ಜೆಡಿಎಸ್ ಕೀಳು ಮಟ್ಟದ ರಾಜಕೀಯ ತಂತ್ರಗಳನ್ನು ಹೊರಹಾಕಿದ ಸುಮಲತಾ- ಅಧಿಕಾರದಲ್ಲಿ ಇದ್ದರೆ ಏನು ಬೇಕಾದರೂ ಮಾಡಬಹುದಾ??

ಜೆಡಿಎಸ್ ಕೀಳು ಮಟ್ಟದ ರಾಜಕೀಯ ತಂತ್ರಗಳನ್ನು ಹೊರಹಾಕಿದ ಸುಮಲತಾ- ಅಧಿಕಾರದಲ್ಲಿ ಇದ್ದರೆ ಏನು ಬೇಕಾದರೂ ಮಾಡಬಹುದಾ??

ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ನಿಖಿಲ್ ಕುಮಾರಸ್ವಾಮಿ ರವರ ಸೋಲು ಬಹುತೇಕ ಖಚಿತವಾಗಿದೆ. ಸುಮಲತಾ ರವರ ಭಾರಿ ಜನ ಬೆಂಬಲ ವನ್ನು ಕಂಡು ಜೆಡಿಎಸ್ ಪಕ್ಷ ಅಕ್ಷರಸಹ ನಡುಗಿ ಹೋಗಿದೆ. ಇದೀಗ ಕುಮಾರಸ್ವಾಮಿ ರವರು ಸುಮಲತಾ ಅವರನ್ನು ಮಣಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ದೂರಿಗೆ ಮತ್ತಷ್ಟು ಪೂರಕ ಎಂಬಂತೆ ಸುಮಲತಾ ರವರು ಜೆಡಿಎಸ್ ಪಕ್ಷದ ಕೀಳು ಮಟ್ಟದ ರಾಜಕಾರಣವನ್ನು ಟಿವಿ9 ಚಾನಲ್ ನಲ್ಲಿ ಹೊರಹಾಕಿದ್ದಾರೆ.ಐಟಿ ದಾಳಿಯ ಬಗ್ಗೆ ಮಾತನಾಡಿರುವ ಪುಟ್ಟರಾಜು ರವರು ಪರೋಕ್ಷವಾಗಿ ಸುಮಲತಾ ರವರಿಗೆ ಐಟಿ ದಾಳಿಗೆ ಕಾರಣ ಎಂದು ಹೇಳಿದ್ದರು ಇದಕ್ಕೆ ಪ್ರತಿಕ್ರಿಯೆ ನೀಡಲು tv9 ಮಾಧ್ಯಮದಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷದ ಕುತಂತ್ರ ರಾಜಕಾರಣ ನೀತಿಯನ್ನು ಹೊರಹಾಕಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಮೊದಲು ಸುಮಲತಾ ರವರನ್ನು ತಡೆಗಟ್ಟಲು ಜೆಡಿಎಸ್ ಪಕ್ಷವು ಹಲವಾರು ತಂತ್ರಗಳನ್ನು ನಡೆದಿತ್ತು. ಇತ್ತ ಯಶ್ ಹಾಗೂ ದರ್ಶನ್ ರವರ ಮೇಲೆ ಇನ್ನಿಲ್ಲದ ವಾಗ್ದಾಳಿ ಗಳನ್ನು ನಡೆಸಿರುವ ಕುಮಾರಸ್ವಾಮಿ ರವರು ಸುಮಲತಾ ಅವರನ್ನು ಸಹ ಅತ್ಯಂತ ಕಟು ಶಬ್ದಗಳಲ್ಲಿ ನಿಂದಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇಷ್ಟು ಸಾಲದು ಎಂಬಂತೆ ಜೆಡಿಎಸ್ ಪಕ್ಷದ ನಾಯಕ ರೇವಣ್ಣ, ಶಾಸಕ ಪುಟ್ಟರಾಜು ಸೇರಿದಂತೆ ಹತ್ತು ಹಲವಾರು ಜೆಡಿಎಸ್ ಕಾರ್ಯಕರ್ತರು ಸುಮಲತಾ ರವರ ಮೇಲೆ ಮಾನವೀಯತೆಯನ್ನು ಮರೆತು ಇನ್ನಿಲ್ಲದ ಹೇಳಿಕೆಗಳನ್ನು ನೀಡಿದ್ದರು. ಈ ಎಲ್ಲಾ ಅಂಶಗಳನ್ನು ಹೊರ ಹಾಕಿರುವ ಸುಮಲತಾ ರವರು ಟಿವಿ9 ನಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಂಡ್ಯ ಜಿಲ್ಲೆಯನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿರುವ ಕುಮಾರಸ್ವಾಮಿ ಅವರ ಬೆಂಬಲಿಗರು ಸಂಪೂರ್ಣ ಪಟ್ಟಿಯನ್ನು ತರಿಸಿಕೊಂಡು ಅವರ ವಿರುದ್ಧ ಅಧಿಕಾರದ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಆ ಬೆಂಬಲಿಗರ ಉದ್ಯಮ ಏನೆಂದು ತಿಳಿದುಕೊಂಡು ಅದನ್ನು ಮುಚ್ಚಿಸುತ್ತೇವೆ ಎಂಬ ಎಚ್ಚರಿಕೆಗಳನ್ನು ನೀಡುತ್ತಾ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರ ಹಾಕಿದ್ದಾರೆ. ಹೋಟೆಲ್ ,ರೆಸ್ಟೋರೆಂಟ್ ನಡೆಸುತ್ತಿರುವ ನನ್ನ ಬೆಂಬಲಿಗರಿಗೆ ಅಬಕಾರಿ ಇಲಾಖೆಯ ಮೂಲಕ ಲೈಸನ್ಸ್ ರದ್ದು ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂಬ ಅಂಶವನ್ನು ಸಹ ಹೊರಹಾಕಿದ್ದಾರೆ.

ನಂತರ ಮಾತನಾಡಿದ ಸುಮಲತಾ ರವರು, ಜೆಡಿಎಸ್ ಪಕ್ಷದ ನಾಯಕರು ಮಾನವೀಯತೆಯನ್ನು ಮರೆತು ಹೇಳಿಕೆಗಳನ್ನು ನೀಡುತ್ತಿದ್ದಾರೆ ನಾನು ಯಾವುದೇ ಟೀಕೆಗಳಿಗೂ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನನ್ನು ಪ್ರಚೋದಿಸುವ ಕೆಲಸವನ್ನು ಮಾಡುತ್ತಿದ್ದಾರೆ ಪ್ರತಿಯೊಂದಕ್ಕೂ ಉತ್ತರ ಚುನಾವಣೆ ಯಲ್ಲಿ ನೀಡುತ್ತೇನೆ. ಐಟಿ ದಾಳಿಗೆ ನಾನು ಕಾರಣ ಎಂದು ಪುಟ್ಟರಾಜ ರವರು ಹೇಳಿಕೆ ನೀಡಿದ್ದಾರೆ, ಆದರೆ ಕಾನೂನಿನ ಪ್ರಕಾರ ಒಂದು ಐಟಿ ದಾಳಿ ನಡೆಯಬೇಕು ಎಂದರೆ ಕನಿಷ್ಠ ಮೂರು ತಿಂಗಳ ವಿಚಾರಣೆ ನಡೆಯಬೇಕು ತದನಂತರ ಐಟಿ ದಾಳಿ ನಡೆಯುತ್ತದೆ, ಎಂದು ಕಾನೂನಿನ ಪಾಠ ಮಾಡಿದ್ದಾರೆ.ನೀವು ಯಾರ ಅಭಿಮಾನಿಯೆಯಾಗಿರಿ ಒಂದು ರಾಜ್ಯದ ಮುಖ್ಯಮಂತ್ರಿಯೂ ಮಗ ಸೋಲುವುದನ್ನು ನೋಡಲಾರದೆ ಈ ರೀತಿ ಒಂದು ಹೆಣ್ಣು ಎಂಬುದನ್ನು ನೋಡಲು ನಾಲಿಗೆಗೆ ಎಲುಬಿಲ್ಲದಂತೆ ಮಾತನಾಡುವುದು ಎಷ್ಟು ಸರಿ??