ಮೋದಿ ಗೆಲುವು ಪ್ರಾರಂಭ- ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳು

ಮುಂದಿನ ಲೋಕಸಭಾ ಚುನಾವಣೆ ಕ್ಷಣಕ್ಕೊಂದು ಕುತೂಹಲವನ್ನು ಕೆರಳಿಸುತ್ತಿರುವ ಸಮಯದಲ್ಲಿ ನರೇಂದ್ರ ಮೋದಿ ಅವರ ಅಲೆ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಎಲ್ಲಾ ಪಕ್ಷಗಳು ಒಗ್ಗೂಡಿ ದರು ಸಹ ನರೇಂದ್ರ ಮೋದಿರವರ ವರ್ಚಸ್ಸಿಗೆ ಯಾವುದೇ ಧಕ್ಕೆ ಬಂದಂತೆ ಕಾಣುತ್ತಿಲ್ಲ, ಇದರಿಂದ ಮತ್ತಷ್ಟು ಲಾಭವನ್ನು ಬಿಜೆಪಿ ಪಕ್ಷ ಪಡೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಮೈತ್ರಿ ಮಾಡಿಕೊಂಡ ತಕ್ಷಣ ಗೆಲ್ಲುತ್ತೇವೆ ಎಂದು ಹುಮ್ಮಸ್ಸನ್ನು ಇಟ್ಟುಕೊಂಡಿದ್ದ ಮಹಾಘಟಬಂಧನ್ ನ ಪಕ್ಷಗಳಿಗೆ ಒಂದಲ್ಲ ಒಂದು ತಕರಾರುಗಳು ಎದುರಾಗುತ್ತವೆ.

ಈ ಎಲ್ಲಾ ವಿದ್ಯಮಾನಗಳ ನಡುವೆ ಚುನಾವಣೆಗೂ ಮುನ್ನವೇ ಬಿಜೆಪಿ ಪಕ್ಷದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಕಳೆದ ಐದು ವರ್ಷಗಳಲ್ಲಿ ಮಹತ್ವದ ಸಾಧನೆ ಮಾಡಿರುವ ಬಿಜೆಪಿ ಪಕ್ಷವು ಈಗಾಗಲೇ ಹಲವಾರು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಾ ಕಾಂಗ್ರೆಸ್ ಮುಕ್ತ ಭಾರತಕ್ಕೆ ನಾಂದಿ ಹಾಡಿದೆ. ಇದೀಗ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ತಮ್ಮ ಗೆಲುವಿನ ನಾಗಾಲೋಟವನ್ನು ನರೇಂದ್ರ ಮೋದಿರವರು ಮುಂದುವರಿಸುವ ಎಲ್ಲಾ ಸೂಚನೆಗಳು ಈಗಾಗಲೇ ಸಿಕ್ಕಿವೆ ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಅರುಣಾಚಲ ಪ್ರದೇಶದಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಪಕ್ಷ ಗೆದ್ದು ಬೀಗಿದೆ.

ಹೌದು ಅರುಣಾಚಲ ಪ್ರದೇಶದಲ್ಲಿ ನಿಗದಿಯ ಪ್ರಕಾರ ಏಪ್ರಿಲ್ 11ರಂದು ಲೋಕಸಭಾ ಹಾಗೂ ವಿಧಾನಸಭಾ ಮತದಾನ ನಡೆಯ ಬೇಕಿತ್ತು. ಈಗಾಗಲೇ ನಾಮಪತ್ರ ಸಲ್ಲಿಸುವ ದಿನಾಂಕ ಮುಗಿದಿದ್ದು 2 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಹೊರತುಪಡಿಸಿ ಉಳಿದ ಯಾವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ. ಈ ಮೂಲಕ ಬಿಜೆಪಿ ಅಭ್ಯರ್ಥಿಗಳು 2 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಔಲೋ ಪೂರ್ವ ಹಾಗೂ ಯಾಚುಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಯಾತ್ರೆ ಆರಂಭವಾಗಿದೆ.

ಇಷ್ಟು ವರ್ಷಗಳ ಕಾಲ ಅಭಿವೃದ್ಧಿಯನ್ನು ಕಾಣದ ಅರುಣಾಚಲ ಪ್ರದೇಶಕ್ಕೆ ನರೇಂದ್ರ ಮೋದಿರವರು ಭೇಟಿ ನೀಡಿ ಸಾವಿರಾರು ಕೋಟಿ ಯೋಜನೆಗಳನ್ನು ಜಾರಿಗೊಳಿಸಿ ಚೀನಾದ ವಿರೋದವಿದ್ದರೂ ಸಹ ಹಲವಾರು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಅನುಮೋದನೆ ನೀಡಿ ಅರುಣಾಚಲ ಪ್ರದೇಶದ ಜನರ ಮನ ಗೆದ್ದಿದ್ದರು. ಈ ಮೂಲಕ ಅರುಣಾಚಲ ಪ್ರದೇಶದಲ್ಲಿ ನರೇಂದ್ರ ಮೋದಿ ಅವರ ಅಲೆ ಎಷ್ಟಿದೆ ಎಂಬುದು ಸಾಬೀತಾಗಿದೆ. ಒಟ್ಟಿನಲ್ಲಿ ಚುನಾವಣೆಗೂ ಮುನ್ನವೇ 2 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಬೀಗಿರುವ ಬಿಜೆಪಿ ಮುಂದೆ ಯಾವ ಲೆಕ್ಕಾಚಾರದಲ್ಲಿ ಗೆಲುವು ದಾಖಲಿಸಿದೆ ಎಂಬುದನ್ನು ಕಾದುನೋಡಬೇಕಿದೆ.

Post Author: Ravi Yadav