ಬಿಗ್ ಬ್ರೇಕಿಂಗ್: ಚುನಾವಣಾ ಅಖಾಡಕ್ಕೆ ಖುದ್ದು ಡಿ ಬಾಸ್ ಅಭಿಮಾನಿಗಳು- ನಿಖಿಲ್ ಗೆ ಠೇವಣಿ ಸಿಗುವುದು ಸಹ ಅನುಮಾನ

ಚುನಾವಣೆ ವಿಚಾರವಾಗಿ ನಟ ದರ್ಶನ್ ರವರ ಹಾಗೂ ಕುಮಾರಸ್ವಾಮಿ ರವರ ಕುಟುಂಬದ ನಡುವೆ ಕಾಳಗ ತಾರಕಕ್ಕೇರಿದೆ. ಕುಮಾರಸ್ವಾಮಿ ರವರು ಸುಮಲತಾ ಅವರ ಬೆಂಬಲಕ್ಕೆ ದರ್ಶನ್ ರವರು ನಿಂತಿರುವುದು ತಪ್ಪು ಎಂಬಂತೆ ಮನ ಬಂದಂತೆ ಹೇಳಿಕೆಗಳನ್ನು ನೀಡುತ್ತಾ ಸುಖಾಸುಮ್ಮನೆ ದರ್ಶನ್ ರವರ ಅಭಿಮಾನಿಗಳನ್ನು ಕೆಣಕುತ್ತಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಹೇಳಿಕೆಗಳಿಗೆ ನಟ ದರ್ಶನ್ ರವರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ದರ್ಶನ್ ರವರ ಕ್ಯಾರೆಕ್ಟರ್ ಅದು, ಆದರೆ ಅದನ್ನೇ ದುರುಪಯೋಗ ಪಡೆಸುಕೊಂಡರೆ ಹೇಗೆ ಎಂಬುದು ಅಭಿಮಾನಿಗಳ ವಾದವಾಗಿದೆ.

ಲಕ್ಷಾಂತರ ದರ್ಶನ್ ಅಭಿಮಾನಿಗಳು ಡಿ ಬಾ ಸ್ ರವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಮುಂದುವರೆದರೆ ಸುಮ್ಮನೆ ಕೂರುವವರಲ್ಲ. ಇದೀಗ ದರ್ಶನ್ ರವರ ವಿರುದ್ಧ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕುಮಾರಸ್ವಾಮಿ ರವರು ಭಾರಿ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಿದೆ. ಇಷ್ಟು ದಿವಸ ನಿಖಿಲ್ ಕುಮಾರಸ್ವಾಮಿ ರವರು ಸುಮಲತಾ ರವರಿಗೆ ಸ್ಪರ್ಧೆ ನೀಡುವ ಕೊಂಚ ಸಾಧ್ಯತೆಗಳು ಇದ್ದವು ಆದರೆ ಇದೀಗ ಚುನಾವಣೆ ಅಖಾಡಕ್ಕೆ ಖುದ್ದು ದರ್ಶನ್ ರವರ ಅಭಿಮಾನಿಗಳು ಇಳಿದಿದ್ದು ನಿಖಿಲ್ ಕುಮಾರಸ್ವಾಮಿ ಅವರಿಗೆ ಠೇವಣಿ ಸಿಗುವುದು ಸಹ ಅನುಮಾನ. ಅಷ್ಟಕ್ಕೂ ದರ್ಶನ್ ಅಭಿಮಾನಿಗಳು ಏನು ಮಾಡಲು ಹೊರಟಿದ್ದಾರೆ ಗೊತ್ತಾ??

ಮೊದಲಿನಿಂದಲೂ ದರ್ಶನ್ ರವರ ವಿರುದ್ದದ ಹೇಳಿಕೆಗಳಿಗೆ ಭಾರಿ ವಿರೋಧ ವ್ಯಕ್ತವಾಗುತ್ತೀತ್ತು, ಆದರೆ ಕುಮಾರಸ್ವಾಮಿ ರವರು ಡಿ ಬಾಸ್ ಎಂಬ ಬಿರುದಿನ ಬಗ್ಗೆ ಹೇಳಿಕೆ ನೀಡಿದ ಮರುಕ್ಷಣದಿಂದ ದರ್ಶನ್ ರವರ ಅಭಿಮಾನಿಗಳು ಕುಮಾರಸ್ವಾಮಿ ರವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈಗಾಗಲೇ ಲಕ್ಷಾಂತರ ಜನ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಹಲವಾರು ಅಭಿಯಾನ ಗಳನ್ನು ಆರಂಭಿಸಿ ಮತ ನೀಡದಂತೆ ಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಇಷ್ಟು ಸಾಲದು ಎಂಬಂತೆ ಈಗ ಖುದ್ದು ಸುಮಲತಾ ರವರ ಪರ ಪ್ರಚಾರ ಮಾಡುವುದಕ್ಕಾಗಿ ಸಾವಿರಾರು ದರ್ಶನ್ ರವರ ಅಭಿಮಾನಿಗಳು ಮಂಡ್ಯ ಜಿಲ್ಲೆ ಗೆ ತೆರಳಲು ನಿರ್ಧರಿಸಿದ್ದಾರೆ. ತಮ್ಮ ನಿಲುವನ್ನು ಸ್ಪಷ್ಟ ಪಡಿಸಿರುವ ದರ್ಶನ್ ರವರ ಅಭಿಮಾನಿಗಳು ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ಪ್ರಚಾರ ಯಾತ್ರೆ ಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತವೆ. ಕುಮಾರಸ್ವಾಮಿ ರವರ ಕುತಂತ್ರ ರಾಜಕಾರಣದ ನೀತಿಯನ್ನು ಎಲ್ಲರಿಗೂ ತಿಳಿಸುತ್ತೇವೆ ಈ ಮೂಲಕ ನಿಖಿಲ್ ಕುಮಾರಸ್ವಾಮಿ ರವರಿಗೆ ಠೇವಣಿ  ಕೂಡ ಸಿಗದಂತೆ ಸೋಲನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ ದರ್ಶನ್ ಅವರ ವಿರುದ್ಧ ಮಾತನಾಡಿದರೆ ಏನಾಗುತ್ತದೆ ಎಂಬುದು ಕುಮಾರಸ್ವಾಮಿ ರವರಿಗೆ ಅರ್ಥವಾಗಬೇಕು ಎಂದು ಹೇಳಿಕೆ ನೀಡಿದ್ದಾರೆ.

Post Author: Ravi Yadav