ಮೋದಿ ಕೆಸಿಆರ್ ಜುಗಲ್ಬಂದಿ- ಸೋಲನ್ನು ಒಪ್ಪಿಕೊಂಡು ಮಂಡಿಯೂರಿದ ಕುತಂತ್ರಿ ನಾಯ್ಡು

ಕೆಲವೇ ಕೆಲವು ದಿನಗಳ ಹಿಂದೆ ನರೇಂದ್ರ ಮೋದಿ ರವರ ಮಿತ್ರನಾಗಿ ಗುರುತಿಸಿಕೊಂಡು ತದನಂತರ ತನ್ನ ಆಡಳಿತ ಅವಧಿಯಲ್ಲಿ ಆಂಧ್ರ ಪ್ರದೇಶಕ್ಕೆ ಯಾವುದೇ ಅಭಿವೃದ್ಧಿಯನ್ನು ಮಾಡದೆ, ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಿರುವ ಕಾರಣ ಏನು ಕೇಳಿದರೂ ಕೊಡುತ್ತಾರೆ ಎಂಬಂತೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ಕೇಳಿ ನರೇಂದ್ರ ಮೋದಿ ಚೀಮಾರಿ ಹಾಕಿದ ನಂತರ ಅವರ ವಿರುದ್ಧ ತೊಡೆ ತಟ್ಟುವ ಪ್ರಯತ್ನ ಮಾಡಿದ್ದ ಕುತಂತ್ರಿ ನಾಯ್ಡು ರವರಿಗೆ ಈಗ ಸೋಲಿನ ಭಯ ಕಾಡುತ್ತಿದೆ.

ನರೇಂದ್ರ ಮೋದಿ ರವರ ವಿರುದ್ಧ ಕತ್ತಿ ಮಸೆಯಲು ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ದಲ್ಲಿ ತೊಡಗಿಕೊಂಡಿದ್ದ ಚಂದ್ರಬಾಬು ನಾಯ್ಡು ರವರನ್ನು ಅದೇ ವಿರೋಧ ಪಕ್ಷಗಳು ಸೇರಿಕೊಂಡು ಹೊರಹಾಕಿದ್ದರು. ಕಾಂಗ್ರೆಸ್ ಪಕ್ಷವೂ ಸಹ ಚಂದ್ರಬಾಬು ನಾಯ್ಡು ರವರ ಜೊತೆ ಯಾವುದೇ ಮೈತ್ರಿಯನ್ನು ಮಾಡಿಕೊಳ್ಳದೆ ಪ್ರತ್ಯೇಕವಾಗಿ ಕಣಕ್ಕಿಳಿಯಲು ನಿರ್ಧಾರ ಈಗಾಗಲೇ ಮಾಡಿಯಾಗಿದೆ. ಇದರಿಂದ ತೆಲುಗು ದೇಶಂ ಪಾರ್ಟಿ ಪಕ್ಷವು ತೆಲಂಗಾಣದಲ್ಲಿ ಸಂಪೂರ್ಣ ಅಂತ್ಯವನ್ನು ಕಾಣುವುದು ಖಚಿತವಾಗಿದೆ, ಚಂದ್ರಬಾಬು ನಾಯ್ಡುರವರು ಮೋದಿ – ಕೆಸಿಆರ್ ಜುಗಲ್ಬಂದಿ ಮುಂದೆ ಮಂಡಿಯೂರಿ ಸೋಲನ್ನು ಒಪ್ಪಿಕೊಂಡಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲಂಗಾಣ ಪ್ರಾಂತ್ಯದಲ್ಲಿ ತೆಲುಗು ದೇಶಂ ಪಾರ್ಟಿ ಅಷ್ಟಾಗಿ ಸದ್ದು ಮಾಡುತ್ತಿಲ್ಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯೂ ಸಹ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರು ಬೆರಳೆಣಿಕೆಯ ಸೀಟುಗಳನ್ನು ಮಾತ್ರ ಗೆದ್ದುಕೊಂಡಿತ್ತು. ಕೆಸಿಆರ್ ರವರ ಅಲೆಗೆ ಸಂಪೂರ್ಣ ತೆಲಂಗಾಣದಲ್ಲಿ ನಾಯ್ಡು ಅವರ ತೆಲುಗು ದೇಶಂ ಪಾರ್ಟಿ ಕೊಚ್ಚಿಕೊಂಡು ಹೋಗಿತ್ತು. ಇನ್ನು ಇದೀಗ ಮುಂದಿನ ಲೋಕಸಭಾ ಚುನಾವಣೆಗೆ ಮೋದಿ ಹಾಗೂ ಕೆಸಿಆರ್ ರವರು ಸಂಭಾವ್ಯ ಮೈತ್ರಿ ಮಾಡಿಕೊಂಡಿರುವ ಕಾರಣ ನಾಯ್ಡು ರವರ ಪಕ್ಷ ತೆಲಂಗಾಣದಲ್ಲಿ ಸಂಪೂರ್ಣ ಅಂತ್ಯವಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು.

ಇದೀಗ ಇದನ್ನು ಖಚಿತ ಪಡಿಸಿರುವ ಚಂದ್ರಬಾಬು ನಾಯ್ಡುರವರ 1982 ನಂತರ ಇದೇ ಮೊಟ್ಟಮೊದಲ ಬಾರಿಗೆ ತೆಲಂಗಾಣ ಪ್ರಾಂತ್ಯದಲ್ಲಿ ತೆಲುಗು ದೇಶಂ ಪಾರ್ಟಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸದೆ ಸೋಲನ್ನು ಒಪ್ಪಿಕೊಂಡು ಹಿಂದೆ ಸರಿದಿದೆ. ಕಾಂಗ್ರೆಸ್ ಪಕ್ಷವೂ ಸಹ ಬೆಂಬಲ ನೀಡದ ಕಾರಣ ಬೇರೆ ವಿಧಿಯಿಲ್ಲದೆ ಸೋಲನ್ನು ಒಪ್ಪಿಕೊಂಡು ಮೋದಿ ಹಾಗೂ ಕೆಸಿಆರ್ ಮುಂದೆ ಮಂಡಿಯೂರಿರುವ ಚಂದ್ರಬಾಬು ನಾಯ್ಡು ರವರಿಗೆ ತಮ್ಮ ಕುತಂತ್ರ ನೀತಿಗಳೇ ತಮ್ಮ ರಾಜಕೀಯ ಭವಿಷ್ಯವನ್ನು ಮುಗಿಸುತ್ತೀವೆ ಎಂದು ಅರಿವಾಗಿರಬೇಕು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Post Author: Ravi Yadav