ತಮ್ಮ ನಾಯಕರ ಮೇಲೆ ತಾವೇ ದಾಳಿ ಮಾಡಿಸಿಕೊಂಡರಾ ಕುಮಾರಸ್ವಾಮಿ??

ತಮ್ಮ ನಾಯಕರ ಮೇಲೆ ತಾವೇ ದಾಳಿ ಮಾಡಿಸಿಕೊಂಡರಾ ಕುಮಾರಸ್ವಾಮಿ??

ಇಂದು ಬೆಳ್ಳಂಬೆಳಗ್ಗೆ ಕರ್ನಾಟಕವೇ ಬೆಚ್ಚಿ ಬೀಳುವಂತೆ ಚುನಾವಣಾ ಸಮಯದಲ್ಲಿ ಐಟಿ ಅಧಿಕಾರಿಗಳು ಹಲವಾರು ರಾಜಕೀಯ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಈಗಾಗಲೇ ಹಲವಾರು ರಾಜಕೀಯ ನಾಯಕರ ಹಾಗೂ ಅವರ ಆಪ್ತರ ಮೇಲೆ ದಾಳಿ ನಟಿಸಿರುವ ಐಟಿ ಅಧಿಕಾರಿಗಳು ಸತತ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಈ ಐಟಿ ದಾಳಿಯ ಹಿಂದೆ ಹಲವಾರು ರಾಜಕೀಯ ಷಡ್ಯಂತ್ರ ಗಳು ಇದೆ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡೀ ದೇಶದಲ್ಲಿ ಐಟಿ ದಾಳಿ ನಡೆದ ತಕ್ಷಣ ಮೊದಲ ಹೆಸರು ಕೇಳಿ ಬರುವುದು ನರೇಂದ್ರ ಮೋದಿ. ತಮ್ಮ ದಿಟ್ಟ ನಿರ್ಧಾರಗಳ ಮೂಲಕ ಇಡೀ ವಿಶ್ವಕ್ಕೆ ಭಾರತ ಏನೆಂಬುದನ್ನು ತೋರಿಸುತ್ತಿರುವ ನರೇಂದ್ರ ಮೋದಿರವರು ಇನ್ನಿಲ್ಲದ ಟೀಕೆಗಳಿಗೆ ಒಳಗಾಗುತ್ತಿದ್ದಾರೆ.

ಸೈನಿಕರಿಗೆ ಸಂಪೂರ್ಣ ಸ್ವತಂತ್ರ ನೀಡಿ ಸರ್ಜಿಕಲ್ ಸ್ಟ್ರೈಕ್ ಗಳನ್ನು ನಡೆಸಿ ಸೇನೆಯ ಪರವಾಗಿ ಮಾತನಾಡಿದ್ದಕ್ಕೆ, ಮೋದಿ ಅವರು ದಾಳಿ ಮಾಡಿ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದರು. ಆದರೆ ಇಂದು ಐಟಿ ದಾಳಿ ನಡೆದ ತಕ್ಷಣ ನೇರವಾಗಿ ಎಲ್ಲರೂ ನರೇಂದ್ರ ಮೋದಿ ರವರ ಅಧಿಕಾರದ ಮೇಲೆ ಬೆರಳು ತೋರಿಸಿದ್ದಾರೆ. ಆದರೆ ಕುಮಾರಸ್ವಾಮಿ ರವರ ನಡವಳಿಕೆ ಇನ್ನಿಲ್ಲದ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ, ಸಾಮಾನ್ಯವಾಗಿ ಐಟಿ ದಾಳಿ ನಡೆಯುತ್ತದೆ ಎಂದರೆ ಯಾರಿಗೂ ಸಹ ಮಾಹಿತಿ ಹೊರ ಬೀಳುವುದಿಲ್ಲ. ಆದರೆ ನಿನ್ನೆ ಸಂಜೆ ಕುಮಾರಸ್ವಾಮಿ ಅವರು ತಾವೇ ಸ್ವತಹ ಕಂಡಂತೆ 300 ಕಾರುಗಳಲ್ಲಿ ಐಟಿ ಅಧಿಕಾರಿಗಳು ನಮ್ಮ ಮೇಲೆ ದಾಳಿ ಮಾಡಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಹೊರ ಹಾಕಿದರು. ಈ ಹೇಳಿಕೆ ನೀಡಿದ ತಕ್ಷಣ ಕೆಲವರು ಸುಮ್ಮನೇ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸುಮ್ಮನಾಗಿದ್ದರು.

ಆದರೆ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ ಕೆಲವೇ ಕೆಲವು ಗಂಟೆಗಳಲ್ಲಿ ಐಟಿ ಅಧಿಕಾರಿಗಳು ಜೆಡಿಎಸ್ ನಾಯಕರ ಬಾಗಿಲು ತಟ್ಟಿದ್ದಾರೆ. ಐ ಟಿ ಅಧಿಕಾರಿಗಳು ದಾಳಿ ನಡೆಸುವ ಬಗ್ಗೆ ಕುಮಾರಸ್ವಾಮಿ ರವರಿಗೆ ಯಾರು ಮಾಹಿತಿ ನೀಡಿದರು ಎಂಬ ಅನುಮಾನ ಎಲ್ಲರನ್ನೂ ಕಾಡತೊಡಗಿದೆ. ಐಟಿ ದಾಳಿ ಪ್ರಾರಂಭವಾದ ಕೆಲವೇ ಕೆಲವು ಕ್ಷಣಗಳಲ್ಲಿ ಕುಮಾರಸ್ವಾಮಿ ರವರಿಗೆ ಹೇಗೆ ತಿಳಿಯಿತು ಎಂಬ ಅನುಮಾನ ಸಹ ಎಲ್ಲರಲ್ಲೂ ಮೂಡಿದೆ ಯಾಕೆಂದರೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಮನೆಯಿಂದ ಹೊರ ಹೋಗದಂತೆ ಹಾಗೂ ಎಲ್ಲಾ ಫೋನ್ ಗಳನ್ನು ಸೀಸ್ ಮಾಡಿ ಪರಿಶೀಲನೆ ಆರಂಭಿಸುತ್ತಾರೆ.

ಇಷ್ಟೆಲ್ಲಾ ಮಾಡಿದರೂ ಸಹ ಐಟಿ ಅಧಿಕಾರಿಗಳ ದಾಳಿ ಗೆ ಬಗ್ಗೆ ಕುಮಾರಸ್ವಾಮಿ ರವರು ಹೇಗೆ ತಿಳಿದುಕೊಂಡರು ಎಂಬ ಸಂದೇಹ ಎಲ್ಲರಲ್ಲೂ ಮನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಾಮಾಜಿಕ ಜಾಲತಾಣದ ನೆಟ್ಟಿಗರು ಬಹುಶಹ ಕುಮಾರಸ್ವಾಮಿ ಅವರು ತುರ್ತು ಕರೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡುವ ನೆಪದಲ್ಲಿ ತಮ್ಮ ನಾಯಕರ ಮನೆಗಳ ಮೇಲೆ ದಾಳಿ ನಡೆಸುವ ಹುನ್ನಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಜನರ ಸಿಂಪತಿ ಗಳಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಮತ್ತಷ್ಟು ಮತಗಳನ್ನು ಪಡೆಯಬೇಕು ಎಂಬುದು ಕುಮಾರಸ್ವಾಮಿ ಅವರ ಉದ್ದೇಶವಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಯಾಕೆಂದರೆ ಚುನಾವಣಾ ಸಮಯದಲ್ಲಿ ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ಇಂಥವರ ಮನೆಯಲ್ಲಿ ಹಣವಿದೆ ಎಂದು ತಕ್ಷಣ ದಾಳಿ ನಡೆಸಲಾಗುತ್ತದೆ, ಇದೇ ಕಾನೂನನ್ನು ದುರುಪಯೋಗಪಡಿಸಿಕೊಂಡು ಕುಮಾರಸ್ವಾಮಿ ಅವರು ಈ ರೀತಿಯ ಕುತಂತ್ರ ಮಾಡಿರಬಹುದಾ ಎಂಬ ಅನುಮಾನ ಎಲ್ಲರಲ್ಲೂ ಮೂಡಿರುವುದಂತೂ ಸತ್ಯ.