ದೇವೇಗೌಡರ ಭದ್ರಕೋಟೆಯನ್ನು ಛಿದ್ರ ಛಿದ್ರ ಮಾಡಲು ಇದ್ದಾನೆ ಸಮರ್ಥ ನಾಯಕ, ಯಾಕೆ ಸುಮ್ಮನೆ ಕುಳಿತಿದೆ ಬಿಜೆಪಿ ಹೈಕಮಾಂಡ್??

ದೇವೇಗೌಡರ ಭದ್ರಕೋಟೆಯನ್ನು ಛಿದ್ರ ಛಿದ್ರ ಮಾಡಲು ಇದ್ದಾನೆ ಸಮರ್ಥ ನಾಯಕ, ಯಾಕೆ ಸುಮ್ಮನೆ ಕುಳಿತಿದೆ ಬಿಜೆಪಿ ಹೈಕಮಾಂಡ್??

ಈ ಬಾರಿಯ ಲೋಕಸಭಾ ಚುನಾವಣೆ ಇನ್ನಿಲ್ಲದ ಕುತೂಹಲ ಕೆರಳಿಸುತ್ತಾ ಮುಂದೆ ಸಾಗುತ್ತಿದೆ. ದೇಶದಲ್ಲಿ ಇರುವ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ಎಲ್ಲಾ ಪಕ್ಷಗಳಿಗೂ ಅರ್ಥವಾಗಿದೆ. ಆದ್ದರಿಂದ ಪ್ರತಿಯೊಂದು ಪಕ್ಷಗಳು ಎಲ್ಲ ಕ್ಷೇತ್ರಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನರೇಂದ್ರ ಮೋದಿಯವರ ಅಲೆಯನ್ನು ತಡೆಯಲು ಪ್ರಯತ್ನ ಮಾಡು ತ್ತಿದ್ದಾರೆ ಆದರೆ ಮತ್ತೊಂದೆಡೆ ವಿರೋಧ ಪಕ್ಷಗಳನ್ನು ನರೇಂದ್ರ ಮೋದಿರವರು ಕಟ್ಟಿಹಾಕುವಲ್ಲಿ ಪ್ರತಿಬಾರಿಯೂ ಯಶಸ್ವಿಯಾಗುತ್ತಾ ಮುನ್ನುಗ್ಗುತ್ತಿದ್ದಾರೆ.

ಇಷ್ಟೆಲ್ಲ ಪ್ರಮುಖ ಪಾತ್ರವನ್ನು ವಹಿಸಿಕೊಂಡಿರುವ ಲೋಕಸಭಾ ಚುನಾವಣೆಗೆ ಕರ್ನಾಟಕ ಬಿಜೆಪಿ ಪಕ್ಷವು ಮಾತ್ರ ಬಹಳ ಸುಲಭವಾಗಿ ತೆಗೆದುಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಲ್ಲಿ ಪಕ್ಷಾಂತರ ಗೊಂಡಿದ್ದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ತದನಂತರ ಚುನಾವಣಾ ಸಮಯದಲ್ಲಿ ಅಭ್ಯರ್ಥಿ ಹಿಂದೆ ಸರಿದು ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗ ಉಂಟಾಗಿತ್ತು, ಇಷ್ಟಾದರೂ ಸಹ ಯಾಕೋ ಬಿಜೆಪಿ ಪಕ್ಷದ ರಾಜ್ಯ ನಾಯಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ.

ಈ ಬಾರಿಯೂ ಸಹ ಹಲವಾರು ಪಕ್ಷಾಂತರ ಅಭ್ಯರ್ಥಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಮಣೆ ಹಾಕಲು ಹೊರಟಿದೆ ಅದರಲ್ಲಿ ಪ್ರಮುಖವಾಗಿ ಹಾಸನ ಜಿಲ್ಲೆಯಲ್ಲಿ ಮಂಜು ಅವರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ ಆದರೆ ಪ್ರತಿಬಾರಿಯೂ ರಾಜೀನಾಮೆಯನ್ನು ಮುಂದಿಡುತ್ತಿರುವ ಎ ಮಂಜುರವರು ಯಾವ ನಿರ್ಧಾರವನ್ನು ಸಹ ದಿಟ್ಟವಾಗಿ ತೆಗೆದುಕೊಳ್ಳುತ್ತಿಲ್ಲ ಇಷ್ಟೆಲ್ಲಾ ಆದರೂ ಸಹ ಹಾಸನ ಜಿಲ್ಲೆಯಲ್ಲಿ ಮೊದಲಿನಿಂದಲೂ ದೇವೇಗೌಡರ ಕುಟುಂಬದ ವಿರುದ್ಧ ತೊಡೆ ತಟ್ಟಿರುವ ಪ್ರೀತಂ ಗೌಡ ರವರ ವರ್ಚಸ್ಸು ಬಿಜೆಪಿ ನಾಯಕರಿಗೆ ಯಾಕೆ ಕಾಣಿಸುತ್ತಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಒಂದು ಕಾಲದಲ್ಲಿ ಬಿಜೆಪಿ ಪಕ್ಷದ ಅಸ್ತಿತ್ವವೇ ಇಲ್ಲದ ಹಾಸನ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಗೆದ್ದು ಬಂದ ಪ್ರೀತಮ್ ಗೌಡ ರವರು ಇತ್ತೀಚೆಗೆ ಹಲವಾರು ಬಾರಿ ಕುಮಾರಸ್ವಾಮಿ ರವರ ಕುಟುಂಬಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದರು. ಪ್ರತಿಬಾರಿಯೂ ಹಾಸನದ ಅಭಿವೃದ್ಧಿಗೆ ಕ್ಷಮಿಸುವ ಯುವ ನಾಯಕನಿಗೆ ಕೇಂದ್ರ ಸಚಿವ ಗಡ್ಕರಿ ರವರು ಸಹ ಬಹಿರಂಗವಾಗಿ ಧನ್ಯವಾದಗಳನ್ನು ತಿಳಿಸಿ ಹಾಸನದ ಅಭಿವೃದ್ಧಿಗೆ ಕೈ ಜೋಡಿಸುತ್ತಿರುವ ಕಾರಣಕ್ಕಾಗಿ ಧನ್ಯವಾದಗಳನ್ನು ಹೇಳಿದರು. ಇಷ್ಟೆಲ್ಲ ವರ್ಚಸ್ಸನ್ನು ಹೊಂದಿರುವ ಪ್ರೀತಮ್ ಗೌಡ ರವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದಲ್ಲಿ ಹಾಸನದಲ್ಲಿ ಕೇಸರಿ ಬಾವುಟ ಹಾರುವುದು ಬಹುತೇಕ ಖಚಿತವಾಗುತ್ತದೆ. ನಿಮಗೆ ಈ ನಿರ್ಧಾರಕ್ಕೆ ಬೆಂಬಲ ವಿದ್ದಲ್ಲಿ ದಯವಿಟ್ಟು ಶೇರ್ ಮಾಡಿ ಎಲ್ಲರಿಗೂ ತಲುಪಿಸಿ.