ಭೂತದ ಬಾಯಲ್ಲಿ ಭಗವದ್ಗೀತೆ, ಇದಲ್ಲವೇ ಅಚ್ಚೆ ದಿನ್??

ಪಶ್ಚಿಮ ಬಂಗಾಳದ ಸರ್ವಾಧಿಕಾರಿ ಯಾಗಿರುವ ಮಮತಾ ಬ್ಯಾನರ್ಜಿ ಅವರು ಮೊದಲಿನಿಂದಲೂ ಹಲವಾರು ವಿಭಾಗಗಳನ್ನು ಸೃಷ್ಟಿಸಿದ್ದಾರೆ, ಅದರಲ್ಲಿಯೂ ಧರ್ಮದ ವಿಚಾರದಲ್ಲಿ ಇನ್ನಿಲ್ಲದ ವಿವಾದಗಳನ್ನು ಸೃಷ್ಟಿಸುವ ಕೆಲಸವನ್ನು ಹಲವಾರು ಬಾರಿ ಈಗಾಗಲೇ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತವೆ. ಪಕ್ಷಿಮ ಬಂಗಾಳವನ್ನು ಬಾಂಗ್ಲಾ ಎಂದು ಮರುನಾಮಕರಣ ಮಾಡಲು ಹೊರಟಿರುವ ಮಮತಾ ಬ್ಯಾನರ್ಜಿ ರವರು ಅಲ್ಪಸಂಖ್ಯಾತರ ಓಲೈಕೆಗಾಗಿ ಈ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿರುತ್ತವೆ.

ಇನ್ನು ಬಿಜೆಪಿ ಪಕ್ಷ ಆರೋಪಿಸಿದಂತೆ ಪಕ್ಷಿಮ ಬಂಗಾಳ ದಲ್ಲಿ ಹಿಂದೂ ಧರ್ಮೀಯರ ಮೇಲೆ ಹಲವಾರು ವರ್ಷಗಳಿಂದ ದಬ್ಬಾಳಿಕೆ ನಡೆಯುತ್ತಾ ಬಂದಿದೆ, ಮೊದಲಿನಿಂದಲೂ ಹಿಂದೂ ಧರ್ಮದ ವಿರೋಧಿ ಎಂದು ಗುರುತಿಸಿಕೊಂಡಿರುವ ಮಮತಾ ಬ್ಯಾನರ್ಜಿ ರವರ ಎಡಪಂಥೀಯರು ಎಂದು ಹಲವಾರು ಆರೋಪಗಳು ಕೇಳಿ ಬರುತ್ತಿರುತ್ತವೆ. ಇಂತಹ ಸಮಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಮತಾ ಬ್ಯಾನರ್ಜಿ ರವರ ಹೇಳಿಕೆಗಳನ್ನು ಗಮನಿಸಿದರೆ ಕಳೆದ ಬಾರಿಯ ಚುನಾವಣೆಯ ಹೇಳಿಕೆಗಳಿಗೂ ಚುನಾವಣೆಯ ಹೇಳಿಕೆಗಳಿಗೂ ಭಾರಿ ವ್ಯತ್ಯಾಸ ವಿದ್ದಂತೆ ಕಾಣ ಸಿಗುತ್ತದೆ ಇದನ್ನು ಕಂಡ ಸಾಮಾಜಿಕ ಜಾಲತಾಣದ ನೆಟ್ಟಿಗರು ಇದಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸದಾ ಅಲ್ಪಸಂಖ್ಯಾತರ ಪರವಾಗಿ ನಿಲ್ಲುವ ಮಮತಾ ಬ್ಯಾನರ್ಜಿ ಅವರು ಚುನಾವಣೆ ಹತ್ತಿರ ಬರುತ್ತಿದ್ದಂತೆ ನೇರವಾಗಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ರವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಇಷ್ಟು ದಿವಸ ತಿಲಕ ಇಟ್ಟರೆ ತಪ್ಪು ಎನ್ನುತ್ತಿದ್ದ ಮಮತಾ ಬ್ಯಾನರ್ಜಿ ಅವರು ಇಂದು ಹಿಂದು ಮಂತ್ರಗಳನ್ನು ಸಂಸ್ಕೃತದಲ್ಲಿ ಹೇಳುವ ಸ್ಪರ್ಧೆ ಮಾಡೋಣ ಅದರಲ್ಲಿ ನನ್ನ ವಿರುದ್ಧ ನರೇಂದ್ರ ಮೋದಿ ಅಥವಾ ಅಮಿತ್ ಶಾ ರವರು ಸ್ಪರ್ಧಿಸಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಮಂತ್ರಗಳನ್ನು ಹೇಳುವವರನ್ನು ಕಂಡರೆ ದೂರವಿರುತ್ತಿದ್ದ ಮಮತಾ ರವರು ಇಂದು ತಾವೇ ಮಂತ್ರ ಹೇಳುತ್ತೇವೆ ಎಂದು ಮುಂದೆ ಬಂದಿರುವುದರಿಂದ ನೆಟ್ಟಿಗರು ಈ ರೀತಿಯ ಟ್ರೋಲ್ ಗಳನ್ನು ಹಾಕುತ್ತಾ ಮಮತಾ ಬ್ಯಾನರ್ಜಿ ರವರನ್ನು ಚುನಾವಣಾ ಹಿಂದು ಎಂದು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಇದಲ್ಲವೇ ಅಚ್ಚೆ ಲಿಂಗ್ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಮಮತಾ ಬ್ಯಾನರ್ಜಿ ರವರ ಇಂದಿನ ಪ್ರಣಾಳಿಕೆಯಲ್ಲಿ ದೇವಸ್ಥಾನಗಳು ಹಾಗೂ ಸಂಸ್ಕೃತ ಮಂತ್ರಗಳು ಕೇಳಿ ಬರುತ್ತಿರುವುದು ಇದೇ ಮೊಟ್ಟ ಮೊದಲು.

Post Author: Ravi Yadav