ಖರ್ಗೆ ವಿರುದ್ಧ ರೊಚ್ಚಿಗೆದ್ದ ಮುಸ್ಲಿಂ ಸಮುದಾಯ, ಉಮೇಶ ಜಾಧವ್ ಗೆ ಬಂಪರ್- ಖರ್ಗೆ ರವರಿಗೆ ಪಲಾಯನ ಒಂದೇ ದಾರಿ !!

ಖರ್ಗೆ ವಿರುದ್ಧ ರೊಚ್ಚಿಗೆದ್ದ ಮುಸ್ಲಿಂ ಸಮುದಾಯ, ಉಮೇಶ ಜಾಧವ್ ಗೆ ಬಂಪರ್- ಖರ್ಗೆ ರವರಿಗೆ ಪಲಾಯನ ಒಂದೇ ದಾರಿ !!

ಮಲ್ಲಿಕಾರ್ಜುನ ಖರ್ಗೆ ಅವರು ಇಲ್ಲಿಯವರೆಗೂ ರಾಜಕಾರಣದಲ್ಲಿ ಸೋಲನ್ನು ಕಂಡಿಲ್ಲ. ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದು ಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಬರೋಬ್ಬರಿ ಹತ್ತಕ್ಕೂ ಹೆಚ್ಚು ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿ ದ್ದಾರೆ. ತಮ್ಮ ಭದ್ರಕೋಟೆ ಎನಿಸಿಕೊಂಡಿರುವ ಕಲಬುರ್ಗಿ ಕ್ಷೇತ್ರದಿಂದ ಪ್ರತಿ ಬಾರಿ ಸ್ಪರ್ಧಿಸಿದಾಗಲೂ ಎದುರಾಳಿ ಅಭ್ಯರ್ಥಿಯನ್ನು ಬಹಳ ಸುಲಭವಾಗಿ ಗೆದ್ದು ಬೀಗುತ್ತಿದ್ದರು.

ಆದರೆ ಈ ಬಾರಿ ತಮ್ಮದೇ ಪಕ್ಷದ ನಾಯಕ ಬಿಜೆಪಿ ಪಕ್ಷಕ್ಕೆ ವಲಸೆ ಹೋಗಿ, ಖರ್ಗೆ ಅವರನ್ನು ಸೋಲಿಸಲು ಪಣತೊಟ್ಟಿದ್ದಾರೆ. ಈಗಾಗಲೇ ಹಲವಾರು ಸಮುದಾಯಗಳ ಬೆಂಬಲವನ್ನು ಹೊಂದಿರುವ ಉಮೇಶ್ ಜಾದವ್ ರವರು ಮಲ್ಲಿಕಾರ್ಜುನ ಖರ್ಗೆ ರವರಿಗೆ ಸೋಲು ತೋರಿಸುತ್ತಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಜನರು ಉಮೇಶ್ ಜಾದವ್ ರವರ ಪರವಾಗಿ ಧ್ವನಿ ಎತ್ತಿರುವುದು ಒಂದೆಡೆ ಆದರೆ ಈಗ ಮಲ್ಲಿಕಾರ್ಜುನ ಖರ್ಗೆ ಅವರ ಮತ ಬ್ಯಾಂಕ್ ಗಳಲ್ಲಿ ಒಂದಾದ ಮುಸ್ಲಿಂ ಸಮುದಾಯ ಅವರ ವಿರುದ್ಧ ತಿರುಗಿಬಿದ್ದಿದೆ.

ಹಲವಾರು ವರ್ಷಗಳಿಂದಲೂ ಮುಸ್ಲಿಮರನ್ನು ಕಡೆಗಣಿಸುತ್ತಾ ಬಂದಿರುವ ಮಲ್ಲಿಕಾರ್ಜುನ ಖರ್ಗೆ ರವರಿಗೆ ಮುಸ್ಲಿಮರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಖಿಲ ಭಾರತ ಮಿಲ್ಲಿ ಕೌನ್ಸಿಲ್‌ ಜಿಲ್ಲಾ ಘಟಕದ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೌದು ಸ್ವತಹ ಸಭೆಯ ಅಧ್ಯಕ್ಷತೆ ವಹಿಸಿದ್ದ  ಕರೀಂ ಉಲ್‌ ಹುಸೇನ್‌ ಅವರು ಮಾಜಿ ಸಚಿವ ಖಮರುಲ್ ಇಸ್ಲಾಮ್ ರವರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ತೊಂದರೆ ಕೊಟ್ಟಿದ್ದಾರೆ, ಹೇಗಿದ್ದರೂ ಮುಸ್ಲಿಂ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೀಳುತ್ತವೆ ಎಂದು ಭ್ರಮೆಯಲ್ಲಿ ಇಷ್ಟು ವರ್ಷ ರಾಜಕೀಯ ಮಾಡಿ ಮುಗಿಸಿದ್ದಾರೆ.

ಆದರೆ ಈ ಬಾರಿ ಪ್ರತಿಯೊಬ್ಬ ಮುಸ್ಲಿಮನು ವಿವೇಚನೆ ಬಳಸಿ ಮತ ಹಾಕಬೇಕು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಕ್ಕ ಪಾಠ ಕಲಿಸಲು ಈ ಬಾರಿ ಉಮೇಶ್ ಜಾದವ್ ರವರಿಗೆ ಮತ ನೀಡಿದರು ಪರವಾಗಿಲ್ಲ ಆದರೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ ಖರ್ಗೆ ರವರ ರಾಜಕೀಯ ಕೊನೆಗೊಳಿಸಲು ಸ್ವತಃ ಅಲ್ಲಾಹ್‌ ಅವರು ನಮ್ಮೊಂದಿಗೆ ಇದ್ದಾರೆ. ದೇವರ ಮೇಲೆ ಅಭಿಮಾನ ಇದ್ದರೆ ಖಂಡಿತವಾಗಿಯೂ ನಾವು ಈ ಕೆಲಸ ಮಾಡಬೇಕು ಎಂದು ಹೇಳಿದ ತಕ್ಷಣ ಸಭೆಯಲ್ಲಿ ಸೇರಿದ ಇನ್ನೂ ಹತ್ತು ಹಲವಾರು ಮುಸ್ಲಿಮರು ನಾಯಕರ ಮಾತಿಗೆ ಬೆಂಬಲ ವ್ಯಕ್ತಪಡಿಸಿದರು.

ಈ ಮೂಲಕ ಖರ್ಗೆ ಅವರ ಗೆಲುವು ಮತ್ತಷ್ಟು ಕಗ್ಗಂಟಾಗಿದ್ದು, ಸೋಲಿನ ಭೀತಿಯಿಂದ ಮಲ್ಲಿಕಾರ್ಜುನ ಖರ್ಗೆ ಕೋಲಾರ ನಗರಕ್ಕೆ ವಲಸೆ ಹೋಗುತ್ತಾರೆ ಎಂಬ ಮಾತು ಕೇಳಿಬಂದಿತ್ತಾದರೂ, ಅದು ನಿಜವಾದರೆ ಉತ್ತಮ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ .