಕುರ್ಚಿ ಗೂ ಸಹ ಕಂಟಕ ಉಂಟಾಗಲಿದೆ.

ಒಟ್ಟಿನಲ್ಲಿ ಈಗ ನಿಖಿಲ್ ಕುಮಾರಸ್ವಾಮಿ ರವರ ರಾಜಕೀಯ ಭವಿಷ್ಯ ಕೇಂದ್ರ ಚುನಾವಣಾ ಅಧಿಕಾರಿಗಳ ಕೈಯಲ್ಲಿ ಇದೆ. ಕೇಂದ್ರ ಚುನಾವಣಾ ಅಧಿಕಾರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಇಡೀ ರಾಜ್ಯದ ಜನರು ಕಾದು ಕುಳಿತಿದ್ದಾ.ರೆ ಒಂದು ವೇಳೆ ತೀರ್ಪು ನಿಖಿಲ್ ಕುಮಾರಸ್ವಾಮಿ ರವರ ವಿರುದ್ಧ ಬಂದಲ್ಲಿ ಸಾಮಾನ್ಯವಾಗಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆಗಳು ಕೇಳಿ ಬರುತ್ತವೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಆದರೆ ದೂರು ನೀಡಿರುವುದು ಸುಮಲತಾ ಅಂಬರೀಶ್ ಅವರ ಬೆಂಬಲಿಗರು ಹಾಗೂ ಕೇಂದ್ರ ಚುನಾವಣಾ ಅಧಿಕಾರಿಗಳು ತಮ್ಮ ಕೆಲಸ ತಾವು ಮಾಡುತ್ತಿದ್ದಾರೆ ಎಂಬುದನ್ನು ಜನತೆಯು ಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನ ಸಾಮಾನ್ಯ ಜ್ಞಾನ ಹರಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.