ಒಂದೆಡೆ ಗೆದ್ದು ಬೀಗಿದ ಯಡಿಯೂರಪ್ಪ- ಮತ್ತೊಂದೆಡೆ ಸಿಕ್ಕಿಬಿದ್ದ ಡಿಕೆಶಿ

ಒಂದೆಡೆ ಗೆದ್ದು ಬೀಗಿದ ಯಡಿಯೂರಪ್ಪ- ಮತ್ತೊಂದೆಡೆ ಸಿಕ್ಕಿಬಿದ್ದ ಡಿಕೆಶಿ

ಕಳೆದ 48 ಗಂಟೆಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಯಡಿಯೂರಪ್ಪನವರ ಡೈರಿ ಪ್ರಕರಣದಲ್ಲಿ ಬಿ ಎಸ್ ವೈ ರವರು ಊಹಿಸಿದಂತೆ ಗೆದ್ದು ಬೀಗಿದ್ದಾರೆ. ಈಗಾಗಲೇ ಹಲವು ಬಾರಿ ಬಿಎಸ್ವೈ ರವರ ವಿರುದ್ಧ ಆರೋಪ ಮಾಡಿ ಸೋಲನ್ನು ಕಂಡಿರುವ ಸರ್ಕಾರಗಳು ಮತ್ತೊಮ್ಮೆ ಬಿಎಸ್ವೈ ಅವರ ಮುಂದೆ ಮಂಡಿ ಊರಿದ್ದಾರೆ. ಸಹಿ ಇದ್ದ ಮಾತ್ರಕ್ಕೆ ಜೆರಾಕ್ಸ್ ಕಾಪಿಯನ್ನು ಯಡಿಯೂರಪ್ಪನವರ ಡೈರಿ ಎಂದು ಬಿಡುಗಡೆ ಮಾಡಿ ಕಾಂಗ್ರೆಸ್ ಪಕ್ಷವು ಭಾರಿ ಮುಖಭಂಗ ಅನುಭವಿಸುತ್ತಿದೆ.

ಐಟಿ ಇಲಾಖೆ ಯು ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಪಕ್ಷಕ್ಕೆ ಕಪ್ಪು ಮಸಿ ಬಳಿಯಬೇಕು ಎಂಬುದಕ್ಕಾಗಿ 1800 ಕೋಟಿ ಕಪ್ಪು ನೀಡಿದ ಡೈರಿ ಆರೋಪಕ್ಕೆ ಸೊಪ್ಪು ಹಾಕಿಲ್ಲ. ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ ಡೈರಿ ನಕಲಿ ಎಂದು ಐಟಿ ಇಲಾಖೆಯ ಡಿಜಿ ಬಾಲಕೃಷ್ಣನ್ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಮತ್ತೊಂದೆಡೆ ತಮ್ಮದೇ ಪಕ್ಷದ ಹಿರಿಯ ನಾಯಕ ಡಿಕೆ ಶಿವಕುಮಾರ್ ರವರು ಸಿಕ್ಕಿಬಿದ್ದಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರ ಉಂಟುಮಾಡಿದೆ.

ಕಳೆದ ಕೆಲವು ದಿನಗಳ ಹಿಂದೆ ದಾಳಿ ನಡೆದಾಗ ಡಿಕೆ ಶಿವಕುಮಾರ್ ಅವರ ತಾಯಿ ಹಾಗೂ ಸ್ನೇಹಿತರ ಹೆಸರಲ್ಲಿ ಇಟ್ಟಿದ್ದ 75 ಕೋಟಿ ಆಸ್ತಿಯನ್ನು ಐಟಿ ಇಲಾಖೆಯು ಜಪ್ತಿ ಮಾಡಿರುವುದನ್ನು ಖಚಿತ ಪಡಿಸಿರುವ ಐಟಿ ಇಲಾಖೆಯ ಡಿ ಜೆ ಬಾಲಕೃಷ್ಣರವರು, ಡಿಕೆ ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿದಾಗ ಕೆಲ ದಾಖಲಾತಿಗಳು ಲಭ್ಯವಾಗಿದ್ದವು ದಾಖಲೆಗಳನ್ನು ತೋರಿಸಿ ಡಿಕೆ ಶಿವಕುಮಾರ್ ಅವರು ತನಿಖೆಯಿಂದ ಬಚಾವ್ ಆಗಲು ಪ್ರಯತ್ನ ಪಟ್ಟಿದ್ದರು.

ಆದರೆ ನಾವು ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡದ ಹಿನ್ನಲೆಯಲ್ಲಿ ನಮ್ಮ ಸಿಬ್ಬಂದಿ ಯಾವ ರಾಜಕೀಯ ನಾಯಕರಿಗೂ ಸಹಾಯ ಮಾಡದೆ ದಾಳಿಯ ವೇಳೆ ಯಲ್ಲಿ ಲಭ್ಯವಾದ ಎಲ್ಲಾ ದಾಖಲೆಗಳನ್ನು ಸ್ಪಷ್ಟವಾಗಿ ಪರಿಶೀಲಿಸಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಕಾನೂನು ಪ್ರಕಾರವಾಗಿ ಯಾವ ಕ್ರಮ ಕೈಗೊಳ್ಳಬೇಕು ಅದನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಒಂದೆಡೆ ಡೈರಿ ಬಿಡುಗಡೆಯ ಮೂಲಕ ಯಡಿಯೂರಪ್ಪನವರ ವರ್ಚಸ್ಸಿಗೆ ಧಕ್ಕೆ ತರಬೇಕು ಎಂದು ಪ್ರಯತ್ನ ಪಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಭಾರಿ ಹೊಡೆತ ಬಿದ್ದಿದೆ.