ಸುಮಲತಾ ರವರಿಗೆ ಮತ್ತೊಂದು ಜಯ, ಸಿಎಂ ಗೆ ಶಾಕ್ ನೀಡಿದ ಚುನಾವಣಾ ಆಯೋಗ.

ಕುಮಾರಸ್ವಾಮಿ ರವರು ಮಂಡ್ಯ ಜಿಲ್ಲೆಯ ಚುನಾವಣೆಯ ಬಗ್ಗೆ ಭಾರಿ ತಲೆಕೆಡಿಸಿಕೊಂಡಂತೆ ಕಾಣುತ್ತಿದೆ. ಸುಮಲತಾ ರ ಅಲೆಯಲ್ಲಿ ಮುಖ್ಯಮಂತ್ರಿಗಳ ಮಗ ನಿಖಿಲ್ ಕುಮಾರಸ್ವಾಮಿ ಅವರು ಕೊಚ್ಚಿಕೊಂಡು ಹೋಗುವುದು ಖಚಿತ ವಾದಂತೆ ಕಾಣುತ್ತಿದೆ. ಸುಮಲತಾ ರವರ ಜನ ಬೆಂಬಲವನ್ನು ಕಂಡು ಒಂದು ಕ್ಷಣ ಕುಮಾರಸ್ವಾಮಿ ಅವರು ಶಾಕ್ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಈಗಾಗಲೇ ಹಲವು ಕಾಂಗ್ರೆಸ್ ನಾಯಕರ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿರುವ ಜೆಡಿಎಸ್ ಬೆಂಬಲಿಗರ ಬೆಂಬಲವನ್ನು ಪಡೆದಿರುವ ಸುಮಲತಾ ಅವರು ಇತ್ತೀಚೆಗಷ್ಟೇ ರೈತ ಸಂಘ ಹಾಗೂ ಬಿಜೆಪಿ ಪಕ್ಷದ ಬೆಂಬಲ ಪಡೆದು ಕೊಂಡಿದ್ದರು.

ಆದ ಕಾರಣ ಕ್ಕಾಗಿಯೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುಮಲತಾ ಅವರನ್ನು ಮಟ್ಟ ಹಾಕಲು ಕುಮಾರಸ್ವಾಮಿ ರವರು ಇನ್ನಿಲ್ಲದ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಸುಮಲತಾ ರವರ ನಾಮಪತ್ರದ ಬೆಳೆಯಲ್ಲಿ ಕೇಬಲ್ ಕಟ್ ಮಾಡಿಸಿ, ಪವರ್ ಹೋಗಿತ್ತು ಎಂದು ಹೇಳಿದ್ದರು ಆದರೆ ತಾಂತ್ರಿಕ ದೋಷದಿಂದ ಜಿಲ್ಲೆಯಲ್ಲಿ ಕರೆಂಟು ಹೋದರೆ ಅದು ಕುಮಾರಸ್ವಾಮಿ ರವರಿಗೆ ಹೇಗೆ ತಿಳಿಯುತ್ತದೆ ಎಂಬುದು ಅಭಿಮಾನಿಗಳ ಪ್ರಶ್ನೆ. ಇದೇ ರೀತಿ ಹತ್ತು ಹಲವಾರು ತಂತ್ರಗಳನ್ನು ಹೂಡಿರುವ ಕುಮಾರಸ್ವಾಮಿ ರವರು ಸುಮಲತಾ ಅವರ ಬೆಂಬಲಿಗರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ಪಡುತ್ತಿದ್ದಾರೆ. ಇದಕ್ಕೆಲ್ಲಾ ಕುಮಾರಸ್ವಾಮಿ ರವರು ರಾಜ್ಯದ ಗುಪ್ತಚರ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತಾವು ಮುಖ್ಯಮಂತ್ರಿ ಆಗಿರುವುದರಿಂದ ಗುಪ್ತಚರ ಇಲಾಖೆಯನ್ನು ರಹಸ್ಯವಾಗಿ ಬಳಸಿಕೊಂಡು ತರಬೇತಿ ಹೆಸರಿನಲ್ಲಿ ಬೆಂಗಳೂರಿಗೆ ಕರೆಸಿಕೊಂಡು ಸುಮಲತಾ ರವರ ಸಂಪೂರ್ಣ ವಿವರಗಳನ್ನು ಪಡೆದು ಕೊಳ್ಳುತ್ತಿರುವ ಕುಮಾರಸ್ವಾಮಿರವರ ತಂತ್ರ ಇದೀಗ ಬಯಲಾಗಿದ್ದು ಚುನಾವಣಾ ಆಯೋಗ ಇದಕ್ಕೆ ಬ್ರೇಕ್ ಹಾಕಲು ನಿರ್ಧರಿಸಿ ಕುಮಾರಸ್ವಾಮಿ ರವರಿಗೆ ಇರುವ ಒಂದು ದಾರಿಯನ್ನು ಮುಚ್ಚಲು ನಿರ್ಧಾರ ಮಾಡಲಾಗಿದೆ.

ಹೌದು ಇನ್ನು ಮುಂದೆ ಕುಮಾರಸ್ವಾಮಿ ರವರು ಚುನಾವಣೆ ಮುಗಿಯುವವರೆಗೂ ಗುಪ್ತಚರ ಇಲಾಖೆಯಿಂದ ಯಾವುದೇ ಕಾರಣಕ್ಕೂ ಸಂಪೂರ್ಣ ವಿವರಗಳೊಂದಿಗೆ ಹಾಗೂ ಚುನಾವಣಾ ಆಯೋಗದ ಅನುಮತಿಯೊಂದಿಗೆ ಮಾತ್ರ ಭೇಟಿ ಮಾಡಬೇಕೆಂದು ಘೋಷಣೆ ಮಾಡಿದೆ. ಸಂಪೂರ್ಣ ಗುಪ್ತಚರ ಇಲಾಖೆಯಿಂದ ಬಳಸಿಕೊಂಡು ಸುಮಲತಾ ಅವರನ್ನು ಮಟ್ಟ ಹಾಕಲು ಪ್ರಯತ್ನ ಪಡುತ್ತಿದ್ದ ಕುಮಾರಸ್ವಾಮಿ ರವರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಮುಂದೆ ಯಾವುದೇ ಫೋನ್ ಗಳ ಕದ್ದಾಲಿಕೆ, ರಹಸ್ಯ ಮಾಹಿತಿ ಹಾಗೂ ಗುಪ್ತಚರ ಇಲಾಖೆಯ ದುರುಪಯೋಗ ನಡೆಯುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Post Author: Ravi Yadav