ದೋಸ್ತಿ ಗಳಲ್ಲಿ ಭಿನ್ನಮತ- ಪ್ರತಾಪ್ ಸಿಂಹ ಗೆಲುವು ಖಚಿತ

ದೋಸ್ತಿ ಗಳಲ್ಲಿ ಭಿನ್ನಮತ- ಪ್ರತಾಪ್ ಸಿಂಹ ಗೆಲುವು ಖಚಿತ

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣಾ ಮೈತ್ರಿಯನ್ನು ಮಾಡಿಕೊಂಡಿರುವ ಕಾರಣ ಸೀಟು ಹಂಚಿಕೆಯ ವಿಚಾರದಲ್ಲಿ ಈಗಾಗಲೇ ಹಲವಾರು ಭಿನ್ನಮತ ಗಳು ಉಂಟಾಗಿವೆ. ಇನ್ನು ಮೈಸೂರಿನಲ್ಲಿ ತನ್ನದೇ ಪ್ರಾಬಲ್ಯವನ್ನು ಹೊಂದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಬ್ಬರನ್ನು ಒಬ್ಬರು ಬೆಂಬಲಿಸುತ್ತಿಲ್ಲ, ಮೈತ್ರಿ ಧರ್ಮವನ್ನು ಪಾಲಿಸುವುದರಲ್ಲಿ ಎರಡು ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿರುವ ಕಾರಣ ಪ್ರತಾಪ್ ಸಿಂಹ ರವರ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ.ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷಕ್ಕೆ ಕೈಕೊಟ್ಟಿದೆ. ಇದರಿಂದ ಕೆಂಡಾಮಂಡಲವಾಗಿರುವ ಜೆಡಿಎಸ್ ನಾಯಕರು ತಮ್ಮದೇ ಆದ ವರ್ಚಸ್ಸನ್ನು ಹೊಂದಿರುವವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ.

ಇದಕ್ಕೆ ಪೂರಕ ಎಂಬಂತೆ ಇಂದು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಅಲ್ಲಿ ಯಾವೊಬ್ಬ ಜೆಡಿಎಸ್ ನಾಯಕರು ಹಾಜರಾಗಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದಷ್ಟೇ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ನಮಗೆ ಕೈ ಕೊಟ್ಟರೆ ನಾವು ಮೈಸೂರಿನಲ್ಲಿ ಕೈಕೊಟ್ಟು ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತೇವೆ ಎಂದು ಜೆಡಿಎಸ್ ಶಾಸಕ ಹೇಳಿಕೆ ನೀಡಿದ್ದರು.ಈಗಾಗಲೇ ಸತತ ಐದು ವರ್ಷಗಳ ಕಾಲ ಅಭಿವೃದ್ಧಿಯೇ ತನ್ನ ಮಂತ್ರ ಎಂದು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಮೈಸೂರು ಹಾಗೂ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿರುವ ಪ್ರತಾಪ್ ಸಿಂಹರವರು ಬಹಳ ಸುಲಭವಾಗಿ ಗೆಲುವು ದಾಖಲಿಸುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ದೋಸ್ತಿಗಳು ಮೈತ್ರಿಯನ್ನು ಮಾಡಿಕೊಂಡು ಸೀಟು ಹಂಚಿಕೆ ಮಾಡಿಕೊಂಡಿರುವುದರಿಂದ ಪ್ರತಾಪ್ ಸಿಂಹ ರವರ ಗೆಲುವು ಸ್ವಲ್ಪ ಕಷ್ಟವೆನಿಸಿತು, ಆದರೆ ದೋಸ್ತಿಗಳ ಭಿನ್ನಮತ ಪ್ರತಾಪ್ ಸಿಂಹ ರವರಿಗೆ ವರದಾನವಾಗಿದೆ ಒಂದು ವೇಳೆ ಈದೇ ರೀತಿ ಭಿನ್ನಮತಗಳು ಮುಂದುವರೆದಲ್ಲಿ ಪ್ರತಾಪ್ ಸಿಂಹರವರು ಭಾರಿ ಅಂತರದಿಂದ ಗೆದ್ದು ಬೀಗಲಿದ್ದಾರೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ.