ದೇವೇಗೌಡರ ಭದ್ರಕೋಟೆ ಛಿದ್ರ ಛಿದ್ರ- ಯಡಿಯೂರಪ್ಪ ಶಾಕ್, ಶಹಭಾಷ್ ಎ ಮಂಜು

ದೇವೇಗೌಡರ ಭದ್ರಕೋಟೆ ಛಿದ್ರ ಛಿದ್ರ- ಯಡಿಯೂರಪ್ಪ ಶಾಕ್, ಶಹಭಾಷ್ ಎ ಮಂಜು

ಹಾಸನ ಜಿಲ್ಲೆಯಲ್ಲಿ ಮೊದಲಿನಿಂದಲೂ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತುತ್ತ ಬಂದಿದ್ದ ಎ ಮಂಜುರವರು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಯನ್ನು ಮಾಡಿಕೊಂಡಿರುವ ಕಾರಣ ಎಲ್ಲಾ ಕ್ಷೇತ್ರಗಳಲ್ಲೂ ಸಂಚರಿಸಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ನರೇಂದ್ರ ಮೋದಿ ಅವರ ಅಲೆಗೆ ಮನ ಸೋತು ಬಿಜೆಪಿ ಪಕ್ಷ ಸೇರುವ ನಿರ್ಧಾರ ಮಾಡಿದ್ದೇನೆ ಎಂದು ಈ ಹಿಂದೆಯೇ ಹೇಳಿಕೆ ನೀಡಿದ್ದಾರೆ. ಆದರೆ ಇವರ ಹೇಳಿಕೆಗಳಿಗೆ ಯಾವುದೇ ರಾಜಕೀಯ ಪಂಡಿತರು ಸೊಪ್ಪು ಹಾಕಿರಲಿಲ್ಲ. ಯಾಕೆಂದರೆ ಮೊದಲಿಂದಲೂ ದೇವೇಗೌಡರ ಭದ್ರಕೋಟೆಯಾಗಿರುವ ಕಾರಣ ಅಲ್ಲಿ ಬೇರೆ ಯಾರದ್ದು ಅಲೆ ಇರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು

ಆದರೆ ಇಂದು ಮಾಜಿ ಪ್ರಧಾನಿ ದೇವೇಗೌಡರ ಭದ್ರಕೋಟೆಯಾದ ಹಾಸನ ಕ್ಷೇತ್ರವನ್ನು ನರೇಂದ್ರ ಮೋದಿ ಅವರ ಅಲೆ ಹಾಗೂ ಎ ಮಂಜುರವರು ವರ್ಚಸ್ಸು ಛಿದ್ರ ಛಿದ್ರ ಮಾಡಿದೆ ಎಂಬುದಕ್ಕೆ ಉತ್ತಮ ನಿದರ್ಶನ ಸಿಕ್ಕಿದ್ದು, ಚಿತ್ರಣವನ್ನು ಕಂಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ನವರು ಸಹ ಒಂದು ಕ್ಷಣ ದಂಗಾಗಿ ಎ ಮಂಜುರವರ ವರ್ಚಸ್ಸು ಹಾಗೂ  ಅಲೆ ಕಂಡು ಶಾಕ್ ಆಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ ಹಾಗೂ ಇಷ್ಟೆಲ್ಲಾ ವರ್ಚಸ್ಸನ್ನು ಪಡೆದುಕೊಂಡಿರುವ ಈ ಮಂಜು ರವರಿಗೆ ಶಹಭಾಷ್ ಎಂದಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ?? ಇಂದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂಜುರವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಹಾಸನ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಬಿಜೆಪಿ ಪಕ್ಷ ಸೇರಿದ ಎ ಮಂಜುರವರು ಬಾರಿ ಮೆರವಣಿಗೆಯ ಮೂಲಕ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಮೆರವಣಿಗೆಯನ್ನು ಕಂಡ ರಾಜ್ಯಾಧ್ಯಕ್ಷ ಯಡಿಯೂರಪ್ಪ ನವರು ಶಾಕ್ ಆಗಿದ್ದಾರೆ. ಯಾವುದೇ ಆಮಿಷಕ್ಕೆ ಒಳಗಾಗದೆ ಲಕ್ಷಾಂತರ ಜನರು ಮೆರವಣಿಗೆಯಲ್ಲಿ ಕೇವಲ ಮಂಜು ಹಾಗು ಮೋದಿ ರವರನ್ನು ಬೆಂಬಲಿಸುವ ಉದ್ದೇಶದಿಂದ ಸೇರಿದ್ದರು ಎನ್ನಲಾಗಿದೆ.

ಕಳೆದ ಕರ್ನಾಟಕದ ಇತಿಹಾಸದಲ್ಲಿ ಯಾವುದೇ ಪಕ್ಷದ ನಾಯಕನ ನಾಮಪತ್ರ ಸಲ್ಲಿಕೆಯ ಮೆರವಣಿಗೆಗೆ ಇಷ್ಟು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿರಲಿಲ್ಲ ಅಷ್ಟೇ ಯಾಕೆ ಮಾಜಿ ಪ್ರಧಾನಿಗಳು ಎನಿಸಿಕೊಂಡಿರುವ ದೇವೇಗೌಡರ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮಕ್ಕೂ ಸಹ ಇದುವರೆಗೂ ಹಾಸನದಲ್ಲಿ ಇಷ್ಟು ಜನ ಸೇರಿರಲಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಇದರ ಸಂಪೂರ್ಣ ಚಿತ್ರಣವನ್ನು ಕಂಡ ಯಡಿಯೂರಪ್ಪನವರು ಎ ಮಂಜುರವರಿಗೆ ಶಹಭಾಷ್  ಎಂದಿದ್ದು ದೇವೇಗೌಡರ ಭದ್ರಕೋಟೆಯನ್ನು ಛಿದ್ರ ಛಿದ್ರ ಮಾಡುವ ನಾಯಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಮತ್ತಷ್ಟು ಬಲ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಹಾಸನ ಜಿಲ್ಲೆಯು ಕೇಸರಿಮಯವಾಗುವುದು ಬಹುತೇಕ ಖಚಿತ ವಾದಂತೆ ಕಾಣುತ್ತಿದೆ. ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.