ಸ್ಪರ್ದಿಸಲ್ಲ ಆದರೆ ಮೋದಿ ಕೈ ಬಿಡಲ್ಲ… ಮತ್ತೊಮ್ಮೆ ಮೋದಿ ಎಂದ ಕ್ರಿಕೆಟಿಗ

ಸ್ಪರ್ದಿಸಲ್ಲ ಆದರೆ ಮೋದಿ ಕೈ ಬಿಡಲ್ಲ… ಮತ್ತೊಮ್ಮೆ ಮೋದಿ ಎಂದ ಕ್ರಿಕೆಟಿಗ

ಮುಂದಿನ ಲೋಕಸಭಾ ಚುನಾವಣೆ ಬರುತ್ತಿದ್ದಂತೆ ಪ್ರತಿಯೊಂದು ಪಕ್ಷಗಳು ತನ್ನ ಅಭ್ಯರ್ಥಿ ಆಯ್ಕೆಯಲ್ಲಿ ತೊಡಗಿಕೊಂಡಿವೆ. ಇನ್ನು ಬಿಜೆಪಿ ಪಕ್ಷವು ತಾರಾ ಪ್ರಚಾರಕರ ಅಡಿಯಲ್ಲಿ ಹಲವಾರು ಖ್ಯಾತ ಸೆಲೆಬ್ರಿಟಿಗಳನ್ನು ಭೇಟಿ ಮಾಡಿ ಪಕ್ಷದ ಸಾಧನೆಗಳನ್ನು ವಿವರಿಸಿ ನರೇಂದ್ರ ಮೋದಿ ಅವರ ಪರವಾಗಿ ಪ್ರಚಾರದಲ್ಲಿ ತೊಡಗಲು ಮತ್ತು ಕೆಲವು ನಾಯಕರನ್ನು ಚುನಾವಣೆಯಿಂದ ಸ್ಪರ್ಧಿಸುವಂತೆ ಕೋರಿಕೊಂಡಿದ್ದರು. ಅಮಿತ್ ಶಾ ರವರು ಸ್ವತಹ ಈ ಅಭಿಯಾನಕ್ಕೆ ಚಾಲನೆ ನೀಡಿ ಹಲವಾರು ಖ್ಯಾತನಾಮರನ್ನು ಭೇಟಿಯಾಗಿ ಪಕ್ಷದ ಸಾಧನೆಗಳನ್ನು ವಿವರಿಸಿದರು.

ಹರಿಯಾಣ ರಾಜ್ಯದಿಂದ ಭಾರತದ ಕ್ರಿಕೆಟ್ ತಂಡವನ್ನು ಹಲವಾರು ವರ್ಷಗಳ ಕಾಲ ಪ್ರತಿನಿಧಿಸಿ, ಎದುರಾಳಿ ತಂಡಗಳ ಮನಸಲ್ಲಿ ಭಯ ಹುಟ್ಟಿಸುತ್ತಿದ್ದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹವಾಗ್ ರವರು ಸಹ ಬಿಜೆಪಿ ಪಕ್ಷದ ಪರ ಧ್ವನಿ ಎತ್ತಿದ್ದರು. ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿ ರವರ ಹಲವಾರು ಕಾರ್ಯಯೋಜನೆಗಳಿಗೆ ಶಹಬ್ಬಾಸ್ ಎಂದಿದ್ದ ವೀರೇಂದ್ರ ಸೆಹ್ವಾಗ್ ಅವರು ಹರಿಯಾಣ ರಾಜ್ಯದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು.

ಈಗಾಗಲೇ ಹಲವಾರು ಸಾಮಾಜಿಕ ಸೇವೆಗಳಿಂದ ಭಾರಿ ಯಶಸ್ಸು ಪಡೆದುಕೊಂಡಿರುವ ವೀರೇಂದ್ರ ಸೆಹ್ವಾಗ್ ಅವರು ಹರಿಯಾಣ ರಾಜ್ಯದಲ್ಲಿ ತನ್ನದೇ ಆದ ವರ್ಚಸ್ಸನ್ನು ಬೆಳೆಸಿಕೊಂಡು ಬಿಜೆಪಿ ಪಕ್ಷಕ್ಕೆ ಬೆನ್ನೆಲುಬಾಗಿ ನಿಲ್ಲಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು ಆದರೆ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಅಭಿಮಾನಿಗಳಿಗೆ ಭಾರಿ ನಿರಾಶೆಯನ್ನುಂಟು ಮಾಡಿದ್ದಾರೆ. ಆದರೂ ಸಹ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವೀರೇಂದ್ರ ಸೆಹ್ವಾಗ್ ಅವರು ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು ಆದರೆ ಕೌಟುಂಬಿಕ  ಕಾರಣಗಳಿಂದವೀರೇಂದ್ರ ಸೇವಾಗ್ ರವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ, ಸ್ಪರ್ಧೆಗೂ ಅಥವಾ ಬೆಂಬಲಕ್ಕೂಯಾವುದೇ ಸಂಬಂಧವಿಲ್ಲ ನಾನು ಸ್ಪರ್ಧಿಸದೇ ಇದ್ದರೂ ಸಹ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಣೆ ಮಾಡಿದ್ದಾರೆ ಹಾಗೂ ಈ ಮೂಲಕ ಬಿಜೆಪಿ ತಾರಾ ಪ್ರಚಾರಕ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ರವರು ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.